ನಟ ದರ್ಶನ್-ಪವಿತ್ರಾ ಮದುವೆಯಾಗಿದ್ರಾ? 10 ವರ್ಷಗಳ ಹಿಂದಿನ ಫೋಟೋ ವೈರಲ್!
ಸಂದರ್ಭಕ್ಕೊಂದು ಹೊಸ ಸುದ್ದಿಯೇ ಸಿಕ್ಕಂತಾಗಿದೆ. ದರ್ಶನ್ ಹಾಗೂ ಪವಿತ್ರಾ ಗೌಡ ಒಟ್ಟಿಗೆ ವಾಸವಿದ್ದರು ಎಂಬ ಮಾತು ಹಲವಾರು ಬಾರಿ ಕೇಳಿಬಂದಿದ್ದರೂ, ಇವರಿಬ್ಬರು ವಿವಾಹವಾಗಿದ್ದಾರೆಯೇ ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೋಗಳೊಂದು ವೈರಲ್ ಆಗಿದ್ದು, ಚರ್ಚೆಗೆ ಹೊಸ ತಿರುವು ನೀಡಿದೆ.
‘ದರ್ಶನ್ ಪವಿತ್ರ ಮ್ಯಾರೇಜ್ ಫೋಟೋಸ್’ ಎಂಬ ಶೀರ್ಷಿಕೆಯಲ್ಲಿ ವೈರಲ್ ಆಗಿರುವ ರೀಲ್‌ನಲ್ಲಿ, ಪವಿತ್ರಾ ಗೌಡ ಕತ್ತಲ್ಲಿ ಅರಿಷಿಣದ ದಾರ ಧರಿಸಿರುವುದು ಕಾಣುತ್ತದೆ. ದರ್ಶನ್ ಹಾಗೂ ಪವಿತ್ರಾ ಇಬ್ಬರೂ ಸಾಂಪ್ರದಾಯಿಕ ಉಡುಪಿನಲ್ಲಿ ಮಿನುಗುತ್ತಾ, ನಗುನಗುತ್ತಾ ಸೆಲ್ಫಿ ತೆಗೆದುಕೊಂಡಿರುವ ಫೋಟೋಗಳು ಈಗ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿವೆ.
ನೆಟ್ಟಿಗರು ಈ ಚಿತ್ರಗಳನ್ನು ಶೇರ್ ಮಾಡುತ್ತಾ, “ಇದೇ ನೋಡಿ ದರ್ಶನ್–ಪವಿತ್ರಾ ಮದುವೆ ಫೋಟೋಸ್” ಎಂದು ಬಗೆಬಗೆಯ ಕ್ಯಾಪ್ಷನ್‌ಗಳೊಂದಿಗೆ ವೈರಲ್ ಮಾಡಿದ್ದಾರೆ. ಆದರೆ ಈ ಫೋಟೋಗಳು ನಿಜವಾಗಿಯೂ ಅವರ ಮದುವೆಯದ್ದಾ ಅಥವಾ ಯಾವುದೇ ಪೂಜೆ ಅಥವಾ ಫಂಕ್ಷನ್ ಸಂದರ್ಭದ್ದ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ದರ್ಶನ್ ಮತ್ತು ಪವಿತ್ರಾ ಗೌಡ ಅವರ ಸಂಬಂಧದ ಬಗ್ಗೆ ಹಿಂದಿನಿಂದಲೂ ಚರ್ಚೆಗಳು ನಡೆದಿದ್ದರೂ, ಇವರಿಬ್ಬರೂ ಈ ಬಗ್ಗೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.ಇದರ ಮಧ್ಯೆ, ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವರು ಆರೋಪಿಗಳಾಗಿ ಜೈಲಿನಲ್ಲಿ ಇದ್ದಾರೆ. ಇಂತಹ ಗಂಭೀರ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಈ ಫೋಟೋಗಳು ಹೊರಬಂದಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?