ನಿರುದ್ಯೋಗಿಗಳ ಗಮನಕ್ಕೆ: ತಿರುಪತಿಯಲ್ಲಿದೆ ಹಲವು ಉದ್ಯೋಗ, ಅರ್ಹರು ಈಗಲೇ ಅಪ್ಲೈ ಮಾಡಿ!

ತಿರುಪತಿ ದೇವಸ್ಥಾನದಲ್ಲಿ ಹಲವು ಉದ್ಯೋಗಗಳು ಖಾಲಿ ಇದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ತನ್ನಲ್ಲಿ ಖಾಲಿ ಇರುವ ಹಲವು ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಟಿಟಿಡಿ ಸಂಸ್ಥೆ ಅಡಿ ಕಾರ್ಯನಿರ್ವಹಿಸುವ ಶ್ರೀಪದ್ಮಾವತಿ ಮಕ್ಕಳ ಹೃದಯ ಕೇಂದ್ರದಲ್ಲಿ ಖಾಲಿ ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ. ಇದೇ ಸಂಬಂಧ ನುರಿತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ
ಶ್ರೀಪದ್ಮಾವತಿ ಮಕ್ಕಳ ಹೃದಯ ಕೇಂದ್ರದಲ್ಲಿ ಪಿಡಿಯಾಟ್ರಿಕ್ ಕಾರ್ಡಿಯಾಕ್ ಅನಸ್ತಾಟಿಸ್ಟ್ ಹಾಗೂ ಪಿಡಿಯಾಟ್ರಿಕ್ ಕಾರ್ಡಿಯಲಾಜಿಸ್ಟ್ ಉದ್ಯೋಗ ಖಾಲಿ ಇವೆ. ಎಂಬಿಬಿಎಸ್ ಪೂರ್ಣಗೊಳಿಸಿರುವುದರ ಜೊತೆಗೆ ಪಿಜಿ ಕೂಡ ಪೂರ್ಣಗೊಳಿಸಿರಬೇಕು. ಅಲ್ಲದೇ ಈಗಾಗಲೇ ಕೆಲಸ ಮಾಡಿದ ಅನುಭವ ಕೂಡ ಹೊಂದಿರಬೇಕು. ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿ 42 ವರ್ಷದ ಒಳಗಿನವರು ಆಗಿರಬೇಕು.
ಅಭ್ಯರ್ಥಿಗಳನ್ನ ಸಂದರ್ಶನ ಮಾಡಿ ಈ ಉದ್ಯೋಗಕ್ಕೆ ಆಯ್ಕೆ ಮಾಡಲಾಗುತ್ತದೆ. ಅದರಂತೆ ಉದ್ಯೋಗ ಪಡೆದ ಅಭ್ಯರ್ಥಿಗೆ ಪ್ರತಿ ತಿಂಗಳಿಗೆ 1,01,500 ರೂಪಾಯಿಗಳಿಂದ 1,67,400 ರೂಪಾಯಿ ಸಂಬಳ ನೀಡಲಾಗುತ್ತದೆ. ಈ ಹುದ್ದೆಗಳು ಕಾಂಟ್ರಾಕ್ಟ್ ಆಧಾರಿತ ಆಗಿವೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡುವಾಗ ತಾವು ಈಗಾಗಲೇ ಕೆಲಸ ಮಾಡಿದ ಅನುಭವ ದಾಖಲೆಗಳನ್ನ ನೀಡಬೇಕು. ಇನ್ನು ಅರ್ಜಿಗೆ ಬೇಕಾದ ಪ್ರತಿ ಟಿಟಿಡಿಯ ವೆಬ್ಸೈಟ್- https://www.tirumala.org/ ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು. ಇದು ಆಫ್ಲೈನ್ ಮೂಲಕ ಅಪ್ಲೇ ಮಾಡಬೇಕಾಗಿದೆ. ಆನ್ಲೈನ್ ಲಭ್ಯ ಇರುವುದಿಲ್ಲ.
ವಿಳಾಸ:
ಡೈರೆಕ್ಟರ್, ಶ್ರೀ ಪದ್ಮಾವತಿ ಚಿಲ್ಡ್ರನ್ ಹಾರ್ಟ್ ಸೆಂಟರ್,
ಬಿಐಆರ್ಆರ್ಡಿ ಸಮೀಪ, ತಿರುಪತಿ- 51750
ನಿಮ್ಮ ಪ್ರತಿಕ್ರಿಯೆ ಏನು?






