IPL 2025: RCBಗೆ ತವರಲ್ಲಿ ಮೊದಲ ಗೆಲುವು: ರೋಚಕ ಪಂದ್ಯದ ಬಗ್ಗೆ ಕ್ಯಾಪ್ಟನ್ ರಜತ್ ಹೇಳಿದ್ದೇನು..?

ಎಪ್ರಿಲ್ 25, 2025 - 10:46
 0  14
IPL 2025: RCBಗೆ ತವರಲ್ಲಿ ಮೊದಲ ಗೆಲುವು: ರೋಚಕ ಪಂದ್ಯದ ಬಗ್ಗೆ ಕ್ಯಾಪ್ಟನ್ ರಜತ್ ಹೇಳಿದ್ದೇನು..?

ಐಪಿಎಲ್ 2025ರಲ್ಲಿ ಆರ್ಸಿಬಿ ತನ್ನ ಮನೆ ಮೈದಾನವಾದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಗೆಲುವನ್ನು ಸಾಧಿಸಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ 11 ರನ್ಗಳ ರೋಚಕ ಜಯ ಸಾಧಿಸಿದ ಆರ್ಸಿಬಿಗೆ ಲೀಗ್ನಲ್ಲಿ ಇದು 6ನೇ ಗೆಲುವಾಗಿದೆ. ಕೊಹ್ಲಿ ಮತ್ತು ಪಡಿಕಲ್ ಅವರ ಅದ್ಭುತ ಜೊತೆಯಾಟ ಮತ್ತು ಬೌಲರ್ಗಳ ಕರಾರುವಕ್ಕಾದ ದಾಳಿಯಿಂದ ತಂಡಕ್ಕೆ ಗೆಲುವು ದೊರಕಿತು.

ಇನ್ನೂ ಪಂದ್ಯ ಗೆದ್ದ ಖುಷಿಯಲ್ಲಿ ಮಾತನಾಡಿರುವ ಕ್ಯಾಪ್ಟನ್ ರಜತ್ ಪಾಟೀದಾರ್, ಗೆಲುವು ನಮಗೆ ತುಂಬಾ ಅಗತ್ಯವಾಗಿತ್ತು. ಇಂದು ವಿಕೆಟ್ ವಿಭಿನ್ನವಾಗಿತ್ತು. 10ನೇ ಓವರ್ ನಂತರ ನಮ್ಮ ಬೌಲರ್ಗಳು ಕಂಟ್ರೋಲ್ಗೆ ತಂದರು. ಗೆಲುವಿನ ಕ್ರೆಡಿಟ್ ಬೌಲರ್ಗಳಿಗೆ ಸಲ್ಲುತ್ತದೆ. ಅವರು ಧೈರ್ಯ ಅದ್ಭುತವಾಗಿತ್ತು.

ರಾಜಸ್ಥಾನ್ ರಾಯಲ್ಸ್​, ಆರಂಭದಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ನಾವು ವಿಕೆಟ್ಗಳನ್ನು ಹುಡುಕುತ್ತಿದ್ದೆವು. ವಿಕೆಟ್ ಬಿದ್ದಾಗ ಮಾತ್ರ ರನ್​​ ಓಟಕ್ಕೆ ಬ್ರೇಕ್ ಹಾಕಬಹುದು. ನಮ್ಮಲ್ಲಿ ಉತ್ತಮ ನಾಯಕರ ತಂಡವಿದೆ. ಅವರ ಇನ್ಪುಟ್ಗಳು ಬಹಳಷ್ಟು ಸಹಾಯ ಮಾಡುತ್ತವೆ ಎಂದರು.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow