ಪ್ರಿಯಕರ ಜತೆ ಸೇರಿ ಪತಿಯನ್ನು ಕೊಂದು ಪೀಸ್ ಮಾಡಿ ಡ್ರಮ್‌ʼನಲ್ಲಿ ಸಿಮೆಂಟ್ ಸುರಿದು ಸೀಲ್ ಮಾಡಿದ್ದ ಪತ್ನಿ!

ಮಾರ್ಚ್ 19, 2025 - 22:00
 0  34
ಪ್ರಿಯಕರ ಜತೆ ಸೇರಿ ಪತಿಯನ್ನು ಕೊಂದು ಪೀಸ್ ಮಾಡಿ ಡ್ರಮ್‌ʼನಲ್ಲಿ ಸಿಮೆಂಟ್ ಸುರಿದು ಸೀಲ್ ಮಾಡಿದ್ದ ಪತ್ನಿ!

ಲಕ್ನೋ: ದಾಂಪತ್ಯಕ್ಕೆ ಕಾಲಿಡುವ ಪ್ರತಿಯೊಬ್ಬ ಹೆಣ್ಣು ಗಂಡ ಮಕ್ಕಳು ಸಂಸಾರ, ಸುಖ ಶಾಂತಿ ನೆಮ್ಮದಿಯಿಂದ ಇರಲಿ‌ ಅಂತ ಗಂಡನ ಕೈಹಿಡಿದು ಸಪ್ತಪದಿ ತುಳಿದು ಸುಖ ದುಖಃದಲ್ಲಿ‌ ಜೊತೆ ಇರುವೆ ಅಂತ ಅಂದುಕೊಳ್ಳೋದು ಸಹಜ. ಆದರೇ ಇಲ್ಲೊಬ್ಬ ಖತರ್ನಾಕ್  ಪಾಪಿ ಪತ್ನಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು, ದೇಹವನ್ನು ಪೀಸ್ ಪೀಸ್ ಮಾಡಿ, ಡ್ರಮ್‌ನಲ್ಲಿ ತುಂಬಿ ಸಿಮೆಂಟ್ ಹಾಕಿ ಮುಚ್ಚಿಟ್ಟಿರುವ ಘಟನೆ ಉತ್ತರಪ್ರದೇಶದ ಬ್ರಹ್ಮಪುರಿಯ ಇಂದಿರಾ ನಗರದಲ್ಲಿ ನಡೆದಿದೆ.

ಖಾಸಗಿ ಹಡಗು ಕಂಪನಿಯ ಉದ್ಯೋಗಿ ಸೌರಭ್ ರಜಪೂತ್(29) ಕೊಲೆಯಾದ ಪತಿ. ಮೃತ ಸೌರಭ್ ಮಾ. 4ರಂದು ನಾಪತ್ತೆಯಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಪೊಲೀಸರು ಅನುಮಾನದಿಂದ ಪತ್ನಿ ಮುಸ್ಕಾನ್(27)ನನ್ನ ವಿಚಾರಣೆ ನಡೆಸಿದ್ದರು. ಈ ವೇಳೆ ಆಕೆ ಪ್ರಿಯಕರ ಸಾಹಿಲ್(25) ಜೊತೆ ಸೇರಿ ಸೌರಭ್‌ನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.

ಮಾ. 4ರಂದು ಸೌರಭ್‌ನನ್ನ ಮುಸ್ಕಾನ್ ಹಾಗೂ ಸಾಹಿಲ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ನಂತರ ಆತನ ದೇಹವನ್ನು ಪೀಸ್ ಪೀಸ್ ಆಗಿ ಕತ್ತರಿಸಿ, ಡ್ರಮ್‌ನೊಳಗೆ ಹಾಕಿ ಸಿಮೆಂಟ್‌ನಿಂದ ಮುಚ್ಚಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.

ಕೊಲೆ ಮಾಡಿದ ಬಳಿಕ ಮುಸ್ಕಾನ್, ಸೌರಭ್‌ನ ಫೋನ್‌ನಿಂದ ಕುಟುಂಬಸ್ಥರಿಗೆ ಮೆಸೇಜ್ ಕಳುಹಿಸುವ ಮೂಲಕ ಪ್ರಕರಣದ ದಾರಿ ತಪ್ಪಿಸಲು ಪ್ರಯತ್ನಿದ್ದಳು. ಬಳಿಕ ಆಕೆ ಪ್ರಿಯಕರ ಸಾಹಿಲ್ ಜೊತೆ ಸುತ್ತಾಡಲು ತೆರಳಿದ್ದಳು. ಸದ್ಯ ಆರೋಪಿಗಳಾದ ಮುಸ್ಕಾನ್ ಹಾಗೂ ಸಾಹಿಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow