Rachita Ram: ಅಡ್ವಾನ್ಸ್ ವಾಪಸ್ ಕೊಡದೇ ವಂಚಿಸಿದ ಆರೋಪ: ಡಿಂಪಲ್ ಕ್ವೀನ್ ಮೇಲೆ ಮತ್ತೊಂದು ದೂರು!

ಜೂನ್ 18, 2025 - 18:02
 0  5
Rachita Ram: ಅಡ್ವಾನ್ಸ್ ವಾಪಸ್ ಕೊಡದೇ ವಂಚಿಸಿದ ಆರೋಪ: ಡಿಂಪಲ್ ಕ್ವೀನ್ ಮೇಲೆ ಮತ್ತೊಂದು ದೂರು!

ಫಿಲ್ಮ್ ಚೇಂಬರ್ ನಲ್ಲಿ ನಟಿ ರಚಿತಾ ರಾಮ್ ಮೇಲೆ ಮತ್ತೊಂದು ದೂರು ದಾಖಲಾಗಿದೆ. ಅಡ್ವಾನ್ಸ್ ವಾಪಾಸ್ ಕೊಡದೆ ನಿರ್ಮಾಪಕಿಯನ್ನ ಆಟ ಆಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಉಪ್ಪಿ ರುಪ್ಪಿಸಿನಿಮಾಗಾಗಿ ಗುಳಿಕೆನ್ನೆ ಚೆಲುವೆ ರಚಿತಾ ರಾಮ್ಗೆ ಅಡ್ವಾನ್ಸ್ನೀಡಲಾಗಿತ್ತು. ಈಗ ಹಣ ವಾಪಸ್ಕೊಡದೇ ನಿರ್ಮಾಪಕಿಯನ್ನು ಸತಾಯಿಸುತ್ತಿದ್ದಾರೆಂದು ದೂರಲಾಗಿದೆ.

8 ವರ್ಷಗಳ ಹಿಂದೆ ಉಪ್ಪಿ ಮತ್ತು ರಚಿತಾ ನಟನೆಯಲ್ಲಿ ಸಿನಿಮಾ ಮೂಡಿಬರಬೇಕಿತ್ತು. ‘ಉಪ್ಪಿ ರುಪ್ಪಿಸಿನಿಮಾದಲ್ಲಿ ಉಪೇಂದ್ರ ಜೊತೆ ನಟಿಸಲು ನಟಿ ಒಪ್ಪಿಕೊಂಡಿದ್ದರು. ಸಿನಿಮಾವನ್ನು ವಿಜಯಲಕ್ಷ್ಮಿ ಅರಸ್ ನಿರ್ಮಾಣ ಮತ್ತು ಕೆ.ಮಾದೇಶ್ ನಿರ್ದೇಶನ ಮಾಡುವುದಿತ್ತು.

23 ಲಕ್ಷ ಸಂಭಾವನೆಗೆ ನಟಿ ಕಮಿಟ್ ಆಗಿದ್ದರು. ಮುಂಗಡವಾಗಿ 13 ಲಕ್ಷ ಅಡ್ವಾನ್ಸ್ ರೂಪದಲ್ಲಿ ಹಣ ಪಡೆದಿದ್ದರು. 2017 ರಲ್ಲಿ ಬ್ಯಾಂಕಾಕ್ನಲ್ಲಿ ಶೂಟಿಂಗ್ಗೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಬರುವುದಾಗಿ ಒಪ್ಪಿಕೊಂಡು ರಚಿತಾ ರಾಮ್ಗೆ ಟಿಕೆಟ್ ಬುಕ್ ಮಾಡಿದ್ದರು. ಆದರೆ, ಬಂದಿರಲಿಲ್ಲ. 15 ದಿನಗಳ ಕಾಲ ಈಗ ಬರ್ತೀನಿ, ಆಗ ಬರ್ತೀನಿ ಅಂತಾ ಸತಾಯಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow