ಇಂದು ಕಿಚ್ಚನ ಪಂಚಾಯಿತಿ: ಬಿಗ್‌ ಬಾಸ್‌ನಿಂದ ಇಂದೇ ಹೊರ ಬರ್ತಾರಾ ಈ ಸ್ಪರ್ಧಿ! ಯಾರಿಗೆ ಗೇಟ್ ಪಾಸ್!?

ಡಿಸೆಂಬರ್ 28, 2024 - 20:12
 0  15
ಇಂದು ಕಿಚ್ಚನ ಪಂಚಾಯಿತಿ: ಬಿಗ್‌ ಬಾಸ್‌ನಿಂದ ಇಂದೇ ಹೊರ ಬರ್ತಾರಾ ಈ ಸ್ಪರ್ಧಿ! ಯಾರಿಗೆ ಗೇಟ್ ಪಾಸ್!?

ಬಿಗ್ ಬಾಸ್ ಸೀಸನ್ 11ರ ಸೀಸನ್ ಅಂತ್ಯಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. 

ಈ ಮಧ್ಯೆ ಇಂದು ಕಿಚ್ಚನ ಪಂಚಾಯತಿ ನಡೆಯಲಿದ್ದು, ನಾಮಿನೇಟ್ ಆದ ಎಂಟು ಜನರಲ್ಲಿ ಯಾರಿಗೆ ಗೇಟ್ ಪಾಸ್ ಸಿಗಲಿದೆ ಎಂಬುವುದನ್ನು ಕಾದು ನೋಡಬೇಕಾಗಿದೆ. 

ಬಿಗ್‌ ಬಾಸ್‌ ನಲ್ಲಿ 13 ನೇ ವಾರದಲ್ಲಿ ಯಾರು ಎಲಿಮಿನೇಟ್‌ ಆಗ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ಮನೆಯಲ್ಲಿ ಸದ್ಯ ಹತ್ತು ಜನ ಉಳಿದುಕೊಂಡಿದ್ದಾರೆ.

ಈ ವಾರ ಮಂಜು, ಧನರಾಜ್, ಹನುಮಂತ, ಚೈತ್ರಾ ಕುಂದಾಪುರ, ಗೌತಮಿ ಜಾಧವ್, ಮೋಕ್ಷಿತಾ, ತ್ರಿವಿಕ್ರಂ ಹಾಗೂ ಐಶ್ವರ್ಯಾ ನಾಮಿನೇಟ್ ಆಗಿದ್ದಾರೆ. ಭವ್ಯಾ ಮತ್ತು ರಜತ್‌ ಸೇಫ್‌ ಆಗಿದ್ದಾರೆ

ಈ ವಾರ ನಾಮಿನೇಟ್‌ ಆದ ಎಂಟು ಮಂದಿ ಪೈಕಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಆಚೆ ಬರಬಹುದು ಎನ್ನಲಾಗುತ್ತಿದೆ. ಇನ್ನೂ ಕೆಲವೇ ವಾರಗಳು ಫಿನಾಲೆಗೆ ಬಾಕಿ ಇರುವ ಕಾರಣ ಡಬಲ್‌ ಎಲಿಮಿನೇಷನ್‌ ನಡೆಯಬಹುದು ಎನ್ನಲಾಗುತ್ತಿದೆ. ಈ ವಾರ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ

ಈ ಎಲ್ಲ ಊಹಾಪೋಹಗಳಿಗೂ ಕಿಚ್ಚ ಸುದೀಪ್‌ ವೀಕೆಂಡ್‌ ಎಪಿಸೋಡ್‌ನಲ್ಲಿ ಉತ್ತರ ಸಿಗಲಿದೆ. ಯಾರು ಆಚೆ ಬರ್ತಾರೆ ಯಾರು ಸೇಫ್‌ ಆಗ್ತಾರೆ ಎಂದು ಕಾದು ನೋಡಬೇಕಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow