Yamuna Srinidhi: ಒಂದೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ದರ್ಶನ್ ಅಭಿಮಾನಿ ಔಟ್: ಇದು ರಾಂಗ್ ಡಿಸಿಷನ್ ಅಂತಿದ್ದಾರೆ ನೆಟ್ಟಿಗರು!

ಅಕ್ಟೋಬರ್ 7, 2024 - 12:00
 0  33
Yamuna Srinidhi: ಒಂದೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ದರ್ಶನ್ ಅಭಿಮಾನಿ ಔಟ್: ಇದು ರಾಂಗ್ ಡಿಸಿಷನ್ ಅಂತಿದ್ದಾರೆ ನೆಟ್ಟಿಗರು!

ಬಿಗ್ ಬಾಸ್' ಕನ್ನಡ ಸೀಸನ್ 11ರಲ್ಲಿ ಮೊದಲ ವಾರವೇ ಅಚ್ಚರಿಯ ಎಲಿಮಿನೇಷನ್ ಆಗಿದೆ. ಹೌದು, ಬಿಗ್ ಬಾಸ್‌ನ ಈ ಸೀಸನ್‌ನಲ್ಲಿ ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದ ಯಮುನಾ ಶ್ರೀನಿಧಿ ಅವರನ್ನು ಮನೆಯಿಂದ ಹೊರ ಹಾಕಲಾಗಿದೆ. ಇದು ನೆಟ್ಟಿಗರನ್ನು  ಕೆರಳಿಸಿದೆ. ಅಲ್ಲದೇ ಇದು ರಾಂಗ್ ಡಿಸಿಷನ್ ಎಂದು ಹೇಳುತ್ತಿದ್ದಾರೆ. ಮೊದಲ ವಾರ ನಾಮಿನೇಟ್ ಆಗಿದ್ದ ಅವರಿಗೆ ಉತ್ತಮವಾದ ವೋಟ್ಸ್ ಸಿಗದ ಕಾರಣ, ಅವರನ್ನು ಬಿಗ್ ಬಾಸ್ ಕನ್ನಡ 11 ಶೋನಿಂದ ಹೊರಕಳಿಸಲಾಗಿದೆ ಎನ್ನಲಾಗಿದೆ. 

ಬಿಗ್​ ಬಾಸ್​ ಕನ್ನಡ ಸೀಸನ್​ 11’ ರಿಯಾಲಿಟಿ ಶೋನಲ್ಲಿ ಮೊದಲ ವಾರದ ಎಲಿಮಿನೇಷನ್​ ಪ್ರಕ್ರಿಯೆ ಭಾನುವಾರ ನಡೆದಿದ್ದು, D BOSS ಅಭಿಮಾನಿ ಹಾಗೂ ನೃತ್ಯಗಾರ್ತಿ ಯಮುನಾ ಶ್ರೀನಿಧಿ ಅವರು ಒಂದೇ ವಾರದಲ್ಲಿ ಆಟ ಮುಗಿಸಿದ್ದಾರೆ.

ನಟಿ ಯಮುನಾ ಶ್ರೀನಿಧಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಿಂದ ಎಲಿಮಿನೇಟ್ ಆದ ಮೊದಲ ಸ್ಪರ್ಧಿ ಆಗಿದ್ದಾರೆ. ಫಸ್ಟ್​ ವೀಕ್​ನಲ್ಲಿಯೇ ಅವರು ಎಲಿಮಿನೇಟ್​ ಆಗುತ್ತಾರೆ ಎಂದು ಅವರ ಅಭಿಮಾನಿಗಳು ಊಹಿಸಿರಲಿಲ್ಲ. ಟ್ರೋಫಿ ಗೆಲ್ಲಬೇಕು ಎಂಬ ಆಸೆ ಇಟ್ಟುಕೊಂಡು ಬಂದಿದ್ದ ಯಮುನಾ ಶ್ರೀನಿಧಿ ಅವರಿಗೆ ನಿರಾಸೆ ಆಗಿದೆ.

ಸೂಪರ್ ಸಂಡೇ ವಿತ್ ಕಿಚ್ಚ ಎಪಿಸೋಡ್​ನಲ್ಲಿ ಖುಷಿ ಖುಷಿಯಾಗಿದ್ದ ಯಮುನಾಗೆ ಎಲಿಮಿನೇಷನ್​ ಬಿಗ್ ಶಾಕ್ ನೀಡಿತ್ತು. ಕೊನೆಯಲ್ಲಿ ಚೈತ್ರಾ, ಜಗದೀಶ್ ಸೇಫ್​ ಆಗ್ತಿದ್ದಂತೆ ಯಮುನಾ ದೊಡ್ಮನೆಯಿಂದ ಔಟ್ ಆದ್ರು. ಒಂದೇ ವಾರಕ್ಕೆ ಜರ್ನಿ ಮುಗಿಸಿದ ಬೇಸರ ಯಮುನಾ ಅವರ ಮುಖದಲ್ಲೂ ಇತ್ತು.

ಒಂದೇ ವಾರದಕ್ಕೆ ನಟಿ ಯಮುನಾ ಬಿಗ್ ಬಾಸ್​ ಮನೆಯಿಂದ ಹೊರಗೆ ಬಂದಿದ್ದಾರೆ. ಹೆಚ್ಚು ಆ್ಯಕ್ಟಿವ್ ಆಗಿರದ ಕಾರಣ, ವೋಟಿಂಗ್ ಕಡಿಮೆ ಬಂದಿರಬಹುದು ಎನ್ನಲಾಗ್ತಿದೆ. ಎಲಿಮಿನೇಷನ್ ಆದ ಬಳಿಕ ಯಮುನಾ ದೊಡ್ಮನೆಯಿಂದ ಹೊರಗೆ ಬಂದು ಕಿಚ್ಚನ ಮುಂದೆ ಎಲಿಮಿನೇಷನ್ ವಿಚಾರಕ್ಕೆ ಗರಂ ಆಗಿದ್ದಾರೆ.

ಎಲಿಮಿನೇಟ್ ಆದ ಸಿಟ್ಟಾಲ್ಲಿ ಒಂದೇ ವಾರಕ್ಕೆ ಹೊರಗೆ ಬರುವ ಕಳಪೆ ಸ್ಪರ್ಧಿ ನಾನಲ್ಲ ಎಂದಿದ್ದಾರೆ. ನಟಿ ಮಾತು ಕೇಳಿ ನೆಟ್ಟಿಗರು ಬಿಗ್ ಬಾಸ್ ಅಥವಾ ಪ್ರೇಕ್ಷಕರು ಯಾರ ನಿರ್ಧಾರ ಸರಿಯಲ್ಲ ಎಂದು ಹೇಳಿ ಅಂತ ಪ್ರಶ್ನೆ ಮಾಡ್ತಿದ್ದಾರೆ. ಮುಂದಿನ ವಾರ ಎಲಿಮಿನೇಟ್ ಆಗೋದು ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಯಮುನಾ, ಐಶ್ವರ್ಯಾ ಅಥವಾ ಮೋಕ್ಷಿತಾ ಎಂದಿದ್ದಾರೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow