10 ಲಕ್ಷಕ್ಕಾಗಿ ಬ್ಲಾಕ್ ಮೇಲ್: ಇಬ್ಬರು ಯುವತಿಯರ ಮೇಲೆ ಭಾಸ್ಕರ್ ಪ್ರಸಾದ್​ ದೂರು!

ಸೆಪ್ಟೆಂಬರ್ 26, 2024 - 16:01
 0  13
10 ಲಕ್ಷಕ್ಕಾಗಿ ಬ್ಲಾಕ್ ಮೇಲ್: ಇಬ್ಬರು ಯುವತಿಯರ ಮೇಲೆ ಭಾಸ್ಕರ್ ಪ್ರಸಾದ್​ ದೂರು!

ಬೆಂಗಳೂರು:- 10 ಲಕ್ಷಕ್ಕಾಗಿ ಬ್ಲಾಕ್ ಮೇಲ್ ಮಾಡಿದ ಆರೋಪದಡಿ ಇಬ್ಬರು ಯುವತಿಯರ ಮೇಲೆ ಸಾಮಾಜಿಕ ಕಾರ್ಯಕರ್ತ ಭಾಸ್ಕರ್ ಪ್ರಸಾದ್​ ದೂರು ನೀಡಿದ್ದಾರೆ.  ಸಂಧ್ಯಾ, ಪವಿತ್ರಾ ನಾಗರಾಜ್ ಎಂಬುವವರ ವಿರುದ್ದ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ಪವಿತ್ರಾ ಎಂಬುವವರು ಚಳುವಳಿ ಹಾಗೂ ಹೋರಾಟಗಳಲ್ಲಿ ಭಾಸ್ಕರ್ ಪ್ರಸಾದ್​ಗೆ ಪರಿಚಯವಾಗಿದ್ದರು. ಸುಮಾರು 2 ವರ್ಷಗಳಿಂದ ಇವರಿಬ್ಬರ ನಡುವೆ ಮಾತುಕಥೆ ಇತ್ತು. ಕಳೆದ ಆ.8ರಂದು ಪವಿತ್ರಾ ಅವರು ವಾಟ್ಸಾಪ್ ಮೂಲಕ ಲೈಂಗಿಕ ಸಂಪರ್ಕಕ್ಕೆ ಒತ್ತಾಯ ಮಾಡಿದ್ದಾರೆ.

 ಮಾನಹರಣ ಮಾಡುವ ಉದ್ದೇಶದಿಂದ ಬೆದರಿಕೆ ಹಾಕಿ 10 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ನಂತರ ನೇರವಾಗಿ ಸಿಕ್ಕಾಗ ಅಪಪ್ರಚಾರ ಮಾಡಿ, ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಭಾಸ್ಕರ್ ಪ್ರಸಾದ್ ಅವರು ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ 10 ಲಕ್ಷ ಹಣ ನೀಡದಿದ್ದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow