ಥೂ ಅವನು ನಿತ್ಯ ಸ್ನಾನ ಮಾಡಲ್ಲ, ಆತನೊಂದಿಗೆ ಬಾಳಲಾರೆ: ಮದುವೆಯಾದ 1 ತಿಂಗಳಲ್ಲೇ ಗಂಡನಿಂದ ಡಿವೋರ್ಸ್ ಕೇಳಿದ ಹೆಂಡತಿ!

ಸೆಪ್ಟೆಂಬರ್ 17, 2024 - 20:05
 0  17
ಥೂ ಅವನು ನಿತ್ಯ ಸ್ನಾನ ಮಾಡಲ್ಲ, ಆತನೊಂದಿಗೆ ಬಾಳಲಾರೆ: ಮದುವೆಯಾದ 1 ತಿಂಗಳಲ್ಲೇ ಗಂಡನಿಂದ ಡಿವೋರ್ಸ್ ಕೇಳಿದ ಹೆಂಡತಿ!

ಉತ್ತರ ಪ್ರದೇಶ:- ಗಂಡ ಹೆಂಡತಿ ಸಂಬಂಧ ಅಂದ್ರೆ ಬಿಡಿಸಲಾಗದ ಅನುಬಂಧ ಅಂತ ಹೇಳ್ತಾರೆ. ಆದ್ರೆ ಇತ್ತೀಚೆಗೆ ಅದೆಲ್ಲಾ ಗಾದೆ ಮಾತಿಗೆ ಮಾತ್ರ ಸೀಮಿತ ಆಗ್ಬಿಟ್ಟಿದೆ ಮರ್ರೆ. ಹಿಂದೆಲ್ಲಾ ಎಷ್ಟೇ ಕಷ್ಟ ನೋವು ಇದ್ದರೂ ಮಹಿಳೆಯರಿಗೆ ತಮ್ಮ ಪತಿ ಸೇವೆಯನ್ನು ಎಂದೂ ಕೈ ಬಿಡುತ್ತಿರಲಿಲ್ಲ. ಆದರೆ ಇತ್ತೀಚೆಗೆ ಸಣ್ಣ ಪುಟ್ಟ ವಿಚಾರಕ್ಕೂ ಡಿವೋರ್ಸ್ ಮೆಟ್ಟಿಲೇರುತ್ತಿದ್ದಾರೆ. 

ಅದಕ್ಕೆ ತಾಜಾ ಉದಾಹರಣೆ ಎಂಬಂತೆ ಮಹಿಳೆಯೊಬ್ಬರು ತನ್ನ ಪತಿರಾಯ ದಿನಾಲೂ ಸ್ನಾನ ಮಾಡೊಲ್ಲ ಎಂಬ ವಿಚಾರಕ್ಕೆ ಮದುವೆಯಾದ 40 ದಿನಕ್ಕೆ ತನ್ನ ಗಂಡನಿಂದ ಡಿವೋರ್ಸ್‌ ಕೇಳಿದ ಘಟನೆ ಜರುಗಿದೆ. 

ಈ ವಿಚಿತ್ರ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದ್ದು, ತನ್ನ ಪತಿ ದಿನಾಲೂ ಸ್ನಾನ ಮಾಡೊಲ್ಲ ಎಂಬ ವಿಚಾರವನ್ನು ತಿಳಿದ ಮಹಿಳೆಯೊಬ್ಬರು ಮದುವೆಯಾದ 40 ದಿನಕ್ಕೆ ವಿಚ್ಛೇದನ ಕೋರಿ ಕೌಟುಂಬಿಕ ಸಲಹಾ ಕೇಂದ್ರದ ಮೆಟ್ಟಿಲೇರಿದ್ದಾರೆ. 

ಈ ಮಹಿಳೆಯ ಗಂಡ ತಿಂಗಳಿಗೆ ಕೇವಲ ಒಂದು ಅಥವಾ ಎರಡು ಬಾರಿ ಮಾತ್ರ ಸ್ನಾನ ಮಾಡುತ್ತಿದ್ದು, ಆತನ ಮೈಯೆಲ್ಲಾ ದುರ್ವಾಸನೆಯಿಂದ ಕೂಡಿರುತ್ತದೆ. ಹಾಗಾಗಿ ದೇಹ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲಾಗದ ಇಂತಹ ವ್ಯಕ್ತಿಯ ಜೊತೆ ನಾನು ಬಾಳಲಾರೆ ಎಂದು ಮಹಿಳೆ ಹೇಳಿಕೊಂಡಿದ್ದಾರಂತೆ. ಈ ಬಗ್ಗೆ ಕೌಟುಂಬಿಕ ಸಲಹಾ ಕೇಂದ್ರದ ಸಲಹೆಗಾರರು ಮಹಿಳೆಯ ಪತಿ ರಾಜೇಶ್‌ನನ್ನು ಪ್ರಶ್ನಿಸಿದಾಗ ಆತ ʼನಾನು ತಿಂಗಳಿಗೆ ಒಂದು ಅಥವಾ ಎರಡು ಬಾರಿ ಮಾತ್ರ ಸ್ನಾನ ಮಾಡುತ್ತೇನೆ ಮತ್ತು ವಾರಕ್ಕೊಮ್ಮೆ ಸ್ವಲ್ಪ ಗಂಗಾ ಜಲವನ್ನು ದೇಹಕ್ಕೆ ಸಿಂಪಡಿಸುತ್ತೇನೆ ಎಂದು ಹೇಳಿದ್ದಾನೆ

ರಾಜೇಶ್‌ ಮದುವೆಯಾದ ಬಳಿಕ ತನ್ನ ಪತ್ನಿಯ ಒತ್ತಾಯಕ್ಕೆ ಮಣಿದು ಕೇವಲ 6 ಬಾರಿ ಮಾತ್ರ ಸ್ನಾನ ಮಾಡಿದ್ದು, ಈತನ ಈ ಅಭ್ಯಾಸಕ್ಕೆ ಬೇಸತ್ತ ಮಹಿಳೆ ತನ್ನ ತವರು ಮನೆ ಸೇರಿದ್ದಾರೆ. ನಂತರ ಮಹಿಳೆಯ ಕುಟುಂಬ ಸದಸ್ಯರು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ರಾಜೇಶ್‌ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಹೀಗೆ ಮಾತುಕತೆಗಳು, ಕೌನ್ಸಿಲಿಂಗ್‌ ನಡೆದು ರಾಜೇಶ್‌ ತನ್ನ ನೈರ್ಮಲ್ಯವನ್ನು ಸುಧಾರಿಸಿಲು ಪ್ರತಿದಿನ ಸ್ನಾನ ಮಾಡುವುದಾಗಿ ಒಪ್ಪಿಕೊಂಡಿದ್ದಾನೆ. ಹೀಗಿದ್ರೂ ಆ ಮಹಿಳೆ ಈತನ ಜೊತೆಗೆ ಬಾಳಲಾರೇ ಎಂದು ಪಟ್ಟು ಹಿಡಿದಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow