ಕೈ ಮುಗಿದು ಕ್ಷಮೆ ಕೇಳಿದ ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟ ಯುವತಿ..!

ಬೆಂಗಳೂರು:- ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟ ಅನ್ಯ ರಾಜ್ಯದ ಯುವತಿ ಇದೀಗ ಕ್ಷಮೆ ಕೇಳಿದ್ದಾರೆ. ಮೊನ್ನೆಯಷ್ಟೇ ಉತ್ತರ ಭಾರತದ ಯುವತಿ ಬೆಂಗಳೂರಿಗರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಳು. ಬೆಂಗಳೂರಿಗರಿಗೆ ತಲೆಯಲ್ಲಿ ಬುದ್ಧಿ ಇಲ್ಲ ಎಂದು ದುರಹಂಕಾರ ಮಾತನ್ನು ಆಡಿದ್ದಳು. ಇದೀಗ ಆ ಯುವತಿ ಮತ್ತೊಂದು ವಿಡಿಯೋವನ್ನು ಶೇರ್ ಮಾಡಿ ಕರ್ನಾಟಕಕ್ಕೆ ಕ್ಷಮೆ ಕೇಳಿದ್ದಾಳೆ.
ಬೆಂಗಳೂರಿಗರಿಂದ ಯಾವುದೇ ಸಮಸ್ಯೆ ಇಲ್ಲ. ಐ ಲವ್ ಬೆಂಗಳೂರು, ಕೆಲಸ, ಅನ್ನ ಕೊಡ್ತಿರುವ ಜಾಗ ಇದು. ಕೆಲವೊಂದು ವಿಚಾರಗಳನ್ನು ಬದಲಾವಣೆ ಮಾಡಿಕೊಂಡರೆ ಒಳ್ಳೆದು. ಜೋರು ಮಳೆ ಬರುವಾಗ, ರಸ್ತೆಯಲ್ಲಿ ನೀರು ನಿಂತಿದ್ದಾಗ ವಾಹನವನ್ನ ನಿಧಾನವಾಗಿ ಓಡಿಸಿ, ಇಲ್ಲದಿದ್ರೆ ಸಮಸ್ಯೆಯಾಗುತ್ತೆ. ನನ್ ಬಟ್ಟೆ ಮೇಲೆ ನೀರು ಬಿದ್ರೆ ನನ್ ಹತ್ರ ಬೇರೆ ಬಟ್ಟೆ ಇದೆ. ನಾನು ಬದಲಾಗಿ ಬೇರೆ ಬಟ್ಟೆಯನ್ನ ಹಾಕಬಲ್ಲೆ. ಆದ್ರೆ ರಸ್ತೆ ಬದಿ ಕೆಲ ಬಡವರು ಇರ್ತಾರೆ. ರಸ್ತೆ ಪಕ್ಕ ಮಲಗಿಕೊಂಡು ಇರುತ್ತಾರೆ. ಅಂತವರಿಗೆ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






