‘ಡೆವಿಲ್’ ಬಿಡುಗಡೆಗೆ ರೆಡಿ.. ಆದ್ರೆ ಸಿನಿಮಾ ಪ್ರಚಾರಕ್ಕೆ ದರ್ಶನ್ ಬರಲಿದ್ದಾರಾ..?

ನಟ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಬಹುತೇಕ ಪೂರ್ತಿಗೆ ಬಂದಿದೆ. ಸಿನಿಮಾದ ಚಿತ್ರೀಕರಣ, ಡಬ್ಬಿಂಗ್ ಸೇರಿದಂತೆ ಪ್ರಮುಖ ಎಲ್ಲಾ ಹಂತಗಳು ಮುಗಿದಿದ್ದು, ಇದೀಗ ಅಂತಿಮ ತಾಂತ್ರಿಕ ಕೆಲಸಗಳಾದ ಎಡಿಟಿಂಗ್, ಟ್ರಿಮ್ಮಿಂಗ್ ಹಾಗೂ ಕಲರ್ ಗ್ರೇಡಿಂಗ್ ಮಾತ್ರ ಬಾಕಿಯಿದೆ ಎಂದು ಚಿತ್ರತಂಡ ಮೂಲಗಳಿಂದ ತಿಳಿದುಬಂದಿದೆ.
ಇತ್ತೀಚೆಗಷ್ಟೆ ಸಿನಿಮಾದ ಹಾಡೊಂದರ ಚಿತ್ರೀಕರಣಕ್ಕಾಗಿ ನಟ ದರ್ಶನ್ ಹಾಗೂ ನಿರ್ದೇಶಕ ಮಿಲನ ಪ್ರಕಾಶ್ ಥಾಯ್ಲೆಂಡ್‌ಗೆ ತೆರಳಿದ್ದರು. ಅಲ್ಲಿನ ಶೂಟಿಂಗ್ ಮುಗಿದ ಬಳಿಕ ದರ್ಶನ್ ಕೆಲವು ದಿನ ವಿಶ್ರಾಂತಿ ತೆಗೆದುಕೊಂಡು ನಂತರ ಬೆಂಗಳೂರಿಗೆ ಮರಳಿದ್ದಾರೆ.
ಡೆವಿಲ್’ ಸಿನಿಮಾದಲ್ಲಿ ದರ್ಶನ್‌ಗೆ ಜೊತೆಯಾಗಿ ರಚನಾ ರೈ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತುಳಸಿ, ಅಚ್ಯುತಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸಪ್ರಭು ಮತ್ತು ಶೋಭ್ ರಾಜ್ ಸೇರಿದಂತೆ ಪ್ರಮುಖ ಕಲಾವಿದರು ತಾರಾಬಳಗದಲ್ಲಿದ್ದಾರೆ. ಸಂಗೀತದ ಮಂತ್ರಿಯಾಗಿ ಅಜನೀಶ್ ಲೋಕನಾಥ್ ಮತ್ತು ಛಾಯಾಗ್ರಹಣದ ಜವಾಬ್ದಾರಿ ಸುಧಾಕರ್ ಎಸ್.ರಾಜ್ ವಹಿಸಿದ್ದಾರೆ.
ಸಿನಿಮಾ ಬಹುತೇಕ ಮುಕ್ತಾಯ ಹಂತದಲ್ಲಿದ್ದರೂ, ‘ಡೆವಿಲ್’ ಚಿತ್ರಕ್ಕಾಗಿ ನಡೆಯಬೇಕಾದ ಪ್ರಚಾರ ಕಾರ್ಯಕ್ರಮಗಳ ಬಗ್ಗೆ ಸ್ಪಷ್ಟತೆ ಇಲ್ಲ. ರೇಣುಕಾ ಸ್ವಾಮಿ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ದರ್ಶನ್ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇದರಿಂದಾಗಿ, ಅವರು ಸಿನಿಮಾಗೆ ಸಂಬಂಧಿಸಿದ ಸುದ್ದಿಗೋಷ್ಠಿ ಅಥವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವರೋ ಎಂಬ ಪ್ರಶ್ನೆ ಎದುರಾಗುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?






