ಬೆಂಗಳೂರಿನಲ್ಲಿ ಹೆಣ್ಮಕ್ಕಳಿಗಿಲ್ಲ ಸೇಫ್ಟಿ: ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್..!

ಜೂನ್ 23, 2025 - 18:02
 0  25
ಬೆಂಗಳೂರಿನಲ್ಲಿ ಹೆಣ್ಮಕ್ಕಳಿಗಿಲ್ಲ ಸೇಫ್ಟಿ: ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್..!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕ್ರಿಮಿನಲ್ ಕೇಸ್ಗಳು ಹೆಚ್ಚಿತ್ತಿದೆ. ಜೊತೆಗೆ ಕಾಮುಕರ ಅಟ್ಟಹಾಸ ಮಿತಿ ಮೀರಿದೆ. ಒಂಟಿಯಾಗಿ ಹೆಣ್ಮುಕ್ಕಳು ಓಡಾಡೋದೆ ಕಷ್ಟ ಕಷ್ಟವಾಗಿದೆ. ಹೌದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಣ್ಮಕ್ಕಳಿಗೆ ಸುರಕ್ಷತೆಯೇ ಇಲ್ಲದಂತಾಗಿದೆ.

ಬಿಎಂಟಿಸಿ ಬಸ್, ಮೆಟ್ರೋ, ಮಾಲ್ಗಳಲ್ಲಿ ಹೆಣ್ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುವ ಕಾಮುಕರಿಗೆ ಕಡಿವಾಣ ಹಾಕುವವರಿಲ್ಲದಂತಾಗಿದೆ. ಇದೇ ರೀತಿಯ ಮತ್ತೊಂದು ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಮೈಲಸಂದ್ರ ಬಳಿಯಲ್ಲಿ ನಡೆದಿದೆ.

ರೇಣುಕಾ ಯಲ್ಲಮ್ಮ ಬಡಾವಣೆ ನಿವಾಸಿಯಾಗಿರುವ ಯುವತಿ ರವಿವಾರ ಸಂಜೆ 4 ಗಂಟೆ ಸುಮಾರಿಗೆ ದಿನಸಿ ತರಲು ಅಂಗಡಿಗೆ ಹೊರಟಿದ್ದಳು. ವೇಳೆ ಐದಾರು ಜನರು ಯುವಕರು ನಡುರಸ್ತೆಯಲ್ಲಿ ಯುವತಿಯನ್ನು ಅಡ್ಡ ಹಾಕಿದ್ದಾರೆ. ಬಳಿಕ, ಓರ್ವ ಯುವಕ ಯುವತಿಯ ಮೈಕೈ ಮುಟ್ಟಿ ಎಳೆದಾಡಿದ್ದಾರೆ. ಇದಕ್ಕೆ ಯುವತಿ ಪ್ರತಿರೋಧ ತೋರಿದ್ದಾಳೆ. ಆಗ, ಓರ್ವ ಯುವಕ ಯುವತಿ ಮೇಲೆ ಹಲ್ಲೆ ಮಾಡಿದ್ದಾನೆ.

ವೇಳೆ ಸ್ಥಳೀಯರು ಯುವತಿಯ ನೆರವಿಗೆ ಧಾವಿಸಿದ್ದಾರೆ. ನೆರವಿಗೆ ಧಾವಿಸಿದ ಸ್ಥಳೀಯರ ಮೇಲೂ ಯುವಕರು ಹಲ್ಲೆ ಮಾಡಿದ್ದಾರೆ. ಯುವತಿಯನ್ನು ಬಚಾವ್ಮಾಡಿ ಸ್ಥಳೀಯರು ಮನೆ ಬಳಿ ಕರೆದುಕೊಂಡು ಬಂದರೂ ಬಿಡದ ಯುವಕರು, ಆಕೆಯ ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ. ಯುವತಿ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬನ್ನೇರುಘಟ್ಟಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow