ಅಯ್ಯೋ ರಶ್ಮಿಕಾ ಇದೇನು ನಿನ್ನ ಸ್ಥಿತಿ: ಸಾಲು-ಸಾಲು ಸಿನಿಮಾ ಆಫರ್ ಇದ್ದಾಗಲೇ ಎಡವಟ್ಟು! ಕುಂಟಿ ಆದ್ರಾ ಕೊಡಗು ಬೆಡಗಿ!

ಜನವರಿ 23, 2025 - 21:00
 0  22
ಅಯ್ಯೋ ರಶ್ಮಿಕಾ ಇದೇನು ನಿನ್ನ ಸ್ಥಿತಿ: ಸಾಲು-ಸಾಲು ಸಿನಿಮಾ ಆಫರ್ ಇದ್ದಾಗಲೇ ಎಡವಟ್ಟು! ಕುಂಟಿ ಆದ್ರಾ ಕೊಡಗು ಬೆಡಗಿ!

ರಶ್ಮಿಕಾ ಮಂದಣ್ಣ ಅಭಿನಯದ ಮತ್ತೊಂದು ಬಾಲಿವುಡ್ ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. ಈಗಾಗಲೇ ಮಿಷನ್ ಮಜ್ನು, ಅನಿಮಲ್ ಸಿನಿಮಾಗಳ ಮೂಲಕ ಮಿಂಚಿರುವ ಕೂರ್ಗ್ ಬ್ಯೂಟಿ ಈಗ ಐತಿಹಾಸಿಕ ಸಿನಿಮಾದ ಭಾಗವಾಗಿ ಛಾವಾ ಮೂಲಕ ಪ್ರೇಕ್ಷಕರ ಮುಂದೆ ಬರೋಕೆ ರೆಡಿಯಾಗಿದ್ದಾರೆ.

ಬ್ಯಾಕ್​ ಟು ಬ್ಯಾಕ್ ಸಿನಿಮಾ ಮಾಡ್ತಿರುವ ರಶ್ಮಿಕಾ, ಪುಷ್ಪ-2, ಅನಿಮಲ್ ಬೆನ್ನಲ್ಲೇ ಈಗ ‘ಛಾವಾ’  ಚಿತ್ರದ ಬಗ್ಗೆ ಗಮನ ಕೊಡ್ತಿದ್ದಾರೆ. ‘ಛಾವಾ’ ಚಿತ್ರದಲ್ಲಿ ವಿಕ್ಕಿ ಕೌಶಲ್​ ಜೊತೆ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ.

ಶಿವಾಜಿ ಮಹಾರಾಜ ಕುರಿತ ಚಿತ್ರ ಇದಾಗಿದೆ. ಮೊನ್ನೆಯಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಜನ ಮೆಚ್ಚಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಟ್ರೇಲರ್ ರಿಲೀಸ್ ಈವೆಂಟ್​ಗೆ ರಶ್ಮಿಕಾ ವ್ಹೀಲ್‌ಚೇರ್‌ನಲ್ಲಿ ಬಂದಿದ್ದರು. ವೇದಿಕೆಗೆ ಆಗಮಿಸುವ ವೇಳೆ ರಶ್ಮಿಕಾ ಕುಂಟುತ್ತಾ ಬಂದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೇದಿಕೆ ಮೇಲೆ ಬರಲು ಕಷ್ಟಪಡುವುದನ್ನು ಕಾಣಬಹುದು. ಒಂದೇ ಕಾಲಿನಲ್ಲಿ ವೇದಿಕೆಗೆ ಬರಲು ಪ್ರಯತ್ನಿಸುತ್ತಾರೆ. ನಂತರ ಅಕ್ಕಪಕ್ಕದಲ್ಲಿದ್ದವರು ಅವರಿಗೆ ಸಹಾಯ ಮಾಡಿದ್ದಾರೆ. ಆಗ ರಶ್ಮಿಕಾ ಮಂದಣ್ಣಗೆ ನಟ ವಿಕ್ಕಿ ಕೌಶಲ್ ಸಹಾಯ ಮಾಡಿದರು. ವಿಡಿಯೋದಲ್ಲಿ ರಶ್ಮಿಕಾ, ಕೆಂಪು ಮತ್ತು ಗೋಲ್ಡನ್ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋ ನೋಡಿದ ಬೆನ್ನಲ್ಲೇ ಅಭಿಮಾನಿಗಳು ರಶ್ಮಿಕಾಗೆ ಏನಾಯ್ತು ಎಂದು ಕೇಳ್ತಿದ್ದಾರೆ.

ಇದು ಕೆಲವು ಅಭಿಮಾನಿಗಳ ಟೀಕೆಗೂ ಕಾರಣವಾಗಿದೆ. ಕುಂಟುತ್ತ ವೇದಿಕೆಗೆ ಬರುವ ಅಗತ್ಯ ಏನಿತ್ತು? ವ್ಹೀಲ್​ ಚೇರ್​ ತೆಗೆದುಕೊಂಡಿದ್ದರೆ ಮುಗಿದಿತ್ತು. ಇದು ಶಿಸ್ತು ಅಲ್ಲ. ವೇದಿಕೆ ಮೇಲೆ ರಶ್ಮಿಕಾ ಅಶಿಸ್ತಿನಿಂದ ಕಾಣಿಸಿಕೊಳ್ಳಬಾರದಿತ್ತು ಎಂಬ ಟೀಕೆಯೂ ವ್ಯಕ್ತವಾಗ್ತಿದೆ. ಇನ್ನು ವಿಕ್ಕಿ ಕೌಶಲ್ ಸಹಾಯಕ್ಕೆ ಬಂದಿರೋದು ಮೆಚ್ಚುಗೆಗೆ ಪಾತ್ರವಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow