ಟ್ರ್ಯಾಕ್ಟರ್ ನಲ್ಲಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ಕುಸುಮ: ತಾಂಡವ್ ಗಡಗಡ, ಟೆನ್ಷನ್ ನಲ್ಲಿ ಶ್ರೇಷ್ಠಾ!

ಸೆಪ್ಟೆಂಬರ್ 17, 2024 - 19:25
 0  13
ಟ್ರ್ಯಾಕ್ಟರ್ ನಲ್ಲಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ಕುಸುಮ: ತಾಂಡವ್ ಗಡಗಡ, ಟೆನ್ಷನ್ ನಲ್ಲಿ ಶ್ರೇಷ್ಠಾ!

ಖಾಸಗಿ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮಹಾ ತಿರುವು ಪಡೆದುಕೊಂಡಿದೆ. ಶ್ರೇಷ್ಠಾ  ಹಾಗೂ ತಾಂಡವ್ ಮದುವೆ ಎಪಿಸೋಡ್‌‌ ಪ್ರಸಾರ ಕಾಣುತ್ತಿದೆ. ದಿನೇ ದಿನೇ ಹಲವು ಟ್ವಿಸ್ಟ್‌‌ ಪಡೆದು ಸಾಗುತ್ತಿದೆ. 

ತಾಂಡವ್ ಮರು ಮದುವೆ ಆಗುತ್ತಿರೋದು ಕುಸುಮಾಗೆ ಗೊತ್ತಾಗಿದೆ ಎನ್ನೋದು ಪೂಜಾಗೆ ಗೊತ್ತಾಯ್ತು. ಟ್ರ್ಯಾಕ್ಟರ್ ತಗೊಂಡು ಪೂಜಾ, ಕುಸುಮಾ ಇಬ್ಬರೂ ಮಂಟಪಕ್ಕೆ ಡೈರೆಕ್ಟ್ ಎಂಟ್ರಿ ಕೊಟ್ಟಿದ್ದಾರೆ. ಇವರಿಬ್ಬರ ಎಂಟ್ರಿ ಮಾತ್ರ ಭರ್ಜರಿಯಾಗಿದೆ. 

ಇನ್ನು ತಾಂಡವ್, ಶ್ರೇಷ್ಠ ಮಾತ್ರ ಗಡಗಡ ನಡುಗಿ ಹೋಗಿದ್ದಾರೆ. ಇನ್ನೇನು ತಾಂಡವ್, ಶ್ರೇಷ್ಠ ಕುತ್ತಿಗೆಗೆ ತಾಳಿ ಕಟ್ತಾನೆ ಎನ್ನುವಷ್ಟರಲ್ಲಿ ಕುಸುಮಾ ಅಲ್ಲಿಗೆ ಹೋಗಿ ತಾಂಡವ್ ಕೆನ್ನೆಗೆ ಸರಿಯಾಗಿ ಏಟು ಕೊಟ್ಟಿದ್ದಾರೆ. ಮಂಟಪದಲ್ಲಿರುವ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ ಮದುವೆ ತಡೆದಿದ್ದಾರೆ.

ತಾಂಡವ್-ಶ್ರೇಷ್ಠ ಮದುವೆ ಆಗೋದಿಲ್ಲ ಎಂದು ಮೊದಲೇ ಹೇಳಲಾಗಿತ್ತು. ಅದರಂತೆ ಮದುವೆ ಆಗಲೇ ಇಲ್ಲ. ಇನ್ನು ಈ ವಿಚಾರ ಸದ್ಯಕ್ಕಂತೂ ಭಾಗ್ಯಗೆ ಗೊತ್ತಾಗಿಲ್ಲ. ಇನ್ನು ಒಂದಷ್ಟು ಎಪಿಸೋಡ್ ಆದ್ಮೇಲೆ ಈ ವಿಷಯ ಗೊತ್ತಾಗಲಿದೆ. ಕುಸುಮಾ ಹೇಗೆ ತಾಂಡವ್‌ನನ್ನು ಬೆಂಡೆತ್ತಾಳೆ ಎನ್ನೋದನ್ನು ಎಪಿಸೋಡ್ ನೋಡಿ ಖುಷಿಪಡಬೇಕು.

ತಾಯಿಗೆ ತನ್ನ ಮದುವೆ ವಿಷಯ ಗೊತ್ತಾಗಬಾರದು ಅಂತ ತಾಂಡವ್ ಏನೇನೋ ಸರ್ಕಸ್ ಮಾಡಿದ್ದನು. ಆದರೂ ಕೂಡ ಅದೆಲ್ಲವೂ ಫಲಿಸಲೇ ಇಲ್ಲ. ಇಷ್ಟುದಿನ ತಾಂಡವ್ ತಪ್ಪುಗಳಿಗೆ ಕುಸುಮಾ, ಅಷ್ಟಾಗಿ ಗಮನ ಕೊಡಲೇ ಇಲ್ಲ. ಈಗ ತನ್ನ ಮಗ, ತಾನು ಹೆತ್ತಿದ ಮಗ ಇಂಥ ದೊಡ್ಡ ತಪ್ಪನ್ನು ಮಾಡುತ್ತಿದ್ದಾನೆ ಅಂತ ತಿಳಿದು ಬಹಳ ಬೇಸರ ಮಾಡಿಕೊಂಡಿದ್ದಾಳೆ.

ಈ ಮದುವೆ ನಿಂತ ನಂತರ ಮತ್ತೆ ತಾಂಡವ್-ಶ್ರೇಷ್ಠ ಮದುವೆ ಆಗುವ ಪ್ರಯತ್ನ ಮಾಡ್ತಾರಾ? ಇಲ್ಲವಾ? ಅಂತ ಕಾದು ನೋಡಬೇಕಿದೆ. ಇನ್ನು ಈ ವಿಷಯ ಭಾಗ್ಯಾಳಿಗೆ ಗೊತ್ತಾದ ನಂತರ ಏನು ಮಾಡ್ತಾಳೆ ಅಂತ ಕಾದು ನೋಡಬೇಕಿದೆ. ಅಂದಹಾಗೆ ಈ ಬಾರಿ ಕೂಡ ಶ್ರೇಷ್ಠ ಸೋತಿದ್ದಾಳೆ. ಸೋತ ಶ್ರೇಷ್ಠ ಏನು ಮಾಡ್ತಾಳೆ ಎನ್ನೋದು ದೊಡ್ಡ ಕುತೂಹಲ ಇರುವ ವಿಷಯವಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow