ರಾಜಧಾನಿಗೆ ಇದೆಂಥಾ ಖ್ಯಾತಿ: ವರದಕ್ಷಿಣೆ ಕಿರುಕುಳದಲ್ಲಿ ಬೆಂಗಳೂರು ಟಾಪ್!

ಅಕ್ಟೋಬರ್ 2, 2025 - 22:00
 0  9
ರಾಜಧಾನಿಗೆ ಇದೆಂಥಾ ಖ್ಯಾತಿ: ವರದಕ್ಷಿಣೆ ಕಿರುಕುಳದಲ್ಲಿ ಬೆಂಗಳೂರು ಟಾಪ್!

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರು ವರದಕ್ಷಿಣೆ ಕಿರುಕುಳದಲ್ಲಿ ‌ ಟಾಪ್ ಇದ್ದು, ಆಘಾತಕಾರಿ ವರದಿ ಬಹಿರಂಗವಾಗಿದೆ. ಈ ಆಘಾತಕಾರಿ ಮಾಹಿತಿಯನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಹಿರಂಗ ಪಡಿಸಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಇತ್ತೀಚಿನ ಮಾಹಿತಿ ಪ್ರಕಾರ,

2023ರಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ವರದಕ್ಷಿಣೆ ಸಂಬಂಧಿತ ಪ್ರಕರಣಗಳು ದಾಖಲಾಗಿರುವುದು ವರದಿಯಾಗಿದೆ. ಒಟ್ಟು 1,013 ದೂರುಗಳು ದಾಖಲಾಗಿದ್ದು, ಇದು ಇತರೆ 18 ಮೆಟ್ರೋ ನಗರಗಳಲ್ಲಿ ದಾಖಲಾದ ಕೇಸ್​​ಗಳಿಂತ ಹೆಚ್ಚಾಗಿದೆ ಎಂದು ಎಸ್​​ಸಿಆರ್​ಬಿ ತಿಳಿಸಿದೆ.

ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಪಾಟ್ನಾದಲ್ಲಿ 104 ಪ್ರಕರಣಗಳು ದಾಖಲಾದರೆ, ಲಕ್ನೋನಲ್ಲಿ ಕೇವಲ 19 ಪ್ರಕರಣಗಳು ದಾಖಲಾಗಿರುವುದು ವರದಿ ಆಗಿದೆ. ಆದರೆ ಬೆಂಗಳೂರಿನಲ್ಲಿ ಸಾವಿರಾರು ದೂರುಗಳು ದಾಖಲಾಗಿದೆ. ಹಾಗಂತ ಅಪರಾಧಗಳು ನಡೆಯುತ್ತಿವೆ ಎಂದು ಅರ್ಥವಲ್ಲ, ಬದಲಿಗೆ ಹೆಚ್ಚಿನ ಮಹಿಳೆಯರು ತಮಗಾದ ದೌರ್ಜನ್ಯದ ಬಗ್ಗೆ ದೂರು ನೀಡಲು ಮುಂದೆ ಬರುತ್ತಿದ್ದಾರೆ ಎಂಬುವುದನ್ನು ತೋರಿಸುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಹೇಳಿರುವುದಾಗಿ ವರದಿ ಮಾಡಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow