ರೇಣುಕಾಸ್ವಾಮಿ ಕೊಲೆ ಕೇಸ್: ನಟ ದರ್ಶನ್ & ಗ್ಯಾಂಗ್ ವಿರುದ್ಧ ನ.3 ರಂದು ದೋಷಾರೋಪ ನಿಗದಿ

ಅಕ್ಟೋಬರ್ 31, 2025 - 12:09
 0  10
ರೇಣುಕಾಸ್ವಾಮಿ ಕೊಲೆ ಕೇಸ್: ನಟ ದರ್ಶನ್ & ಗ್ಯಾಂಗ್ ವಿರುದ್ಧ ನ.3 ರಂದು ದೋಷಾರೋಪ ನಿಗದಿ

ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಉಳಿದ ಆರೋಪಿಗಳ ವಿರುದ್ಧ  ನವೆಂಬರ್ 3ರಂದು ದೋಷಾರೋಪ ನಿಗದಿಪಡಿಸಲು ತಿಳಿಸಿತು. ಇಂದು ನಡೆದ ವಿಚಾರಣೆಯಲ್ಲಿ ಎಲ್ಲಾ ಆರೋಪಿಗಳು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು.

ವಿಚಾರಣೆಯ ವೇಳೆ ಕೋರ್ಟ್ ನ್ಯಾಯಾಧೀಶರು ಇಂದೇ ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಲು ಉದ್ದೇಶಿಸಿದ್ದರು. ಆದರೆ, ದರ್ಶನ್ ಪರ ವಕೀಲ ಸುನೀಲ್ ಕುಮಾರ್ ಸ್ವಲ್ಪ ಸಮಯದ ಅವಧಿ ನೀಡುವಂತೆ ಮನವಿ ಮಾಡಿದರು. ಈ ಹಿನ್ನೆಲೆ ಕೋರ್ಟ್ ನವೆಂಬರ್ 3ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ನವಂಬರ್ 3ರಂದು ಜೈಲಿನಿಂದ ಹೊರಗೆ ಜಾಮೀನಿನ ಮೇಲೆ ಇರುವ ಆರೋಪಿಗಳು ಖುದ್ದಾಗಿ ಕೋರ್ಟ್‌ಗೆ ಹಾಜರಾಗುವುದು ಕಡ್ಡಾಯ ಎಂದು ಕೋರ್ಟ್ ಆದೇಶಿಸಿದೆ. ಹಾಜರಾಗದಿದ್ದರೆ, ಜಾಮೀನು ರಹಿತ ವಾರಂಟ್ (NBW) ಹೊರಡಿಸಲಾಗುವುದು ಎಂದು ನ್ಯಾಯಾಧೀಶರು ಎಚ್ಚರಿಸಿದ್ದಾರೆ.

ನವಂಬರ್ 3ರಂದು ಕೋರ್ಟ್, ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ 17 ಮಂದಿ ಆರೋಪಿಗಳ ವಿರುದ್ಧ ಯಾವ ಯಾವ ಸೆಕ್ಷನ್‌ಗಳಡಿ ವಿಚಾರಣೆ ನಡೆಯಬೇಕು ಎಂಬುದನ್ನು ನಿರ್ಧರಿಸಿ ದೋಷಾರೋಪಗಳನ್ನು ಅಧಿಕೃತವಾಗಿ ಹೊರಿಸಲಿವೆ.ನಟ ದರ್ಶನ್ ಹಾಗೂ ಪವಿತ್ರಾ ಗೌಡ ವಿರುದ್ಧ ಕೊಲೆ (IPC 302), ಹಲ್ಲೆ, ಕಿಡ್ನ್ಯಾಪ್ (IPC 364), ಸಾಕ್ಷ್ಯ ನಾಶ (IPC 201), ಷಡ್ಯಂತ್ರ (IPC 120B) ಸೇರಿದಂತೆ ಹಲವು ಆರೋಪಗಳನ್ನು ಹೊರಿಸುವ ಸಾಧ್ಯತೆ ಇದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow