ಸಾರ್ವಜನಿಕರೇ ಗಮನಿಸಿ: ಇಂದಿನಿಂದ ಬದಲಾಗಲಿವೆ ಈ ಎಲ್ಲಾ ನಿಯಮಗಳು!

ಇಂದಿನಿಂದ ಹಣಹಾಸು ವಿಚಾರದಲ್ಲಿ ಹಲವಾರು ಬದಲಾವಣೆಗಳು ಕಾಣಬಹುದು. ಅದರಲ್ಲೂ ಹಣಕಾಸು ನಿಯಮಗಳು ಸಾಕಷ್ಟು ಬದಲಾವಣೆಗಳು ಆಗಿವೆ. ಇವುಗಳಲ್ಲಿ ಮುಖ್ಯವಾಗಿ ಮ್ಯೂಚುಯಲ್ ಫಂಡ್ ಮತ್ತು ಡಿಮ್ಯಾಟ್ ಖಾತೆಗಳ ನಾಮನಿರ್ದೇಶನ (ನಾಮಿನೇಷನ್) ನಿಯಮಗಳು, LPG ಸಿಲಿಂಡರ್ ಬೆಲೆಗಳು,
FD ಬಡ್ಡಿ ದರಗಳು ಮತ್ತು ತೆರಿಗೆ ಸಂಬಂಧಿತ ಪ್ರಮುಖ ಬದಲಾವಣೆಗಳು ಆಗಿವೆ. ಇದರಿಂದ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇರುತ್ತದೆ. ಹಾಗಿದ್ರೆ ಮಾರ್ಚ್ ತಿಂಗಳ ಮೊದಲ ದಿನದಂದು ಯಾವೆಲ್ಲಾ ಬದಲಾವಣೆಗಳು ಜಾರಿಗೆ ಬರುತ್ತೆ ? ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ..
ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ
ಮಾರ್ಚ್ ತಿಂಗಳ ಮೊದಲ ದಿನ ಎಲ್ ಪಿಜಿ ಬೆಲೆಯಲ್ಲಿ ದರ ಏರಿಕೆಯಾಗುವ ಸಾಧ್ಯತೆ ಇದೆ. ಆಯಿಲ್ ಮಾರ್ಕೆಟಿಂಗ್ ಕಂಪನಿ , ಎಲ್ ಪಿಜಿ ದರವನ್ನು ಬದಲಾವಣೆಯನ್ನು ಮಾಡಬಹುದು. ಇದೇ ತಿಂಗಳ ಮೊದಲ ದಿನ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು 7 ರೂಪಾಯಿಗಳಷ್ಟು ಕಡಿಮೆ ಮಾಡಿತ್ತು. 14 ಕೆಜಿ ಗೃಹಬಳಕೆಯ ಅನಿಲ ಸಿಲಿಂಡರ್‌ಗಳ ಬೆಲೆಗಳು ದೇಶದಲ್ಲಿ ದೀರ್ಘಕಾಲದಿಂದ ಸ್ಥಿರವಾಗಿದ್ದು, ಮಾರ್ಚ್ ನಲ್ಲಿ ಬೆಲೆ ಇಳಿಕೆ ನಿರೀಕ್ಷೆ ಮಾಡ್ತಿರುವ ಜನಸಾಮಾನ್ಯರಿಗೆ ಸಂತಸದ ಸುದ್ದಿ ನೀಡುತ್ತಾ ಇಲ್ಲವೋ ಎಂಬುವುದನ್ನು ಕಾದುನೋಡಬೇಕಿದೆ.
ಯುಪಿಐ ಬಳಕೆಯಲ್ಲಿ ಬದಲಾವಣೆ
ಮಾರ್ಚ್ 1, 2025 ರಿಂದ UPI ವ್ಯವಸ್ಥೆಯಲ್ಲಿ ಬರುವ ಈ ಹೊಸ ಬದಲಾವಣೆವು ವಿಮಾ ಪ್ರೀಮಿಯಂ ಪಾವತಿ ಪ್ರಕ್ರಿಯೆಯನ್ನು ಸಾಕಷ್ಟು ಸುಲಭಗೊಳಿಸಲಿದೆ. ವಿಮಾ-ಎಎಸ್‌ಬಿ (Insurance-ASB) ಎಂಬ ಹೊಸ ವೈಶಿಷ್ಟ್ಯವನ್ನು ಸೇರಿಸಲಾಗುವುದರಿಂದ, ಜೀವ ಮತ್ತು ಆರೋಗ್ಯ ವಿಮಾ ಪಾಲಿತಾರರು ತಮ್ಮ ಪ್ರೀಮಿಯಂ ಪಾವತಿಯನ್ನು ಮುಂಚಿತವಾಗಿ ಹಣವನ್ನು ಬ್ಲಾಕ್ ಮಾಡಿ, ನಂತರ ಅವುಗಳನ್ನು ಸಹಜವಾಗಿ ಪಾವತಿಸಬಹುದಾಗಿದೆ.
ಮ್ಯೂಚುವಲ್ ಫಂಡ್ ಖಾತೆ ನಾಮಿನಿ ನಿಯಮದಲ್ಲಿ ಬದಲಾವಣೆ
ಮಾರ್ಚ್ 1, 2025 ರಿಂದ, ಮ್ಯೂಚುವಲ್ ಫಂಡ್ ಮತ್ತು ಡಿಮ್ಯಾಟ್ ಖಾತೆಗಳಲ್ಲಿ ನಾಮಿನಿಯನ್ನು ಸೇರಿಸುವ ನಿಯಮಗಳಲ್ಲಿ ಬದಲಾವಣೆ ಬರಲಿವೆ. ಈ ಹೊಸ ನಿಯಮದ ಪ್ರಕಾರ, ಒಬ್ಬ ಹೂಡಿಕೆದಾರರು ಗರಿಷ್ಠ 10 ನಾಮಿನಿಗಳನ್ನು ಸೇರ್ಪಡೆ ಮಾಡಬಹುದು. ಈ ಬದಲಾವಣೆಯಿಂದ ಹೂಡಿಕೆದಾರರಿಗೆ ತಮ್ಮ ಖಾತೆಗಳಲ್ಲಿ ನಾಮಿನಿಗಳನ್ನು ಹೆಚ್ಚಿಸಲು ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುತ್ತದೆ, ಆದರೆ ನಾಮಿನಿಯ ಎಲ್ಲಾ ವಿವರಗಳನ್ನು ಒದಗಿಸುವುದು ಅಗತ್ಯ ಎಂದು ಹೇಳಲಾಗಿದೆ. ಇದರಲ್ಲಿ ಹೂಡಿಕೆದಾರರು ನೀಡಬೇಕಾದ ವಿವರಗಳು ಯಾವುವು ಎಂದರೆ, ಫೋನ್ ಸಂಖ್ಯೆ, ಇಮೇಲ್ ವಿಳಾಸ, ವಿಳಾಸ, ಆಧಾರ್ ಸಂಖ್ಯೆ ಪ್ಯಾನ್ ಸಂಖ್ಯೆ, ಚಾಲನಾ ಪರವಾನಗಿ ದಾಖಲೆಗಳನ್ನು ಒದಗಿಸುವುದು ಇಲ್ಲಿ ಅಗತ್ಯವಾಗಿರುತ್ತದೆ.
ಎಫ್ ಡಿ (FD) ಬಡ್ಡಿದರಗಳಲ್ಲಿ ಬದಲಾವಣೆ
ಮಾರ್ಚ್‌ನಲ್ಲಿ ಬ್ಯಾಂಕ್ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ. 5 ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳು ಬದಲಾಗಬಹುದು ಎಂಬ ನಿರೀಕ್ಷೆ ಇದೆ. ಈ ಬದಲಾವಣೆ ಹೂಡಿಕೆದಾರರಿಗೆ ಹೂಡಿಕೆಯ ಆದಾಯವನ್ನು ಪರಿಣಾಮ ಬೀರುವುದರಿಂದ, ಇವುಗಳ ಮೇಲೆ ಗಮನವಿಡುವುದು ಮುಖ್ಯವಾಗುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?






