ತಪ್ಪು ಮಾಡಿ ಮೈಪರಚಿಕೊಳ್ಳೋದು ಪ್ರಿಯಾಂಕ್ ಖರ್ಗೆಗೆ ಗೊತ್ತಿದೆ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ತಪ್ಪು ಮಾಡಿ ಮೈಪರಚಿಕೊಳ್ಳೋದು ಪ್ರಿಯಾಂಕ್ ಖರ್ಗೆಗೆ ಗೊತ್ತಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನಗರದಲ್ಲಿ ಮಾತನಾಡಿದ ಅವರು, ತಪ್ಪು ಮಾಡಿ ಮೈಪರಚಿಕೊಳ್ಳೋದು ಪ್ರಿಯಾಂಕ್ ಖರ್ಗೆಗೆ ಗೊತ್ತಿದೆ. ಎಲ್ಲದಕ್ಕೂ ನನ್ನನ್ನು ಬಿಟ್ಟರೆ ಪ್ರವೀಣರೇ ಇಲ್ಲ ಅಂದುಕೊಂಡಿದ್ದಾರೆ.
ನಾವೆಲ್ಲ ಗ್ರಾಸ್ ರೂಟ್ನಿಂದ ಬಂದಂತಹವರು. ತೊಡೆ ತಟ್ಟಿದ್ರೆ ಈಗ ಆಗಿರುವ ಪರಿಸ್ಥಿತಿಯೇ ಆಗುವುದು. ಆನೆ ನಡೆದುಕೊಂಡು ಹೋಗುವಾಗ ನಾಯಿ ಬೊಗಳಿದ್ರೆ ಭಯ ಪಡುತ್ತಾ? ಈಗಲೇ ಪ್ರಿಯಾಂಕ್ ಖರ್ಗೆ ಸಿಎಂ ರೀತಿ ಆಡುವುದು ಬೇಡ. ಮಾತಾಡೋದನ್ನು ಮೈಗೂಡಿಸಿಕೊಂಡರೆ ಒಳ್ಳೇ ನಾಯಕ ಆಗಬಹುದು ಎಂದು ವಾಗ್ದಾಳಿ ಮಾಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






