ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ
ಬಾಗಲಕೋಟೆ: ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಉಚ್ಚಾಟನೆ ಮಾಡಲಾಗಿದೆ. ಹುನಗುಂದ ತಾಲೂಕಿನ ಕೂಡಲಸಂಗಮ ಪಂಚಮಸಾಲಿ ಪೀಠದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಟ್ರಸ್ಟ್ ಅಧ್ಯಕ್ಷರು ಹಾಗೂ ಸದಸ್ಯರು ಈ ನಿರ್ಧಾರ ಕೈಗೊಂಡಿದ್ದಾರೆ.
ಸಭೆಯಲ್ಲಿ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಕಾರ್ಯದರ್ಶಿ ನೀಲಕಂಠ ಅಸೂಟಿ ಸೇರಿದಂತೆ ಪ್ರಮುಖ ಸದಸ್ಯರು ಭಾಗಿಯಾಗಿದ್ದರು. ಸಭೆಯ ನಂತರ ನೀಲಕಂಠ ಅಸೂಟಿ ಅವರು ಸ್ವಾಮೀಜಿಯನ್ನು ಉಚ್ಚಾಟನೆ ಮಾಡಿದ ಕುರಿತು ಘೋಷಣೆ ಮಾಡಿದರು.
ಉಚ್ಚಾಟನೆಯ ಕಾರಣಗಳು
ಸ್ವಾಮೀಜಿ ಅವರು ದಾವಣಗೆರೆ ಹಾಗೂ ಇತರೆ ಕಡೆ ಸ್ವ ಆಸ್ತಿ ಮಾಡಿಕೊಂಡಿದ್ದಾರೆ.
ಲಿಂಗಾಯತ ತತ್ವವನ್ನು ಬಿಟ್ಟು ಹಿಂದುತ್ವ ಪರವಾಗಿ ನಡೆದುಕೊಂಡಿದ್ದಾರೆ.
ಟ್ರಸ್ಟ್ ಸದಸ್ಯರ ಮಾತುಗಳಿಗೆ ಸ್ಪಂದಿಸದೆ, ಪೀಠದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಿದ್ದಾರೆ.
ಸ್ವಾಮೀಜಿಯಾಗಿ ನಿಷ್ಪಕ್ಷಪಾತವಾಗಿರದೆ, ಒಂದು ಪಕ್ಷದ ಪರವಾಗಿ ಹೋಗುತ್ತಿದ್ದಾರೆ.
ಈ ಎಲ್ಲ ಕಾರಣಗಳನ್ನು ಉಲ್ಲೇಖಿಸಿ, “ಸ್ವಾಮೀಜಿಗಳು ಸ್ವಾಮೀಜಿಗಳಾಗಿ ಉಳಿದಿಲ್ಲ” ಎಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಅಂತಿಮವಾಗಿ ಅವರನ್ನು ಪೀಠಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?