ತಾಯಿ ಬುದ್ದಿ ಹೇಳಿದ್ದೇ ತಪ್ಪಾಯ್ತಾ..? 20ನೇ ಮಹಡಿಯಿಂದ ಬಿದ್ದು 15 ವರ್ಷದ ಬಾಲಕಿ ಸಾವು!

ಬೆಂಗಳೂರು: ಮದುವೆಯಾಗಿಲ್ಲ ಅಂತ ಸೂಸೈಡ್, ಹೆಣ್ಣು ಸಿಗಲಿಲ್ಲ ಅಂತ ಸೂಸೈಡ್, ಯಾರೋ ಕೈಕೊಟ್ಟರು ಅಂತ ಸೂಸೈಡ್, ಗಂಡ ಬೈಯ್ದ ಅಂತ ಸೂಸೈಡ್, ಬೆಳೆ ಬಂದಿಲ್ಲ ಅಂತ ಆತ್ಮಹತ್ಯೆ, ಆಟದ ಚಟದಲ್ಲಿ ಲಕ್ಷ ಲಕ್ಷ ಕಳೆದುಕೊಂಡೆ ಅಂತ ಆತ್ಮಹತ್ಯೆ! ದಿನಬೆಳಗಾದರೆ ಇಂತ ಹತ್ತಾರು ಆತ್ಮಹತ್ಯೆಯ ಕೇಸ್ ಬಗ್ಗೆ ಓದುತ್ತಲೇ ಇರುತ್ತೇವೆ. ಆಘಾತಕಾರಿ ವಿಚಾರ ಅಂದ್ರೆ ಇನ್ನೂ ಬದುಕನ್ನು ನೋಡದ, ಬದುಕಿ ಬಾಳ ಬೇಕಾದ ಯುವಜನರೇ ದಿನನಿತ್ಯ ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ.
ಇದೀಗ ತಾಯಿ ಬುದ್ದಿ ಹೇಳಿದ್ದಕ್ಕೆ ಮನನೊಂದ ಬಾಲಕಿಯೊಬ್ಬಳು ಅಪಾರ್ಟಮೆಂಟ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಮೃತ ವಿದ್ಯಾರ್ಥಿನಿಯನ್ನು 15 ವರ್ಷದ ಅವಂತಿಕಾ ಚೌರಾಸಿಯಾ ಎಂದು ಗುರುತಿಸಲಾಗಿದೆ.
ಇತ್ತೀಚೆಗೆ ನಮ್ಮ ಯುವ ಸಮುದಾಯ ಸಣ್ಣ, ಪುಟ್ಟ ವಿಚಾರಗಳಿಗೂ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದು. ಇದೀಗ ಮತ್ತೋರ್ವ ಬಾಲಕಿ ಅರ್ಪಾಟ್ಮೆಂಟ್ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾಡುಗೋಡಿಯ ಅಸೆಟ್ಸ್ಮಾರ್ಕ್ ಅಪಾರ್ಟ್ಮೆಂಟ್ನಲ್ಲಿ ಘಟನೆ ನಡೆದಿದ್ದು.
ತಾಯಿ ಪರೀಕ್ಷೆ ಹತ್ತಿರ ಬರುತ್ತಿದೆ, ಮೊಬೈಲ್ ಬಿಟ್ಟು ಓದ್ಕೋ ಎಂದು ಹೇಳಿದ್ದಕ್ಕೆ ಮನನೊಂದ ಅವಂತಿಕಾ ಚೌರಾಸಿಯಾ ಅಪಾರ್ಟ್ಮೆಂಟ್ನ 20ನೇ ಪ್ಲೋರ್ನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನಾ ಸ್ಥಳಕ್ಕೆ ಕಾಡುಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ವಿದ್ಯಾರ್ಥಿನಿ SSLC ಓದುತ್ತಿದ್ದಳು ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






