Priyanka Chopra: ದೇಸಿ ಗರ್ಲ್ ಈಗ ದುಬಾರಿ ನಟಿ! ಮಹೇಶ್ ಬಾಬು ಜೊತೆಗಿನ ಸಿನಿಮಾಗೆ ಪ್ರಿಯಾಂಕಾ ಚೋಪ್ರಾ ಪಡೆದ ಸಂಭಾವನೆ ಎಷ್ಟು.?

ಫೆಬ್ರವರಿ 20, 2025 - 20:00
 0  18
Priyanka Chopra: ದೇಸಿ ಗರ್ಲ್ ಈಗ ದುಬಾರಿ ನಟಿ! ಮಹೇಶ್ ಬಾಬು ಜೊತೆಗಿನ ಸಿನಿಮಾಗೆ  ಪ್ರಿಯಾಂಕಾ ಚೋಪ್ರಾ ಪಡೆದ ಸಂಭಾವನೆ ಎಷ್ಟು.?

ಪ್ರಿಯಾಂಕಾ ಚೋಪ್ರಾ ಬಾಲಿವುಡ್ಗೆ ಕಾಲಿಟ್ಟು 25 ವರ್ಷಗಳೇ ಕಳೆದಿದೆ. 2000ರಲ್ಲಿ ವಿಶ್ವ ಸುಂದರಿಯಾಗಿ ಆಯ್ಕೆಯಾದ ನಂತರ, ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾಗೆ ಸೌತ್ ಸಿನಿಮಾ ಹಾಗೂ ಬಾಲಿವುಡ್ ಆಫರ್ಗಳು ಸಾಲು ಸಾಲಾಗಿ ಬಂದವು. ಬಾಲಿವುಡ್ನಲ್ಲಿ ನಟಿಸಲು ಪ್ರಾರಂಭಿಸಿದರು ಇದೀಗ ಪಿಗ್ಗಿ ಹಾಲಿವುಡ್ನಲ್ಲಿ ಚಿರಪರಿಚಿತ ಮುಖವಾಗಿದ್ದಾರೆ.
2002ರಲ್ಲಿ ತೆರೆಕಂಡ ತಮಿಳಿನ ತಮಿಳನ್ ಚಿತ್ರದ ಮೂಲಕ ಪ್ರಿಯಾಂಕಾ ಚೋಪ್ರಾ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. 2003ರಲ್ಲಿ ನಟ ತಬಾನ್ನ ಮೊದಲ ಬಾಲಿವುಡ್ ಚಿತ್ರದಲ್ಲಿ ನಟಿಸಿದರು. ನಂತರ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಾಯಕಿಯಾಗಿ ಬಾಲಿವುಡ್ನಲ್ಲಿ ಮಿಂಚಿದ್ದಾರೆ.

ಇದೀಗ ಇದೀಗ ಹಲವು ವರ್ಷಗಳ ಬಳಿಕ ಪ್ರಿಯಾಂಕಾ ಚೋಪ್ರಾ ಭಾರತೀಯ ಸಿನಿಮಾಕ್ಕೆ ಮರಳಿದ್ದಾರೆ. ಆದರೆ ಅದೂ ಸಹ ಬಾಲಿವಡ್ ಸಿನಿಮಾ ಅಲ್ಲ. ವಿಶೇಷವೆಂದರೆ ನಟಿಸುತ್ತಿರುವ ಹೊಸ ಸಿನಿಮಾ ಮೂಲಕ ಪ್ರಿಯಾಂಕಾ ಚೋಪ್ರಾ, ಭಾರತದ ಅತ್ಯಂತ ದುಬಾರಿ ನಟಿ ಎಂಬ ಖ್ಯಾತಿಗೆ ಪಾತ್ರವಾಗಿದ್ದಾರೆ. ಇದಕ್ಕೆಲ್ಲ ರಾಜಮೌಳಿ ಕಾರಣ.
ರಾಜಮೌಳಿ ನಿರ್ದೇಶಿಸಿ, ಮಹೇಶ್ ಬಾಬು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಮುಹೂರ್ತ ಕೆಲ ವಾರಗಳ ಹಿಂದಷ್ಟೆ ನಡೆದಿದ್ದು, ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಈ ಸಿನಿಮಾ ಪ್ರಾಜೆಕ್ಟ್ ಕನಿಷ್ಟ ಎರಡು ವರ್ಷವಾದರೂ ನಡೆಯಲಿದ್ದು, ಪ್ರಿಯಾಂಕಾ ಹಾಗೂ ಮಹೇಶ್ ಬಾಬು ಎರಡು ವರ್ಷ ಸಮಯವನ್ನು ಈ ಸಿನಿಮಾಕ್ಕಾಗಿ ಮೀಸಲಿಟ್ಟಿದ್ದಾರೆ.

ಈ ಸಿನಿಮಾದಲ್ಲಿ ನಟಿಸಲು ಪ್ರಿಯಾಂಕಾ ಚೋಪ್ರಾ ಭಾರಿ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ಈ ಸಿನಿಮಾಕ್ಕಾಗಿ ಪ್ರಿಯಾಂಕಾ ಚೋಪ್ರಾಗೆ ಬರೋಬ್ಬರಿ 30 ಕೋಟಿ ರೂಪಾಯಿ ಸಂಭಾವನೆ ನೀಡಲಾಗುತ್ತಿದೆಯಂತೆ. ಭಾರತದ ಇನ್ಯಾವುದೇ ನಟಿ ಒಂದು ಸಿನಿಮಾಕ್ಕಾಗಿ ಇಷ್ಟು ದೊಡ್ಡ ಸಂಭಾವನೆಯನ್ನು ಪಡೆದಿದ್ದಿಲ್ಲ. ಇದೇ ಕಾರಣಕ್ಕೆ ಪ್ರಿಯಾಂಕಾ ಚೋಪ್ರಾ, ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ನಟಿ ಎನಿಸಿಕೊಂಡಿದ್ದಾರೆ.

ರಾಜಮೌಳಿಯ ಈ ಹಿಂದಿನ ಸಿನಿಮಾ ‘ಆರ್ಆರ್ಆರ್’ನಲ್ಲಿ ನಟಿಸಿದ್ದ ಆಲಿಯಾ ಭಟ್ ಬರೋಬ್ಬರಿ 9 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಕೇವಲ ಕೆಲವೇ ದೃಶ್ಯಗಳು ಹಾಗೂ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳಲು ಆಲಿಯಾ ಭಟ್ಗೆ 9 ಕೋಟಿ ನೀಡಲಾಗಿತ್ತು. ಆಗ ಆಲಿಯಾ ಭಟ್, ಭಾರತದ ದುಬಾರಿ ನಟಿ ಎನಿಸಿಕೊಂಡಿದ್ದರು.
ಈಗ ಪ್ರಿಯಾಂಕಾ ಎಲ್ಲ ದಾಖಲೆಗಳನ್ನು ಒಂದೇ ಬಾರಿಗೆ ಮುರಿದು ಬಿಸಾಡಿದ್ದಾರೆ. ಅಂದಹಾಗೆ ದೀಪಿಕಾ ಪಡುಕೋಣೆ ಸಹ ಪ್ರತಿ ಸಿನಿಮಾಕ್ಕೆ 8 ಅಥವಾ ಒಂಬತ್ತು ಕೋಟಿ ಸಂಭಾವನೆ ಪಡೆಯುತ್ತಾರಂತೆ. ಆಲಿಯಾ ಭಟ್ ಸಹ 9 ಅಥವಾ 10 ಕೋಟಿ ಪಡೆಯುತ್ತಾರೆ. ಆದರೆ ಪ್ರಿಯಾಂಕಾ ಅವರೆಲ್ಲರಿಗಿಂತಲೂ ದುಪ್ಪಟ್ಟು ಮೊತ್ತವನ್ನು ಸಂಭಾವನೆಯಾಗಿ ಪಡೆದುಕೊಂಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow