ಪವರ್ ಸೆಂಟರ್ ಹೆಚ್ಚಾಗಿವೆ, ಆಗಸ್ಟ್-ಸೆಪ್ಟಂಬರ್ ನಂತರ ಭಾರೀ ಬದಲಾವಣೆ ಎಂದ ಸಚಿವ ರಾಜಣ್ಣ..!

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಹುದ್ದೆಯ ಹಂಚಿಕೆಯ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಸಚಿವ ಕೆ.ಎನ್. ರಾಜಣ್ಣ ಅವರು 'ಆಗಸ್ಟ್-ಸೆಪ್ಟೆಂಬರ್ ನಂತರ ರಾಜ್ಯದಲ್ಲಿ ಭಾರೀ ಬದಲಾವಣೆ' ಆಗಲಿದೆ ಎಂಬ ಸ್ಫೋಟಕ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಹೌದು ರಾಜ್ಯದಲ್ಲಿ ಈಗ ಬದಲಾವಣೆ ಗಾಳಿ ತಣ್ಣಗೆ ಬೀಸುತ್ತಿದೆ.
ಸೆಪ್ಟಂಬರ್ ಕಳೀಲಿ ನೋಡುವಂತ್ರಿ, ರಾಜಕಾರಣದಲ್ಲಿ ಭಾರೀ ಬದಲಾವಣೆ ಆಗಲಿದೆ. ಇನ್ನು ರಾಜ್ಯದಲ್ಲಿ 2013ರಲ್ಲಿ ಇದ್ದ ಹಾಗೆ ಸಿಎಂ ಸಿದ್ದರಾಮಯ್ಯ ಈ ಬಾರಿ ಇಲ್ಲ, ಅನ್ನೋ ಶಾಸಕರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಏನ್ ಮಾಡೋದು ಪವರ್ ಸೆಂಟರ್ ಗಳು ಜಾಸ್ತಿ ಆಗಿವೆ.
ಒಂದು, ಎರಡು, ಮೂರು ಲೆಕ್ಕಕ್ಕೆ ಇಲ್ಲದಷ್ಟು ಆಗಿವೆ. 2023ರಿಂದ 2018ರವರೆಗೆ ಒಂದೇ ಪವರ್ ಸೆಂಟರ್ ಇತ್ತು. ಅವರಿಗೆ ಯಾವುದೇ ಒತ್ತಡ ಇರಲಿಲ್ಲ. ಪವರ್ ಸೆಂಟರ್ ಜಾಸ್ತಿಯಾದ ಹಾಗೆ ಜಂಜಾಟ ಹೆಚ್ಚಾಗಿದೆ ಎಂದು ತಿಳಿಸಿದರು.
ಬಿ ಆರ್ ಪಾಟೀಲ್ ಆಡಿಯೊ ವೈರಲ್ ವಿಚಾರದ ಬಗ್ಗೆ ಮಾತನಾಡಿ, ಜಮೀರ್ ಪಿಎಸ್ ಸರ್ಫರಾಜ್ ಖಾನ್ ಜೊತೆ ಬಿ.ಆರ್. ಪಾಟೀಲ್ ಮಾತನಾಡಿರುವ ನಿಮ್ಮ ಮಾದ್ಯಮಗಳಲ್ಲಿ ಪ್ರಸಾರ ಆಗಿದೆ. ಅವರಿಗೆ ಆಗಿರುವ ಅನುಭವ ಬೆಳವಣಿಗೆ ಬಗ್ಗೆ ಮಾತಾಡಿದ್ದಾರೆ.
ಅವರು ಹೇಳಿರೋದ್ರಲ್ಲಿ ಸತ್ಯ ಇಲ್ಲಾ ಅಂತ ನಾನು ಹೇಳೊಕೆ ಹೋಗುವುದಿಲ್ಲ. ಅವರ ಅನುಭವದ ಆಧಾರದ ಮೇಲೆ ಅವರ ಮನಸ್ಸಿನ ಭಾವನೆಗಳನ್ನ ವ್ಯಕ್ತಪಡಿಸಿರುತ್ತಾರೆ. ಅದಕ್ಕೆ ನನ್ನ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಹೇಳಿದರು.
ನಿಮ್ಮ ಪ್ರತಿಕ್ರಿಯೆ ಏನು?






