ಪಾಕಿಸ್ತಾನದ ಪೊಲೀಸ್ ಆಫೀಸರ್ ಜೊತೆ 3ನೇ ಮದುವೆ ಸಜ್ಜಾಗಿರುವ ರಾಕಿ ಸಾವಂತ್..!

ರಾಖಿ ಸಾವಂತ್ ಈ ಹೆಸರನ್ನು ಕೇಳಿರದವರು ಯಾರೂ ಇಲ್ಲ. ಒಂದೆಲ್ಲಾ ಒಂದು ಕಾರಣಗಳಿಂದ ಸುದ್ದಿಯಲ್ಲಿರುವ ಈ ಬಾಲಿವುಡ್ ನಟಿಗೆ ವಿವಾದಗಳು ಎಂದರೆ ಬಹಳ ಇಷ್ಟ. ಅವರ ಬಟ್ಟೆ ಹಾಗೂ ಹೇಳಿಕೆಗಳು ಮಾತ್ರ ವಿವಾದಕ್ಕೆ ಕಾರಣವಾಗುವುದಿಲ್ಲ. ಅವರ ವೈಯಕ್ತಿಕ ಜೀವನ ಕೂಡ ಬಹಳ ಸದ್ದು ಮಾಡುತ್ತದೆ. ರಾಖಿ ಸಾವಂತ್ ಈಗಾಗಲೇ 2 ಬಾರಿ ಮದುವೆಯಾಗಿದ್ದು, ಆ ಎರಡೂ ಮದುವೆಗಳು ಮುರಿದುಬಿದ್ದಿದೆ. ಇದೀಗ ರಾಖಿ ಸಾವಂತ್ ಮೂರನೇ ಬಾರಿಗೆ ಮದುವೆಯಾಗಲು ಸಜ್ಜಾಗಿದ್ದಾರೆ. ಈ ಬಾರಿ ಅವರು ಪಾಕಿಸ್ತಾನದ ಹುಡುಗನ ಕೈ ಹಿಡಿಯಲಿದ್ದಾರೆ. ರಾಖಿ ಸಾವಂತ್ ಗೆ ಪಾಕಿಸ್ತಾನದಿಂದ ಮದುವೆ ಪ್ರಪೋಸಲ್ ಬಂದಿದ್ದು, ನಾನು ಪಾಕಿಸ್ತಾನದ ಸೊಸೆ ಆಗುತ್ತೇನೆ’ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಗುರುತಿಸಿಕೊಂಡಿರುವ ನಟ, ಮಾಡೆಲ್ ಡೊಡಿ ಖಾನ್ ಜೊತೆ ರಾಖಿ ಸಾವಂತ್ ಮದುವೆ ಆಗುವುದಾಗಿ ತಿಳಿಸಿದ್ದಾರೆ. ಡೊಡಿ ಖಾನ್ ಅವರು ಅಲ್ಲಿ ಪೊಲೀಸ್ ಅಧಿಕಾರಿ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಸ್ವತಃ ಡೊಡಿ ಖಾನ್ ಅವರು ರಾಖಿ ಸಾವಂತ್ಗೆ ಮದುವೆಯ ಪ್ರಪೋಸ್ ಮಾಡಿದ್ದಾರೆ ಎನ್ನಲಾಗಿದೆ.
ಈ ವಿಡಿಯೋವನ್ನು ರಾಖಿ ಸಾವಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ದಿಬ್ಬಣ ತೆಗೆದುಕೊಂಡು ಭಾರತಕ್ಕೆ ಬರಲೇ ಅಥವಾ ದುಬೈಗೆ ಬರಲೇ’ ಎಂದು ಡೊಡಿ ಖಾನ್ ಕೇಳಿದ್ದಾರೆ. ‘ಅವರೇ ನನ್ನ ಪ್ರೀತಿ. ನಾವಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ. ಅವರು ಪಾಕಿಸ್ತಾನದವರು. ನಾನು ಭಾರತದವಳು. ನಮ್ಮದು ಲವ್ ಮ್ಯಾರೇಜ್ ಆಗಲಿದೆ’ ಎಂದು ರಾಖಿ ಸಾವಂತ್ ಅವರು ಹೇಳಿದ್ದಾರೆ.
2019ರಲ್ಲಿ ಅವರು ರಿತೇಶ್ ಸಿಂಗ್ ಜೊತೆ ಮದುವೆ ಆಗಿದ್ದರು. ಆದರೆ ಕೇವಲ ಮೂರು ವರ್ಷಗಳಲ್ಲಿ ಅಂದರೆ 2022ರಲ್ಲಿ ವಿಚ್ಛೇದನ ಪಡೆದುಕೊಂಡರು. ಬಳಿಕ ಮೈಸೂರು ಮೂಲದ ಆದಿಲ್ ಖಾನ್ ಜೊತೆ ಮದುವೆ ನೆರವೇರಿತು. ಆ ಮದುವೆ ಕೂಡ ಕಿರಿಕ್ನಲ್ಲಿ ಅಂತ್ಯವಾಯಿತು.
ನಿಮ್ಮ ಪ್ರತಿಕ್ರಿಯೆ ಏನು?






