ಸ್ಕೂಟಿ ಕೈಗೆ ಟಚ್ ಆಗಿ ರಸ್ತೆಗೆ ಬಿದ್ದ ಬಾಲಕ: ಬಾಲಕನ ಮೇಲೆನೆ ಹರಿಯಿತು ಟೆಂಪೋ

ಬೆಂಗಳೂರು: ಬೆಂಗಳೂರಿನ ಕೆ.ಜಿ ಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೂಡ್ಸ್ ವಾಹನ ಹರಿದು ಬಾಲಕನೋರ್ವ ಸಾವನ್ನ್ಪಪಿರುವ ಘಟನೆ ನಡೆದಿದೆ. ಹೌದು ಓಡಿ ಬರುತ್ತಿದ್ದ ಬಾಲಕನ ಭುಜ ನಿಲ್ಲಿಸಿದ್ದ ಬೈಕ್ ಹ್ಯಾಂಡಲ್‌ಗೆ ತಾಕಿದೆ. ತಾಕಿದ ರಭಸಕ್ಕೆ ಬಾಲಕ ಅಲ್ಲಿಯೇ ಉರುಳಿ ಬಿದ್ದಿದ್ದಾನೆ. ಕೆಳಗೆ ಬಿದ್ದ ಬಾಲಕನ ತಲೆ ಮೇಲೆ ಹರಿಯಿತು ಗೂಡ್ಸ್ ಆಟೋ ಹರಿದಿದೆ.
ತಲೆ ಮೇಲೆ ಗೂಡ್ಸ್ ಆಟೋ ಹರಿದ ಪರಿಣಾಮ ಸ್ಥಳದಲ್ಲೇ ಪ್ರಾಣ 7 ವರ್ಷದ ಬಾಲಕ ಪ್ರಾಣ ಪಕ್ಷಿ ಹಾರಿ ಹೋಗಿದೆ. ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರಸ್ತೆ ಪಕ್ಕದಲ್ಲಿ ಬೈಕ್ ನಿಲ್ಲಿಸುವಾಗ, ರಸ್ತೆಯಲ್ಲಿ ಮಕ್ಕಳು ಓಡಾಡುವಾಗ ಬಹಳ ಜಾಗರೂಕತೆಯಿಂದ ಇರಬೇಕು ಎನ್ನುವುದು ಇದರಿಂದ ತಿಳಿಯುತ್ತದೆ. ಮಕ್ಕಳು ರಸ್ತೆಯಲ್ಲಿ ಒಬ್ಬರೇ ಓಡಾಡುವಾಗ ಎಚ್ಚರಿಕೆ ಇಲ್ಲದಿದ್ದರೆ ಏನಾಗತ್ತೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ ಎನ್ನುವಂತಿದೆ.
ನಿಮ್ಮ ಪ್ರತಿಕ್ರಿಯೆ ಏನು?






