ಪಾಕ್ ತಂಡದ ಎಲ್ಲಾ ಆಟಗಾರರಿಗೆ ಶಿಕ್ಷೆ ವಿಧಿಸಿದ ICC: ಕಾರಣ!?

ಪಾಕ್ ತಂಡದ ಎಲ್ಲಾ ಆಟಗಾರರಿಗೆ ICC ಶಿಕ್ಷೆ ವಿಧಿಸಿದೆ. ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ ಏಕದಿನ ಸರಣಿಯಲ್ಲಿ 3-0 ಅಂತರದ ಹೀನಾಯ ಸೋಲು ಅನುಭವಿಸಿತು. ಇದಾದ ನಂತರ ಇಡೀ ತಂಡ ಸಾಕಷ್ಟು ಟೀಕೆಗೆ ಒಳಗಾಗುತ್ತಿದೆ. ಇದರ ಮಧ್ಯೆ ಪಾಕ್ ತಂಡದ ಎಲ್ಲಾ ಆಟಗಾರರಿಗೆ ಐಸಿಸಿ ದಂಡ ವಿಧಿಸಿದೆ ಎಂದು ವರದಿಯಾಗಿದೆ.
ವರದಿಯ ಪ್ರಕಾರ, ಕಿವೀಸ್ ವಿರುದ್ಧ ಮೂರನೇ ಏಕದಿನ ಪಂದ್ಯವನ್ನಾಡಿದ ಎಲ್ಲಾ ಆಟಗಾರರಿಗೆ ದಂಡ ವಿಧಿಸಲಾಗಿದೆ. ಅವರ ಪಂದ್ಯ ಶುಲ್ಕದಿಂದ ಶೇಕಡಾ 5 ರಷ್ಟು ಹಣವನ್ನು ಕಡಿತಗೊಳಿಸಲಾಗಿದೆ.
ವಾಸ್ತವವಾಗಿ, ಬೇ ಓವಲ್‌ನಲ್ಲಿ ನಡೆದ ಮೂರನೇ ಪಂದ್ಯದ ಸಮಯದಲ್ಲಿ ಪಾಕಿಸ್ತಾನ ತಂಡವು ಸ್ಲೋ ಓವರ್ ರೇಟ್ ನಿಯಮವನ್ನು ಉಲ್ಲಂಘಿಸಿದ್ದು, ಆನ್-ಫೀಲ್ಡ್ ಅಂಪೈರ್‌ಗಳಾದ ಕ್ರಿಸ್ ಬ್ರೌನ್ ಮತ್ತು ಪಾಲ್ ರೈಫಲ್, ಮೂರನೇ ಅಂಪೈರ್ ಮೈಕೆಲ್ ಗೌಫ್ ಮತ್ತು ನಾಲ್ಕನೇ ಅಂಪೈರ್ ವೇಯ್ನ್ ನೈಟ್ಸ್ ಪಾಕ್ ತಂಡ ಈ ನಿಯಮ ಮುರಿದಿರುವುದಾಗಿ ಆರೋಪಿಸಿದ್ದಾರೆ.
ಮೊಹಮ್ಮದ್ ರಿಜ್ವಾನ್ ನೇತೃತ್ವದ ತಂಡ ನಿಗದಿತ ಸಮಯದಲ್ಲಿ ಓವರ್ ಮುಗಿಸದಿರುವುದನ್ನು ಒಪ್ಪಿಕೊಂಡಿದೆ. ಹೀಗಾಗಿ ಐಸಿಸಿ ಎಲೈಟ್ ಪ್ಯಾನಲ್ ಮ್ಯಾಚ್ ರೆಫರಿ ಜೆಫ್ ಕ್ರೋವ್ ಪಂದ್ಯ ಆಡಿದ ಎಲ್ಲಾ ಪಾಕಿಸ್ತಾನಿ ಆಟಗಾರರಿಗೆ ದಂಡ ವಿಧಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






