ಭರ್ಜರಿ ಉದ್ಯೋಗವಕಾಶ: ಕೇವಲ ಈ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿ ಎಂದ TRAI!

ಜನವರಿ 24, 2025 - 08:03
 0  11
ಭರ್ಜರಿ ಉದ್ಯೋಗವಕಾಶ: ಕೇವಲ ಈ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿ ಎಂದ TRAI!

ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಟ್ರಾಯ್ ಸಂಸ್ಥೆ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು, ಜನವರಿ 24ರ ಒಳಗಾಗಿ ಅಪ್ಲೇ ಮಾಡಬಹುದಾಗಿದೆ.

ಅರ್ಜಿ ಸಲ್ಲಿಕೆ ಮಾಡಲು ಬಯಸುವ ಅಭ್ಯರ್ಥಿಗಳು ಟ್ರಾಯ್ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಬೆಕು. ಅಲ್ಲಿ Careers ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

ಬೆಂಗಳೂರಿನಲ್ಲಿರುವ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಸಂಸ್ಥೆಯಲ್ಲಿ ಈ ಕೆಲಸಗಳು ಇರುತ್ತವೆ. ಸಹಾಯಕರು ಉದ್ಯೋಗ ಇದಾಗಿದ್ದು ಇದಕ್ಕೆ ವೇತನ ಶ್ರೇಣಿ ಮಾಸಿಕವಾಗಿ 35,400 ದಿಂದ 1,12,400 ರೂಪಾಯಿಗಳನ್ನು ನೀಡಲಾಗುತ್ತದೆ. ಸ್ಯಾಲರಿ ಜೊತೆ ಜೊತೆಗ ಸರ್ಕಾರದಿಂದ ಭತ್ಯೆ ಕೂಡ ಇರುತ್ತದೆ.

ವಿದ್ಯಾರ್ಹತೆಯ ವಿಷಯಕ್ಕೆ ಬಂದರೆ ಅಭ್ಯರ್ಥಿಯು ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಕಂಪ್ಯೂಟರ್ ಕುರಿತು ಆಳವಾದ ಜ್ಞಾನ ಹೊಂದಿರಬೇಕು. ಇವುಗಳ ಜೊತೆ ಕೇಂದ್ರ ಸರ್ಕಾರದಡಿ ಸಂಸ್ಥೆಯಲ್ಲಿ ಅಧಿಕಾರಿ ಆಗಿರಬೇಕು. 10 ವರ್ಷ ಉದ್ಯೋಗದಲ್ಲಿ ಅನುಭವ ಇರಬೇಕು. ಉದ್ಯೋಗಕ್ಕೆ ಆಯ್ಕೆಯು ಅಭ್ಯರ್ಥಿಗಳ ಹೆಸರು ಶಾರ್ಟ್​ ಲಿಸ್ಟ್, 2ನೇಯದಾಗಿ ಸಂದರ್ಶನ ಮಾಡಿ ಬಳಿಕ ಕೆಲಸಕ್ಕೆ ಆಯ್ಕೆ ಮಾಡಲಾಗುತ್ತದೆ. ಈ ಸರ್ಕಾರಿ ಉದ್ಯೋಗಕ್ಕೆ ಅಭ್ಯರ್ಥಿಗಳು 24 ಜನವರಿ 2025ರ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಬೇಕು.

ಹೀಗಾಗಿ ಆಸಕ್ತ ಅರ್ಹರು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow