Yash: ರಾವಣ ಪಾತ್ರ ಮಾಡಲು ನಟ ಯಶ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ..? ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ

ಫೆಬ್ರವರಿ 9, 2025 - 18:21
 0  14
Yash: ರಾವಣ ಪಾತ್ರ ಮಾಡಲು ನಟ ಯಶ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ..? ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ

ಬಾಲಿವುಡ್ನಲ್ಲಿರಾಮಾಯಣಸಿನಿಮಾ ನಿರ್ಮಾಣ ಆಗುತ್ತಿದೆ. ಪಾತ್ರವರ್ಗದಲ್ಲಿ ರಣಬೀರ್ ಕಪೂರ್​, ಸಾಯಿ ಪಲ್ಲವಿ ಜೊತೆ ಯಶ್ ಕೂಡ ಇದ್ದಾರೆ. ‘ರಾಕಿಂಗ್ ಸ್ಟಾರ್ಯಶ್ ಅವರು ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಬಾಲಿವುಡ್ನಲ್ಲಿ ಅವರಿಗೆ ಸಖತ್ ಬೇಡಿಕೆ ಇದೆ. ‘ಕೆಜಿಎಫ್ 2’ ಸಿನಿಮಾ ಬಳಿಕ ಅವರುಟಾಕ್ಸಿಕ್ಸಿನಿಮಾ ಶೂಟ್ನಲ್ಲಿ ಬ್ಯುಸಿ ಇದ್ದಾರೆ. ಚಿತ್ರಕ್ಕಾಗಿ ಫ್ಯಾನ್ಸ್ ಕಾದು ಕುಳಿತಿದ್ದಾರೆ. ಮುಂದಿನ ವರ್ಷ ಏಪ್ರಿಲ್ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಮಧ್ಯೆ ಅವರ ನಟನೆಯರಾಮಾಯಣಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಒಂದು ಕೇಳಿ ಬಂದಿದೆ. ರಾವಣ ಪಾತ್ರ ಮಾಡಲು ನಟ ಯಶ್ಭಾರೀ ಸಂಭಾವನೆಯನ್ನೇ ಪಡೆಯಲಿದ್ದಾರಂತೆ

150 ಕೋಟಿ ಸಂಭಾವನೆ ಪಡೆಯುತ್ತಿದ್ದಾರಾ ಯಶ್​?

ರಾಕಿಂಗ್ ಸ್ಟಾರ್ ಯಶ್ಕೆಜಿಎಫ್ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ಆಗಿದ್ದಾರೆ. ಯಶ್ ಮುಂದಿನ ಸಿನಿಮಾಗಾಗಿ ದೇಶದಾದ್ಯಂತ ಅಭಿಮಾನಿಗಳು  ಕಾಯುತ್ತಿದ್ದಾರೆ. ಕೆಜಿಎಫ್ ಸಿನಿಮಾ ಬಳಿಕ ಯಶ್ಡಿಮ್ಯಾಂಡ್ ಹಾಗೂ ಸಂಭಾವನೆ ಕೂಡ ಹೆಚ್ಚಾಗಿದೆ. ನಟ ಯಶ್ನಿತೇಶ್ ತಿವಾರಿ ಅವರ ರಾಮಯಣ ಸಿನಿಮಾದಲ್ಲಿ ನಟಿಸಲು 150 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ. ನ್ಯಾಷನಲ್ ಮಾಧ್ಯಮಗಳಲ್ಲಿ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ​

ರಾಮ  ರಣಬೀರ್​, ಸೀತೆ ಸಾಯಿ ಪಲ್ಲವಿ

ಚಿತ್ರದಲ್ಲಿ ಶ್ರೀರಾಮನ ಪಾತ್ರಕ್ಕೆ ರಣಬೀರ್ ಫಿಕ್ಸ್ ಆಗಿದ್ದು, ಸೀತೆಯ ಪಾತ್ರಕ್ಕೆ ಆಲಿಯಾ ಭಟ್ ಹೆಸರು ಕೇಳಿ ಬಂದಿತ್ತು. ಆದ್ರೆ ಚಿತ್ರತಂಡ ಆಲಿಯಾ ಬದಲು ಸೌತ್ ನಟಿಗೆ ಚಾನ್ಸ್ ಕೊಡಲು ಮುಂದಾಗಿದೆಯಂತೆ. ಸೀತಾದೇವಿ ಪಾತ್ರದಲ್ಲಿ ಸೌತ್ ಲೇಡಿ ಪವರ್ ಸ್ಟಾರ್ ಸಾಯಿ ಪಲ್ಲವಿ ನಟಿಸಲಿದ್ದಾರೆ ಎನ್ನಲಾಗಿದೆ. ಇನ್ನೂ ಅಧಿಕೃತ ಘೋಷಣೆಯಾಗದಿದ್ದರೂ, ಈಗಾಗಲೇ ಸಾಯಿ ಪಲ್ಲವಿಯನ್ನು ಚಿತ್ರತಂಡ ಸಂಪರ್ಕಿಸಿದೆ ಎಂದು ವರದಿಯಾಗಿದೆ.

 

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow