ನೀವು ಬೆಳಿಗ್ಗೆ ಎದ್ದತಕ್ಷಣ ನೋಡಬೇಕಾದ ವಸ್ತುಗಳು ಯಾವುವು..? ಇಲ್ಲಿದೆ ನೋಡಿ ಮಾಹಿತಿ

ಫೆಬ್ರವರಿ 21, 2025 - 07:00
 0  33
ನೀವು ಬೆಳಿಗ್ಗೆ ಎದ್ದತಕ್ಷಣ ನೋಡಬೇಕಾದ ವಸ್ತುಗಳು ಯಾವುವು..? ಇಲ್ಲಿದೆ ನೋಡಿ ಮಾಹಿತಿ

 

 

 

 

 

 

ಬೆಳಗ್ಗೆ ಎದ್ದಾಕ್ಷಣದ ಸಮಯ ಅತ್ಯಂತ ಅಮೂಲ್ಯ. ಇದು ಇಡೀ ದಿನದ ಭವಿಷ್ಯವನ್ನೇ ಹಿಡಿದಿಟ್ಟುಕೊಂಡಿರುತ್ತೆ. ಹಾಸಿಗೆಯಿಂದ ಎದ್ದ ತಕ್ಷಣ ನಮ್ಮ ಮನಸ್ಸು ಯಾವ ಸ್ಥಿತಿಯಲ್ಲಿ ಇರುತ್ತದೆಯೋ ಅದು ಇಡೀ ದಿನವನ್ನು ನಿರ್ಧರಿಸುತ್ತದೆ. ಹೀಗಾಗಿ ದಿನದ ಆರಂಭ ಖುಷಿ, ಸಂತೋಷದಿಂದಾಗಬೇಕು. ಬೆಳಗಿನ ಸಮಯದಲ್ಲಿ, ನೀವು ಧನಾತ್ಮಕ ಶಕ್ತಿಯನ್ನು ಪಡೆಯುವಂತಹ ಕೆಲಸಗಳನ್ನು ಮಾಡಬೇಕು. ನೀವು ಸಕಾರಾತ್ಮಕ ಶಕ್ತಿಯೊಂದಿಗೆ ದಿನವನ್ನು ಪ್ರಾರಂಭಿಸಿದರೆ, ನಿಮ್ಮ ಇಡೀ ದಿನ ಅರ್ಥಪೂರ್ಣವಾಗುತ್ತದೆ ಎಂದು ನಂಬಲಾಗಿದೆ.

ಏನನ್ನು ನೋಡಬಾರದು? -ಬೆಳಗ್ಗೆ ಎದ್ದ ತಕ್ಷಣ ಗಂಡಸರು ಕೂದಲು ಹರಡಿಕೊಂಡ ಹೆಂಡತಿಯನ್ನು ನೋಡಬಾರದು. -ಹಣೆಯಲ್ಲಿ ಕುಂಕುಮ ಇರದ ಹೆಣ್ಣು ಮಕ್ಕಳ ಮುಖವನ್ನು ನೋಡಬಾರದು. -ಪ್ರಾಣಿಗಳು ಅದರಲ್ಲೂ ಕ್ರೂರ ಪ್ರಾಣಿಗಳ ಫೋಟೋವನ್ನು ನೋಡಲೇಬಾರದು. -ಚಪ್ಪಲಿ, ಪೊರಕೆಯನ್ನು ನೋಡಬಾರದು.

ಏನನ್ನು ನೋಡಬೇಕು? -ಗೋವಿನಲ್ಲಿ ಸಕಲ ದೇವಾನುದೇವತೆಗಳು ನೆಲೆಸಿರುತ್ತಾರೆ ಅನ್ನೋ ನಂಬಿಕೆ ಇದೆ. ಹೀಗಾಗೇ ಮುಂಜಾನೆ ನಾವು ಎದ್ದ ಕೂಡಲೇ ಗೋವಿನ ಮುಖ ನೋಡಿದ್ರೆ ಬಹಳ ಉತ್ತಮ. -ಗೋವನ್ನು ನೋಡೋದ್ರಿಂದ ಸಕಲ ದೇವರ ದರ್ಶನ ಮಾಡಿದ ಪುಣ್ಯ ದೊರೆಯುತ್ತೆ ಎನ್ನಲಾಗುತ್ತೆ. -ಕಣ್ಣಿಗೆ ಕಾಣುವ ಪ್ರತ್ಯಕ್ಷ ದೈವ ಸೂರ್ಯ. ಸೂರ್ಯನ ದರ್ಶನದಿಂದ ದಿನವಿಡೀ ನವಚೈತನ್ಯವಿರುತ್ತೆ. -ದೇವರುಗಳ ಫೋಟೋ, ನರಿ, ಕುದುರೆ, ತೆಂಗಿನಮರ, ಬಾಳೆಗಿಡ, ತುಳಸಿಗಿಡ, ಫಲ ನೀಡುವ ಯಾವುದೇ ನೀರು, ಮರಗಳನ್ನು ನೋಡಬಹುದು.

ಇವಿಷ್ಟೇ ಅಲ್ಲದೇ, ನಾವು ನಿತ್ಯ ಮುಂಜಾನೆ ಎದ್ದ ತಕ್ಷಣ ಭೂಮಿ ತಾಯಿಗೆ ನಮಸ್ಕರಿಸಬೇಕು. ಹಾಗೇ ತುಳಸಿ ಗಿಡಕ್ಕೂ ನಮಸ್ಕರಿಸೋದು ಶುಭ. ಇದ್ರಿಂದ ನಮ್ಮಲ್ಲಿ ಧನಾತ್ಮಕ ಅಂಶಗಳು ಜಾಗೃತವಾಗಿ ನಮ್ಮ ದಿನದ ಕಾರ್ಯಗಳೆಲ್ಲವೂ ಸುತೂತ್ರವಾಗಿ ಆಗಲಿವೆ ಎಂದು ಹೇಳಲಾಗುತ್ತೆ. ಹಾಗೇ ಅಗ್ನಿ, ಜಲವನ್ನು ನೋಡಿದ್ರೂ ಆ ದಿನ ಒಳ್ಳೆದಾಗುತ್ತೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಇದ್ಯಾವುದನ್ನು ಮಾಡಲು ಸಾಧ್ಯವಾಗದಿದ್ದರೆ ಬೆಳಗ್ಗೆ ಎದ್ದ ತಕ್ಷಣ ನಮ್ಮ ಅಂಗೈ ನೋಡಿದ್ರೂ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತೆ. ಯಾಕಂದ್ರೆ ನಮ್ಮ ಅಂಗೈಯಲ್ಲಿ ಲಕ್ಷ್ಮೀ, ಸರಸ್ವತಿ, ಗೌರಿ ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ. ಹೊಸತನದೊಂದಿಗೆ ದಿನ ಆರಂಭಿಸುವಾಗ ಋಣಾತ್ಮಕ ಅಂಶಗಳನ್ನು ನೋಡಿ ನಮ್ಮ ಮನಸ್ಸು ನಿರಾಶೆಗೊಳ್ಳದಿರಲಿ. ಧನಾತ್ಮಕ ಅಂಶಗಳನ್ನು ನೋಡಿ ಮನಸ್ಸು ನೆಮ್ಮದಿಯಿಂದ ದಿನ ಕಾರ್ಯಗಳಿಗೆ ಅಣಿಗೊಳ್ಳಲಿ ಅನ್ನೋ ಉದ್ದೇಶ ನಮ್ಮ ಹಿರಿಯರದ್ದು. ಹೀಗಾಗೇ ಈ ಆಚರಣೆಯನ್ನು ಅನಾದಿಕಾಲದಿಂದಲೂ ಆಚರಿಸಿಕೊಂಡು ಬರಲಾಗ್ತಿದೆ.

ಇದೆಲ್ಲಕ್ಕಿಂತ ಮುಖ್ಯವಾಗಿ ಬಹುತೇಕ ಜನರು ಈ ಕೆಲಗಿನ ಶ್ಲೋಕವನ್ನು ಬೆಳಗ್ಗೆ ಎದ್ದ ತಕ್ಷಣನೇ ಅಂಗೈ ನೋಡಿಕೊಂಡು ಹೇಳಿಕೊಳ್ಳುತ್ತಾರೆ. ಇದು ಅನಾದಿಕಾಲದಿಂದಲೂ ಪರಂಪರಾಗತವಾಗಿ ಆಚರಣೆಯಲ್ಲಿದೆ.

ಶ್ಲೋಕ ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಂ||

ಅರ್ಥ ಕೈಯ ಬೆರಳುಗಳ ತುದಿಯಲ್ಲಿ ಲಕ್ಷ್ಮೀಯು ನೆಲೆಸಿದ್ದಾಳೆ. ಕೈಯ ಮಧ್ಯೆ ಸರಸ್ವತಿ ಇದ್ದಾಳೆ. ಕೈಯ ಬುಡದಲ್ಲಿ ಗೋವಿಂದನು ನೆಲೆಸಿದ್ದಾನೆ. ಈ ಬೆಳಗಿನ ಸಮಯದಲ್ಲಿ ನಾನು ಅಂಗೈಯಲ್ಲಿ ಈ ದೇವರುಗಳ ದರ್ಶನ ಮಾಡುತ್ತೇನೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow