Pahalgam Terror Attack: ಅಮಾಯಕರ ಜೀವ ತೆಗೆದ ಉಗ್ರರ ಮನೆಗಳನ್ನು ಧ್ವಂಸ ಮಾಡಿದ ಸೇನೆ..!

ಪಹಲ್ಗಾಂವ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತದಲ್ಲಿ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಜನರಿಂದ ಭಾರಿ ಒತ್ತಾಯಗಳು ಕೇಳಿ ಬರುತ್ತಿದೆ. ಇನ್ನು ಈ ದಾಳಿಯಿಂದ ಭೂಲೋಕದ ಸ್ವರ್ಗವೆಂದೇ ಕರೆಯಲ್ಪಡುವ ಕಾಶ್ಮೀರವು ಕ್ಷಣಮಾತ್ರದಲ್ಲಿ ಭಯಾನಕ ರೂಪವನ್ನು ಪಡೆದುಕೊಂಡಿತು. ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ಭೀಕರ ದಾಳಿ ವಿಡಿಯೋಗಳನ್ನು ಕಂಡು ಇಡೀ ದೇಶವೇ ಬೆಚ್ಚಿ ಬಿದ್ದಿದೆ.
ಇದೀಗ ಈ ದಾಳಿಯ ಶಂಕಿತರಾದ ಮೂವರಲ್ಲಿ ಒಬ್ಬನಾದ ಆಸಿಫ್ ಫೌಜಿ ಅಲಿಯಾಸ್ ಆಸಿಫ್ ಶೇಖ್‌ನ ಮನೆಯನ್ನು ದಕ್ಷಿಣ ಕಾಶ್ಮೀರದ ಟ್ರಾಲ್‌ನಲ್ಲಿ ಧ್ವಂಸ ಮಾಡಲಾಗಿದೆ. ಈ ದಾಳಿಯಲ್ಲಿ ಆಸೀಫ್ ಶೇಖ್ ಹೆಸರು ಕೇಳಿಬಂದಿದೆ. ಆಸೀಫ್ Lashkar-e-Taiba ಸಂಘಟನೆಯ ಉಗ್ರನಾಗಿದ್ದಾನೆ. ಪಹಲ್ಗಾಮ್ ದಾಳಿ ಮಾಡಿದ ಉಗ್ರರ ಲಿಸ್ಟ್ನಲ್ಲಿ ಈತನೂ ಇದ್ದಾನೆ.
ಅದಲ್ಲದೆ ಇದರ ಬೆನ್ನಲ್ಲೇ ಮತ್ತೊಬ್ಬ ಭಯೋತ್ಪಾದಕರಾದ ಆದಿಲ್ ಹುಸೇನ್ ಥೋಕರ್ ಮನೆಯನ್ನು ಉಡೀಸ್ ಮಾಡಿದೆ. ಪೈಶಾಚಿಕ ದಾಳಿಗೆ 26 ಪ್ರವಾಸಿಗರು ಜೀವ ಕಳೆದುಕೊಂಡಿದ್ದಾರೆ. ಅವರಲ್ಲಿ ಕರ್ನಾಟಕದ ಇಬ್ಬರು ಸೇರಿದ್ದಾರೆ. ಉಗ್ರರ ಅಮಾನುಷ ದಾಳಿಗೆ ಭಾರತ ಪ್ರತ್ಯುತ್ತರ ನೀಡಬೇಕು ಎಂಬ ಆಗ್ರಹ ಜೋರಾಗಿದೆ. ಅಂತೆಯೇ ಸೇನೆ ತನ್ನ ಕಾರ್ಯಾಚರಣೆಗೆ ಇಳಿದಿದೆ. ಮತ್ತೊಂದು ಕಡೆ ಭಾರತ ಸರ್ಕಾರ ಕೂಡ ಕಠಿಣ ನಿಲುವು ತೆಗೆದುಕೊಂಡಿದೆ. ಉಗ್ರ ಪೋಷಕ ಪಾಕಿಸ್ತಾನಕ್ಕೆ ಪೆಟ್ಟು ನೀಡಿ ಬುದ್ಧಿ ಕಲಿಸಲು ಮುಂದಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






