Saqlain Mushtaq: ಈ ಬಾರಿ ಪಾಕ್ ಟೀಂ ಇಂಡಿಯಾಗೆ ತಕ್ಕ ಪಾಠ ಕಲಿಸಬೇಕು: ಭಾರತ ವಿರುದ್ಧ ನಾಲಿಗೆ ಹರಿಬಿಟ್ಟ ಮಾಜಿ ಸ್ಪಿನ್ನರ್

ಫೆಬ್ರವರಿ 23, ಭಾನುವಾರ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ, ಮೂರು ವಾರಗಳ ಹಿಂದೆ ಆನ್ಲೈನ್ಗೆ ಬಂದ ಕೆಲವೇ ನಿಮಿಷಗಳಲ್ಲಿ ಎಲ್ಲಾ ಟಿಕೆಟ್ಗಳು ಮಾರಾಟವಾಗುತ್ತವೆ. 2024 ರ ಟಿ20 ವಿಶ್ವಕಪ್ನ ಗುಂಪು ಹಂತದಲ್ಲಿ ಭಾರತ ಪಾಕಿಸ್ತಾನವನ್ನು ಆರು ರನ್ಗಳಿಂದ ಸೋಲಿಸಿದ ನಂತರ ಇದು ಎರಡು ಪ್ರತಿಸ್ಪರ್ಧಿಗಳ ನಡುವಿನ ಮೊದಲ ಮುಖಾಮುಖಿಯಾಗಲಿದೆ.
ಇದರ ಬೆನ್ನಲ್ಲೇ ಈ ಬಾರಿ ಪಾಕಿಸ್ತಾನ್ ಭಾರತಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಪಾಕ್ ತಂಡದ ಮಾಜಿ ಸ್ಪಿನ್ನರ್ ಸಖ್ಲೈನ್ ಮುಷ್ತಾಕ್ ಭಾರತ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾನೆ. ಭಾರತ ತಂಡವು ಪಾಕಿಸ್ತಾನದಲ್ಲಿ ಪಂದ್ಯಾವಳಿ ಆಡಲು ನಿರಾಕರಿಸಿದ್ದಾರೆ. ಇದರಿಂದಾಗಿ ಇಂದು ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಬಿಸಿಸಿಐನ ಇಂತಹ ಬೇಡಿಕೆಗಳು ತರ್ಕಬದ್ಧವಲ್ಲ. ಹೀಗಾಗಿ ಪಾಕ್ ಪಡೆ ಈ ಸಲ ಭಾರತ ತಂಡವನ್ನು ಸೋಲಿಸಿ ತಕ್ಕ ಪಾಠ ಕಲಿಸಬೇಕು ಸಖ್ಲೈನ್ ಮುಷ್ತಾಕ್ ಆಗ್ರಹಿಸಿದ್ದಾರೆ.
ಇದೇ ವೇಳೆ ಭಾರತೀಯ ರಾಯಭಾರ ಕಚೇರಿಯು ವೀಸಾ ನೀಡದಿರುವ ಘಟನೆಯನ್ನು ನೆನಪಿಸಿಕೊಂಡ ಸಖ್ಲೈನ್ ಮುಷ್ತಾಕ್, ಭಾರತದ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾನು ನ್ಯೂಝಿಲೆಂಡ್ ತಂಡದ ಬೌಲಿಂಗ್ ಕೋಚ್ ಆಗಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಭಾರತೀಯ ರಾಯಭಾರ ಕಚೇರಿಯು ವೀಸಾಗಾಗಿ ನನ್ನನ್ನು ತಿಂಗಳುಗಳ ಕಾಲ ಕಾಯುವಂತೆ ಮಾಡಿತ್ತು. ನಾನು ಮೂರು ತಿಂಗಳುಗಳ ಕಾಲ ಕಾದಿದ್ದೆ. ಆದರೆ ಅವರಿಂದ ನನಗೆ ಯಾವುದೇ ಉತ್ತರ ಸಿಕ್ಕಿರಲಿಲ್ಲ. ಹೀಗಾಗಿ ನಾನು ನ್ಯೂಝಿಲೆಂಡ್ ತಂಡದೊಡನೆ ಕಾರ್ಯ ನಿರ್ವಹಿಸಲು ಸಾಧ್ಯವಾಗಿರಲಿಲ್ಲ ಎಂದು ಸಖ್ಲೈನ್ ಮುಷ್ತಾಕ್ ಹೇಳಿದ್ದಾರೆ.
ಪಂದ್ಯದ ಸುತ್ತಲಿನ ಉತ್ಸಾಹವು ಈಗಾಗಲೇ ಎರಡೂ ದೇಶಗಳ ಅಭಿಮಾನಿಗಳಲ್ಲಿ ಉತ್ತುಂಗಕ್ಕೇರಿದೆ. ಪರಿಣಾಮವಾಗಿ, ರೋಹಿತ್ ಶರ್ಮಾ ನೇತೃತ್ವದ ತಂಡವು ತಮ್ಮ ಎಲ್ಲಾ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಡಿಯಲ್ಲಿ ಆಡಲಿದೆ. ಈ ನಿರ್ಧಾರವು ಅನೇಕ ಪಾಕಿಸ್ತಾನಿ ಅಭಿಮಾನಿಗಳನ್ನು ನಿರಾಶೆ ಮತ್ತು ಕೋಪಕ್ಕೆ ಒಳಪಡಿಸಿದೆ, ಇದು ಅವರ ಸೇಡು ತೀರಿಸಿಕೊಳ್ಳುವ ಬಯಕೆಯನ್ನು ಹೆಚ್ಚಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?






