IPL 2025: ಲಖನೌ ಸೂಪರ್ ಜೈಂಟ್ಸ್ಗೆ ಮತ್ತೊಂದು ಹೀನಾಯ ಸೋಲು! ಕ್ಯಾಪ್ಟನ್‌ ರಿಷಭ್ ಪಂತ್ ಹೇಳಿದ್ದೇನು..?

ಮೇ 5, 2025 - 10:25
 0  15
IPL 2025: ಲಖನೌ ಸೂಪರ್ ಜೈಂಟ್ಸ್ಗೆ ಮತ್ತೊಂದು ಹೀನಾಯ ಸೋಲು! ಕ್ಯಾಪ್ಟನ್‌ ರಿಷಭ್ ಪಂತ್ ಹೇಳಿದ್ದೇನು..?

ಪಂಜಾಬ್ ಕಿಂಗ್ಸ್ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 37 ರನ್ಗಳ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. 237 ರನ್ಗಳ ಗುರಿ ಬೆನ್ನಟ್ಟಿದ ಲಖನೌ 199 ರನ್ಗಳಿಗೆ ಸೀಮಿತವಾಯಿತು. ಈ ಸೋಲಿನ ಬಳಿಕ ಮಾತನಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್, ಪ್ಲೇಆಫ್ಗೇರಲು ನಮಗೆ ಇನ್ನೂ ಉತ್ತಮ ಅವಕಾಶವಿದೆ ಎಂದಿದ್ದಾರೆ. ಏಕೆಂದರೆ ಮುಂದಿನ ಮೂರು ಪಂದ್ಯಗಳು ನಿರ್ಣಾಯಕ ಈ ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿ ಪ್ಲೇಆಫ್ಗೇರುವ ವಿಶ್ವಾಸವಿದೆ ಎಂದು ಪಂತ್ ಹೇಳಿದ್ದಾರೆ.

ಇನ್ನು ಈ ಸೋಲನ್ನು ವಿಮರ್ಶಿಸಿದ ಪಂತ್, ನಾವು ಹೆಚ್ಚು ರನ್ ಬಿಟ್ಟು ಕೊಟ್ಟಿದ್ದು ದುಬಾರಿಯಾಯಿತು. ಅದರಲ್ಲೂ ಕೆಲ ನಿರ್ಣಾಯಕ ಕ್ಯಾಚ್ಗಳನ್ನು ಕೈ ಬಿಟ್ಟೆವು. ಇವೆಲ್ಲವೂ ನೋವುಂಟು ಮಾಡುತ್ತದೆ. ಆದರೆ ಏನೂ ಮಾಡಕ್ಕಾಗಲ್ಲ. ಅವೆಲ್ಲವೂ ಪಂದ್ಯದ ಒಂದು ಭಾಗ.

ಇದಾಗ್ಯೂ ನಮ್ಮ ಬೌಲರ್ಗಳುಆರಂಭದಲ್ಲಿಯೇ ಲೆಂಗ್ತ್ ಅನ್ನು ಸರಿಯಾಗಿ ಆಯ್ಕೆ ಮಾಡಲಿಲ್ಲ. ಇದರಿಂದ ಆರಂಭದಲ್ಲೇ ಹೆಚ್ಚಿನ ರನ್ಗಳ ಸೋರಿಕೆಯಾಯಿತು. ಆದರೆ ಮುಂದಿನ ಮೂರು ಪಂದ್ಯಗಳ ಮೂಲಕ ನಾವು ಕಂಬ್ಯಾಕ್ ಮಾಡುವ ವಿಶ್ವಾಸವಿದೆ ಎಂದು ರಿಷಭ್ ಪಂತ್ ಹೇಳಿದ್ದಾರೆ.

ಕೊನೆಯ ಮೂರು ಲೀಗ್ ಮ್ಯಾಚ್ಗಳನ್ನು ನಾವು ನಾವು ಗೆದ್ದರೆ, ಖಂಡಿತವಾಗಿಯೂ ಪ್ಲೇಆಫ್ಗೇರಬಹುದು. ನಮ್ಮ ಅಗ್ರ ಕ್ರಮಾಂಕದ ಬ್ಯಾಟರ್ಗಳಿಂದ ಉತ್ತಮ ಪ್ರದರ್ಶನವನ್ನು ಮೂಡಿಬಂದರೆ ನ ಅದು ಅರ್ಥಪೂರ್ಣವಾಗಿರುತ್ತದೆ. ಹೀಗಾಗಿ ಮುಂದಿನ ಮೂರು ಮ್ಯಾಚ್ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಗೆಲುವು ದಾಖಲಿಸಿ ಪ್ಲೇಆಫ್ಗೆ ಪ್ರವೇಶಿಸುವ ವಿಶ್ವಾಸವಿದೆ ಎಂದು ರಿಷಭ್ ಪಂತ್ ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow