2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ: ಸಚಿವ ರಾಜನಾಥ್ ಸಿಂಗ್

ನವದೆಹಲಿ: ನವದೆಹಲಿ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಬಳಿಕ ಭಾರತದ ಪ್ರತೀಕಾರ ಪಾಕಿಸ್ತಾನಿಯರ ಎದೆ ನಡುಗಿಸಿದೆ. ಭಾರತೀಯ ಸೇನೆ ಯಾವುದೇ ಗುಟ್ಟು ಬಿಟ್ಟು ಕೊಡದೇ ಯುದ್ಧದ ಭೀತಿಯಲ್ಲೇ ಬೆವರುವಂತೆ ಮಾಡಿದೆ. ಪ್ರಧಾನಿ ಮೋದಿ ಸರ್ಕಾರ ಸೇನೆಗೆ ಫ್ರೀ ಹ್ಯಾಂಡ್ ಕೊಟ್ಟ ಮೇಲೆ ಗಡಿಯಲ್ಲಿ ಯುದ್ಧದ ತಾಲೀಮು ಭರ್ಜರಿಯಾಗಿದೆ. ಇದರ ನಡುವೆ ದೆಹಲಿಯ ಬಕ್ಕರ್ವಾಲಾ ಆನಂದ್ ಧಾಮ್ ಆಶ್ರಮದಲ್ಲಿ ಸನಾತನ ಸಂಸ್ಕೃತಿ ಜಾಗರಣ ಮಹೋತ್ಸವದಲ್ಲಿ ಭಾಗವಹಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿದ್ದಾರೆ.
ಭಾರತದ ಮೇಲೆ ವಕ್ರದೃಷ್ಟಿ ಬೀರುವವರಿಗೆ ತಕ್ಕ ಉತ್ತರ ಕೊಡೋದು ನನ್ನ ಜವಾಬ್ದಾರಿ. ನೀವೆಲ್ಲರೂ ನಮ್ಮ ಪ್ರಧಾನಿಯನ್ನ ಚೆನ್ನಾಗಿ ತಿಳಿದಿದ್ದೀರಿ, ಅವರ ಕಾರ್ಯಶೈಲಿ, ದೃಢಸಂಕಲ್ಪದ ಬಗ್ಗೆಯೂ ನಿಮಗೆ ಚೆನ್ನಾಗಿ ತಿಳಿದಿದೆ. ಹಾಗಾಗಿ ನಿಮಗೆ ಭರವಸೆ ನೀಡುತ್ತೇನೆ, ಮೋದಿ ಅವಧಿಯಲ್ಲಿ ನೀವು ಬಯಸಿದ್ದೆಲ್ಲವೂ ನಡೆಯುತ್ತದೆ ಎಂದು ಹೇಳಿದರು.
2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ:
ಮುಂದುವರಿದು ಮಾತನಾಡಿದ ರಕ್ಷಣಾ ಸಚಿವರು, 2047ರ ವೇಳೆಗೆ ಭಾರತವನ್ನ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಪ್ರಧಾನಿ ಮೋದಿ ಹೊಂದಿದ್ದಾರೆ. ಇದು ಸಾಮಾನ್ಯ ಗುರಿಯಲ್ಲ. ಆದ್ರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಹೆಚ್ಚಾಗಿದೆ ಎಂಬ ಸತ್ಯವನ್ನು ನೀವೆಲ್ಲರೂ ಒಪ್ಪಿಕೊಳ್ಳೋದ್ರಿಂದ ಈ ಗುರಿ ಸಾಧಿಸಬಹುದು. ಭಾರತದ ದುರ್ಬಲ ದೇಶ, ಬಡವರ ದೇಶ ಅನ್ನುತ್ತಿದ್ದ ದೇಶಗಳೆಲ್ಲವು ಇಂದು ಭಾರತದ ಮಾತನ್ನು ಕಿವಿಗೊಟ್ಟು ಕೇಳುತ್ತವೆ ಎಂದು ಹೇಳಿದರು.
25 ಟೂರಿಸ್ಟ್ ಗೈಡ್‌ಗಳ ವಿಚಾರಣೆ:
ಸದ್ಯ ಪಹಲ್ಗಾಮ್ ದಾಳಿಯ ಕುರಿತು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಅನಂತನಾಗ್‌ನಲ್ಲಿ 25ಕ್ಕೂ ಹೆಚ್ಚು ಸ್ಥಳೀಯ ಪ್ರವಾಸಿ ಮಾರ್ಗದರ್ಶಿಗಳನ್ನು ವಿವಾರಣೆಗೆ ಒಳಪಡಿಸಿದೆ. ಜೊತೆಗೆ ಉಗ್ರರಿಗೆ ಸಹಾಯ ಮಾಡಿದ ಭೂಗತ ಕಾರ್ಮಿಕರನ್ನು ಪತ್ತೆಹಚ್ಚು ಕೆಲಸಕ್ಕೂ ಎನ್‌ಐಎ ಮುಂದಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






