ನಟ ಪ್ರಥಮ್'ಗೆ ಬೆದರಿಕೆ ಹಾಕಿದ್ದ ಕೇಸ್: ರೌಡಿಶೀಟರ್ ಬೇಕರಿ ರಘು, ಯಶಸ್ವಿನಿ ಅರೆಸ್ಟ್
ದೊಡ್ಡಬಳ್ಳಾಪುರ: ನಟ ಪ್ರಥಮ್‌ಗೆ ಡ್ರ್ಯಾಗರ್ ತೋರಿಸಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ ರೌಡಿಶೀಟರ್ ಬೇಕರಿ ರಘು ಹಾಗೂ ಯಶಸ್ವಿನಿ ಅವರನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಕಳೆದ ತಿಂಗಳು ಪ್ರಕರಣದಲ್ಲಿ ಬಂಧನ ತಪ್ಪಿಸಲು ಇಬ್ಬರೂ ದೊಡ್ಡಬಳ್ಳಾಪುರ ಸಿವಿಲ್ ಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಪಡೆದಿದ್ದರು. ಜಾಮೀನಿನ ಷರತ್ತಿನ ಪ್ರಕಾರ, ಪ್ರತಿ ಭಾನುವಾರ ಬೇಕರಿ ರಘು ಠಾಣೆಗೆ ಹಾಜರಾಗಿ ಸಹಿ ಹಾಕಬೇಕಾಗಿತ್ತು. ಆದರೆ, ಈ ಷರತ್ತು ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಇಬ್ಬರನ್ನೂ ಮತ್ತೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇದಕ್ಕೂ ಮೊದಲು ಪೊಲೀಸರು ಅವರನ್ನು ಬಂಧಿಸಲು ತೆರಳಿದ್ದಾಗಲೇ, ಅವರು ಕೋರ್ಟ್ ಮೂಲಕ ಜಾಮೀನು ಪಡೆದುಕೊಂಡಿದ್ದರು. ಇದೀಗ ಷರತ್ತು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ರಘು ಹಾಗೂ ಯಶಸ್ವಿನಿ ಮತ್ತೆ ಪೊಲೀಸರ ವಶಕ್ಕೆ ಒಳಗಾಗಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?