ಸೋಡಿಯಂ ಬಳಸಿ ಸ್ಫೋಟ ಪ್ರಕರಣ: ಡ್ರೋನ್ ಪ್ರತಾಪ್‌ʼಗೆ 10 ದಿನ ನ್ಯಾಯಾಂಗ ಬಂಧನ!

ಡಿಸೆಂಬರ್ 16, 2024 - 12:07
 0  15
ಸೋಡಿಯಂ ಬಳಸಿ ಸ್ಫೋಟ ಪ್ರಕರಣ: ಡ್ರೋನ್ ಪ್ರತಾಪ್‌ʼಗೆ 10 ದಿನ ನ್ಯಾಯಾಂಗ ಬಂಧನ!

ತುಮಕೂರುಬಿಗ್ಬಾಸ್‌‌‌ ಸೀಸನ್‌ 10ರಲ್ಲಿ ಡ್ರೋನ್ಪ್ರತಾಪ್ಅವರು ರನ್ನರ್ಅಪ್ಆಗಿ ಹೊರ ಹೊಮ್ಮಿದ್ದರು. ಇದೀಗ ಸ್ಪೋಟಕ ವಸ್ತುವನ್ನು ನೀರಿಗೆಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್‌ಗೆ ಹತ್ತು ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಮಧುಗಿರಿ ಜೆಎಂಎಫ್‌ಸಿ ಕೋರ್ಟ್ ಆದೇಶ ನೀಡಿದೆ.

ಸೋಡಿಯಂ ಮೆಟಲ್ ಸ್ಪೋಟ ಪ್ರಕರಣದಲ್ಲಿ ತಗಲಾಕೊಂಡಿರುವ ಡ್ರೋನ್ ಪ್ರತಾಪ್‌ ಅವರ ಮೂರು ದಿನದ ಪೊಲೀಸ್ ಕಸ್ಟಡಿ ಅವಧಿ ಮುಗಿದಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11ಗಂಟೆ ಸುಮಾರಿಗೆ ಪೊಲೀಸರು ಅವರನ್ನು ಮಧುಗಿರಿ ಜೆಎಂಎಫ್ ಸಿ ಕೋರ್ಟ್ ಗೆ ಹಾಜರುಪಡಿಸಿದ್ದರು.

ಪ್ರಕರಣದಲ್ಲಿ ಭಾಗಿಯಾಗಿರುವ ಪ್ರತಾಪ್ ಇಬ್ಬರು ಸ್ನೇಹಿತರನ್ನು ಮಿಡಿಗೇಶಿ ಪೊಲೀಸರು ಬಂಧಿಸಿದ್ದಾರೆ. ಕ್ಯಾಮೇರಾ ಮ್ಯಾನ್ ವಿನಯ್, ಹಾಗೂ ಸೋಡಿಯೋಂ ಕೊಡಿಸಿದ್ದ ಪ್ರಜ್ವಲ್ ಸಧ್ಯ ಅರೆಸ್ಟ್ ಆಗಿದ್ದಾರೆಸದ್ಯ ಡ್ರೋನ್ ಪ್ರತಾಪ್ ಮೇಲೆ EXPLOSIVE SUBSTANCES ACT 1908 (u/s 3), ಹಾಗೂ 2023 ಭಾರತೀಯ ನ್ಯಾಯ ಸಂಹಿತೆ ಕಾಯ್ದೆ 288 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow