Seema Haider: ಪಾಕಿಸ್ತಾನದಿಂದ ಓಡಿ ಬಂದಿದ್ದ ಸೀಮಾ ಹೈದರ್ YouTube ಸಂಪಾದನೆ ಎಷ್ಟು ಗೊತ್ತಾ..?

ಪಾಕಿಸ್ತಾನದ ಸೀಮಾ ಹೈದರ್ ಉಭಯ ದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿದ್ದರು. ಗಂಡ, ನಾಲ್ವರು ಮಕ್ಕಳೊಂದಿಗೆ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದ ಸೀಮಾ ಹೈದರ್ ಭಾರತದ ಸಚಿನ್ ಮೀನಾ ಎಂಬಾತನ ಪ್ರೀತಿಯಲ್ಲಿ ಬಿದ್ದಿದ್ದಳು.
ಆನ್ಲೈನ್ನಲ್ಲಿ ಪಬ್ಜಿ ಗೇಮ್ ಆಡುವಾಗ ಇಬ್ಬರ ಮಧ್ಯೆ ಪ್ರೇಮ ಬೆಳೆದಿತ್ತು ಎಂದು ಹೇಳಿಕೊಂಡಿದ್ದರು. ಕೊನೆಗೆ ಪ್ರೇಮಿಗಾಗಿ ಗಂಡನನ್ನು ಬಿಟ್ಟು ನಾಲ್ವರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಸೀಮಾ, ಸಚಿನ್ರನ್ನು 2ನೇ ಮದುವೆಯಾಗಿದ್ದಳು.
ಆ ಬಳಿಕ ಸಚಿನ್ನನ್ನು ಮದುವೆ ಆಗಿದ್ದರು. ಹೊಸ ವರ್ಷವನ್ನು ಸ್ವಾಗತಿಸುವುದರ ಜೊತೆಗೆ ಸೀಮಾ ಹೈದರ್ ಕೂಡ ಒಂದು ಗುಡ್ ನ್ಯೂಸ್ ಕೊಟ್ಟಿದ್ದರು. ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಅವರು ಸಚಿನ್ ಮೀನಾ ಅವರೊಂದಿಗೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು.
ಈಗ ಗ್ರೇಟರ್ ನೋಯ್ಡಾದಲ್ಲಿರುವ ಕೃಷ್ಣ ಆಸ್ಪತ್ರೆಯಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಹಿಂದೆ ಸೀಮಾ ಹೈದರ್ ಅವರು 6 ತಿಂಗಳ ಗರ್ಭಿಣಿಯಾಗಿದ್ದಾಗ ಈ ವಿಚಾರವನ್ನು ಖುದ್ದು ಅವರೇ ಹೇಳಿಕೊಂಡಿದ್ದರು. ಸದ್ಯ ಸಚಿನ್ ಹಾಗೂ ಸೀಮಾ ಹೈದರ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಅದಲ್ಲದೆ ಸೀಮಾ ಹಾಗೂ ಸಚಿನ್ ಯುಟ್ಯೂಬ್ ಚಾನೆಲ್ ನಡೆಸ್ತಿದ್ದಾರೆ. ಇದೇ ಯುಟ್ಯೂಬ್ ಚಾನೆಲ್ ಇವರ ಗಳಿಕೆಗೆ ಈಗ ದಾರಿಯಾಗಿದೆ. ಯೂಟ್ಯೂಬ್‌ನಿಂದ ಸೀಮಾ ಅವರ ಮೊದಲ ಗಳಿಕೆ 45 ಸಾವಿರ ರೂ. ಆಗಿದೆ ಎಂದು ಹೇಳಲಾಗಿದೆ. ಇನ್ನು ಮತ್ತೊಂದು ವರದಿ ಪ್ರಕಾರ, ಪ್ರಸ್ತುತ ಅವರ ಮಾಸಿಕ ಗಳಿಕೆ 80 ಸಾವಿರದಿಂದ 1 ಲಕ್ಷ ರೂ. ವೆರೆಗೆ ಇದೆ. ಸೀಮಾ ಮತ್ತು ಅವರ ಪತಿ ಸಚಿನ್ ಮೀನಾ ಒಟ್ಟು 6 ಯೂಟ್ಯೂಬ್ ಚಾನಲ್ಗಳನ್ನು ಹೊಂದಿದ್ದಾರೆ. ಅವರ ಆದಾಯವು ಯೂಟ್ಯೂಬ್ ಜಾಹೀರಾತುಗಳು, ಸೂಪರ್ ಚಾಟ್, ದೇಣಿಗೆಗಳು, ಬ್ರ್ಯಾಂಡ್ ಪ್ರಚಾರಗಳು ಮತ್ತು ಪ್ರಾಯೋಜಿತ ವೀಡಿಯೊಗಳಿಂದ ಬರುತ್ತದೆ.
ಇನ್ನು ಸೀಮಾ ಪ್ರಕಾರ, 5 ನಿಮಿಷಗಳ ವಿಡಿಯೋದಲ್ಲಿ 1 ಸಾವಿರ ವಿಕ್ಷಣೆಗೆ ಸುಮಾರು 25 ರೂ. ಪಡೆಯುತ್ತೇನೆ. ಆದರೆ, ಯೂಟ್ಯೂಬ್ ಶಾರ್ಟ್ಸ್ನಲ್ಲಿ 1 ಲಕ್ಷ ವಿಕ್ಷಣೆಗೆ 1 ಡಾಲರ್(80-82 ರೂ.) ಆದಾಯ ಬರುತ್ತಿದೆ ಎಂದು ಹೇಳಿದ್ದಾರೆ. ಯೂಟ್ಯೂಬ್ ನಿಂದ ಉತ್ತಮ ಗಳಿಕೆ ಬರುತ್ತಿರುವುದರಿಂದ, ಸೀಮಾ ತನ್ನ ಪತಿ ಸಚಿನ್ಗೆ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಕೆಲಸ ಬಿಡುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






