ಸಿಎಂ ಬದಲಾವಣೆ ಹೇಳಿಕೆ: ಶಾಸಕ ರಂಗನಾಥ್, ಶಿವರಾಮೇಗೌಡಗೆ ಕಾಂಗ್ರೆಸ್ ನೋಟಿಸ್!
ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಕುಣಿಗಲ್ ಶಾಸಕ ಡಾ. ಎಚ್.ಡಿ. ರಂಗನಾಥ್ ಮತ್ತು ಮಂಡ್ಯದ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರಿಗೆ ಶಿಸ್ತುಪಾಲನಾ ಸಮಿತಿಯಿಂದ ಕಾರಣ ಕೇಳಿ ನೋಟಿಸ್ ಜಾರಿಗೊಂಡಿದೆ.
ಕಳೆದ ಎರಡು ದಿನಗಳ ಹಿಂದೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿ ಆಗುತ್ತಾರೆ ಎಂದು ಈ ಇಬ್ಬರು ನಾಯಕರಿಂದ ಮಾಧ್ಯಮಗಳಲ್ಲಿ ನೀಡಲ್ಪಟ್ಟ ಹೇಳಿಕೆಗಳು. ಈ ಹೇಳಿಕೆಗಳು ಎಐಸಿಸಿ ಮಾರ್ಗಸೂಚಿ ಉಲ್ಲಂಘಿಸಿದಷ್ಟೇ ಅಲ್ಲ, ಪಕ್ಷಕ್ಕೆ ಮುಜುಗರವಾಗುವಂತಿವೆ ಎಂದು ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಅಭಿಪ್ರಾಯಪಟ್ಟಿದೆ.
ಪಕ್ಷದ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಅವರು ನೋಟಿಸ್ ನೀಡಿದ್ದು, ಒಂದು ವಾರದೊಳಗಾಗಿ ತಮ್ಮ ಹೇಳಿಕೆಯ ಕುರಿತು ಸಮಜಾಯಿಷಿ ನೀಡುವಂತೆ ಸೂಚಿಸಿದ್ದಾರೆ.
ಎಐಸಿಸಿ ಹಿಂದೆಯೇ ಎಲ್ಲ ನಾಯಕರಿಗೂ, ಮುಖ್ಯಮಂತ್ರಿಯ ಬದಲಾವಣೆಗೆ ಸಂಬಂಧಿಸಿದ ಯಾವುದೇ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಬಾರದು ಎಂದು ಸ್ಪಷ್ಟ ಸೂಚನೆ ನೀಡಿತ್ತು.ಇದರಿಂದ ಈ ಘಟನೆ ಕಾಂಗ್ರೆಸ್ನ ಆಂತರಿಕ ರಾಜಕೀಯ ಹಾಗೂ ಪಕ್ಷದ ಇಮೇಜ್ ಮೇಲೆ ಪ್ರತಿಫಲ ಬೀರುವ ಸಾಧ್ಯತೆ ಇದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಹರಿದಾಡುತ್ತಿವೆ.
ನಿಮ್ಮ ಪ್ರತಿಕ್ರಿಯೆ ಏನು?