ಆಯಿಲ್ ಇಂಡಿಯಾ ಲಿಮಿಟೆಡ್’ನಲ್ಲಿ ಉದ್ಯೋಗಗಳು ಖಾಲಿ..! ಇಂದೇ ಅರ್ಜಿ ಸಲ್ಲಿಸಿ

ಆಯಿಲ್ ಇಂಡಿಯಾ ಲಿಮಿಟೆಡ್ ತನ್ನ ವಿವಿಧ ವಿಭಾಗಗಳಲ್ಲಿ ಗ್ರೇಡ್ III, ಗ್ರೇಡ್ V ಮತ್ತು ಗ್ರೇಡ್ VII ಹುದ್ದೆಗಳಿಗೆ ಒಟ್ಟು 262 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ದೇಶದಾದ್ಯಂತ ಯುವಕರಿಗೆ ಉತ್ತಮ ಉದ್ಯೋಗಾವಕಾಶ ಒದಗಿಸುತ್ತಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಗಸ್ಟ್ 18, 2025 ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:
-
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ oil-india.com ಗೆ ಭೇಟಿ ನೀಡಿ
-
ಅರ್ಜಿ ಫಾರ್ಮ್ ಭರ್ತಿ ಮಾಡಿ
-
ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
-
ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿ
ಶೈಕ್ಷಣಿಕ ಅರ್ಹತೆ:
ಹುದ್ದೆಗಳ ಪ್ರಕಾರ ಶೈಕ್ಷಣಿಕ ಅರ್ಹತೆ ಭಿನ್ನವಾಗಿದ್ದು, ಪ್ರಮುಖ ಅರ್ಹತೆಗಳು ಈಂತಿವೆ:
-
ಗ್ರೇಡ್ III: 10ನೇ ತರಗತಿ ಪಾಸಾಗಿದ್ದು, ಅಗ್ನಿಶಾಮಕ ಮತ್ತು ಸುರಕ್ಷತೆಯಲ್ಲಿ ಡಿಪ್ಲೊಮಾ ಅಥವಾ ಪ್ರಮಾಣಪತ್ರ ಹೊಂದಿರಬೇಕು
-
ಗ್ರೇಡ್ V: 12ನೇ ತರಗತಿ ಅಥವಾ ಬಿ.ಎಸ್ಸಿ (ಸಂಬಂಧಿತ ಶಾಖೆ), ನರ್ಸಿಂಗ್ ಡಿಪ್ಲೊಮಾ
-
ಗ್ರೇಡ್ VII: ಹಿಂದಿ ಗೌರವ ಪದವಿ ಅಥವಾ ಅನುಕೂಲಕರ ಕ್ಷೇತ್ರದಲ್ಲಿ ಪದವಿ
ವಯೋಮಿತಿ:
-
ಕನಿಷ್ಠ: 18 ವರ್ಷ
-
ಗರಿಷ್ಠ: 38 ವರ್ಷ
-
ಎಸ್‌ಸಿ, ಎಸ್‌ಟಿ, ಒಬಿಸಿ, ಇಡಬ್ಲ್ಯೂಎಸ್ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯಿಸಲಿದೆ.
ಅರ್ಜಿಶುಲ್ಕ:
-
ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳು: ₹200
-
ಎಸ್‌ಸಿ/ಎಸ್‌ಟಿ/ಇಡಬ್ಲ್ಯೂಎಸ್/ಪಿಡಬ್ಲ್ಯೂಬಿಡಿ/ಮಾಜಿ ಸೈನಿಕರು: ಶುಲ್ಕವಿಲ್ಲ
ವೇತನ ಶ್ರೇಣಿ:
-
ಗ್ರೇಡ್ III: ₹26,600 – ₹90,000
-
ಗ್ರೇಡ್ V: ₹32,000 – ₹1,27,000
-
ಗ್ರೇಡ್ VII: ₹37,500 – ₹1,45,000
ಇದಲ್ಲದೆ, ಸರ್ಕಾರಿ ನೌಕರರಂತೆ ಸೌಲಭ್ಯಗಳು ಮತ್ತು ಭತ್ಯೆಗಳನ್ನು ಸಹ ನೀಡಲಾಗುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?






