ನಿರ್ಮಾಣ ಹಂತದ ರೈಲು ನಿಲ್ದಾಣದಲ್ಲಿ ಅಗ್ನಿ ಅವಘಡ: ತಪ್ಪಿದ ಅನಾಹುತ!

ಫೆಬ್ರವರಿ 8, 2025 - 18:03
 0  8
ನಿರ್ಮಾಣ ಹಂತದ ರೈಲು ನಿಲ್ದಾಣದಲ್ಲಿ ಅಗ್ನಿ ಅವಘಡ: ತಪ್ಪಿದ ಅನಾಹುತ!

ಗಾಂಧಿನಗರ:- ನಿರ್ಮಾಣ ಹಂತದ ಸಬರಮತಿ ಬುಲೆಟ್ ರೈಲು ನಿಲ್ದಾಣದಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಗುಜರಾತ್‌ನ ಅಹಮದಾಬಾದ್ ನಲ್ಲಿ ಜರುಗಿದೆ. 

ಬೆಳಿಗ್ಗೆ 6:30ರ ಸುಮಾರಿಗೆ 508 ಕಿ.ಮೀ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಭಾಗವಾಗಿರುವ ಸಬರಮತಿ ಬುಲೆಟ್ ರೈಲು ನಿಲ್ದಾಣದಲ್ಲಿ ಅವಘಡ ಉಂಟಾಗಿದೆ. ಅವಘಡದಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಒಟ್ಟು 13 ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು. 

ಈ ಕುರಿತು ನ್ಯಾಷನಲ್ ಹೈ-ಸ್ಪೀಡ್ ಟ್ರೈನ್‌ ಕಾರ್ಪೊರೇಷನ್ ಲಿಮಿಟೆಡ್ ಹೇಳಿಕೆ ಬಿಡುಗಡೆ ಮಾಡಿದ್ದು, ರೈಲು ನಿಲ್ದಾಣದ ಛಾವಣಿಯೊಂದರಲ್ಲಿ ಶಟರಿಂಗ್ ಕೆಲಸದಿಂದ ಬಂದ ವೆಲ್ಡಿಂಗ್ ಕಿಡಿಯಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಉಲ್ಲೇಖಿಸಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow