ದಿಢೀರ್ ರಾಜೀನಾಮೆ ಕೊಟ್ಟ ಕರ್ಣಾಟಕ ಬ್ಯಾಂಕ್ ಸಿಇಒ, ಎಕ್ಸಿಕ್ಯೂಟಿವ್ ಡೈರೆಕ್ಟರ್!

ನವದೆಹಲಿ:- ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ಣಾಟಕ ಬ್ಯಾಂಕ್ ಸಿಇಒ ಹಾಗೂ ಎಕ್ಸಿಕ್ಯೂಟಿವ್ ಡೈರೆಕ್ಟರ್ ದಿಢೀರ್ ರಾಜೀನಾಮೆ ಕೊಟ್ಟಿದ್ದಾರೆ. ಬ್ಯಾಂಕ್ನ ಸಿಇಒ ಶ್ರೀಕೃಷ್ಣನ್ ಹರಿಹರ ಶರ್ಮಾ ಮತ್ತು ಕಾರ್ಯವಾಹಕ ನಿರ್ದೇಶಕ ಶೇಖರ್ ರಾವ್ ಅವರು ರಾಜೀನಾಮೆ ನೀಡಿದ್ದಾರೆ
ಈ ಇಬ್ಬರು ಟಾಪ್ ಎಕ್ಸಿಕ್ಯೂಟಿವ್ಗಳ ರಾಜೀನಾಮೆಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ವೈಯಕ್ತಿಕ ಕಾರಣ ನೀಡಿ ಇಬ್ಬರೂ ಸಂಸ್ಥೆಯಿಂದ ಹೊರಬರುತ್ತಿದ್ದಾರೆ. ಸಿಇಒ ಶ್ರೀಕೃಷ್ಣನ್ ಅವರು ಜುಲೈ 15ರವರೆಗೂ ಕಂಪನಿಯಲ್ಲಿ ಇರಲಿದ್ದಾರೆ. ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್ ಜುಲೈ 31ರಂದು ಬ್ಯಾಂಕ್ನಿಂದ ನಿರ್ಗಮಿಸಲಿದ್ದಾರೆ.
ಆಗಲೇ ತಿಳಿಸಿದಂತೆ ಸಿಇಒ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್ ಅವರುಗಳ ರಾಜೀನಾಮೆಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಕಳೆದ ತಿಂಗಳಷ್ಟೇ ಆಡಿಟಿಂಗ್ ವೇಳೆ ಒಂದೂವರೆ ಕೋಟಿ ರೂ ವಹಿವಾಟಿನಲ್ಲಿ ವ್ಯತ್ಯಾಸ ಆಗಿರುವುದು ಬೆಳಕಿಗೆ ಬಂದಿತ್ತು. ಕನ್ಸಲ್ಟೆಂಟ್ ಸೇವೆ ಹಾಗೂ ಇತರ ಉದ್ದೇಶಗಳಿಗೆ ನಿರ್ದೇಶಕರು 1.53 ಕೋಟಿ ರೂ ವ್ಯಯಿಸಿದ್ದರು. ಈ ವೆಚ್ಚಕ್ಕೆ ಬೋರ್ಡ್ನ ಅನುಮತಿ ಇರಲಿಲ್ಲ. ಈ ವಿಷಯವನ್ನು ಸರ್ಕಾರದಿಂದ ನೇಮಕ ಮಾಡಲಾದ ಲೆಕ್ಕಪರಿಶೋಧಕರು ಎತ್ತಿ ತೋರಿಸಿದ್ದದರು. ಈ ಕಾರಣಕ್ಕೆ ಸಿಇಒ ಮತ್ತು ಇಡಿ ಅವರು ರಾಜೀನಾಮೆ ಕೊಟ್ಟರಾ ಎಂಬುದು ಸ್ಪಷ್ಟವಾಗಿಲ್ಲ.
ನಿಮ್ಮ ಪ್ರತಿಕ್ರಿಯೆ ಏನು?






