ಡೈರೆಕ್ಟರ್ ಪ್ರೇಮ್ ಜೊತೆ ಸಿನಿಮಾ ಮಾಡ್ತಾರಾ ದರ್ಶನ್: ನಟ ಕೊಟ್ರೂ ಕ್ಲಾರಿಟಿ!

ಡೈರೆಕ್ಟರ್ ಪ್ರೇಮ್ ಜೊತೆ ದರ್ಶನ್ ಸಿನಿಮಾ ಬರಲಿದೆಯಾ ಎಂಬ ಪ್ರಶ್ನೆಗೆ ನಟ ದರ್ಶನ್ ಕ್ಲಾರಿಟಿ ಕೊಟ್ಟಿದ್ದಾರೆ.
ನಟ ದರ್ಶನ್ ಫೆ.16ರಂದು ಬರ್ತ್‌ಡೇ ಸಂಭ್ರಮವಾಗಿದ್ದು, ಈ ವರ್ಷ ಹುಟ್ಟುಹಬ್ಬ ಆಚರಣೆ ಮಾಡಲ್ಲ ಎಂದು ವಿಡಿಯೋ ಮೂಲಕ ಫ್ಯಾನ್ಸ್‌ಗೆ ಮನವಿ ಮಾಡಿದ್ದಾರೆ. ಇದೇ ವೇಳೆ ಪ್ರೇಮ್ ಜೊತೆಗಿನ ಸಿನಿಮಾದ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.
ಬೆನ್ನು ನೋವಿನಿಂದ ಬಳಲುತ್ತಿರುವ ಹಿನ್ನೆಲೆ ಈ ವರ್ಷ ಬರ್ತ್‌ಡೇಗೆ ನಾನು ಸಿಗೋದಿಲ್ಲ. ತುಂಬಾ ಹೊತ್ತು ನಿಂತುಕೊಳ್ಳೋಕೆ ಆಗಲ್ಲ. ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ದರ್ಶನ್ ಸೆಲೆಬ್ರಿಟಿಗಳಿಗೆ ಕ್ಷಮೆಯಾಚಿಸಿದ್ದಾರೆ.
ಯಾವುದೇ ಊಹಾಪೋಹಗಳಿಗೆ ಕಿವಿ ಕೊಡಬೇಡಿ. 101% ಹೌದು ನಾನು ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ದುಡ್ಡು ವಾಪಸ್ ಕೊಟ್ಟಿದ್ದೇನೆ. ನನ್ನ ಹತ್ತಿರ ಸಿನಿಮಾಗೆ ಬರುವಾಗಲೇ ಅವರಿಗೆ ಸಿಕ್ಕಾಪಟ್ಟೆ ಕಮಿಟ್‌ಮೆಂಟ್ ಇತ್ತು. ಹಾಗಾಗಿ ವಾಪಸ್ ಕೊಟ್ಟೆ. ಮುಂದೆ ನಾವಿಬ್ಬರೂ ಸಿನಿಮಾ ಮಾಡೇ ಮಾಡ್ತೀವಿ ಎಂದಿದ್ದಾರೆ. ಅದಷ್ಟೇ ಅಲ್ಲ, ಮುಂದೆ ನಾನು ಪ್ರೇಮ್ ಒಟ್ಟಾಗಿ ಸಿನಿಮಾ ಮಾಡೇ ಮಾಡುತ್ತೇವೆ. ನನ್ನ ಗುರುಗಳು, ನನ್ನ ಪ್ರೀತಿಯ ಸ್ನೇಹಿತೆಯ ಆಸೆ ಅದು. ಕೆವಿಎನ್ ಪ್ರೊಡಕ್ಷನ್‌ನವರು ಅವರು ಬೇರೆ ಸಿನಿಮಾ ಮಾಡ್ತಿದ್ದಾರೆ. ಮತ್ತೊಂದು ಪ್ರೊಡಕ್ಷನ್ ಅಂದಾಗ ಅವರಿಗೂ ಕಷ್ಟ ಆಗುತ್ತೆ. ಅದಕ್ಕೆ ಯಾರು ಯಾವುದೇ ಪ್ರೊಡಕ್ಷನ್ ಇಲ್ಲದೇ ಸುಮ್ಮನೆ ಇರತಾರಲ್ಲ ಅವರಿಗೆ ಅವಕಾಶ ಕೊಡೋಣ ಅಂತ ಎಂದಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






