ಧರ್ಮಸ್ಥಳ ಕೇಸ್: 6 ಅಡಿ ಅಗೆದ್ರೂ ಸಹ ಸಿಕ್ಕಿಲ್ಲ ಯಾವುದೇ ಕುರುಹು..!

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದಾಗಿ ತಪ್ಪೊಪ್ಪಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್ಐಟಿ) ತನಿಖೆಯನ್ನು ತೀವ್ರಗೊಳಿಸಿದ್ದು, ನೇತ್ರಾವತಿ ಸ್ನಾನಘಟ್ಟದ ಬಳಿಯ ಅರಣ್ಯದಲ್ಲಿ ಉತ್ಖನನ ಕಾರ್ಯ ಮುಂದುವರಿಸಿದ್ದಾರೆ. ಆದ್ರೆ, ವ್ಯಕ್ತಿ ತೋರಿಸಿದ್ದ ಮೊದಲ ಪಾಯಿಂಟ್ ನಲ್ಲಿ ನಿನ್ನೆ ಏನು ಸಿಕ್ಕಿರಲಿಲ್ಲ.
ಇಂದು 2ನೇ ದಿನವೂ ಸಹ ಕಾರ್ಯಚರಣೆ ನಡೆಸಿದ್ದು, ಮೊದಲೆರಡು ಕಡೆ ಏನೂ ಪತ್ತೆಯಾಗದ ಕಾರಣ ಈಗ ಮೂರನೇ ಪಾಯಿಂಟ್ ಬಳಿ ಮಣ್ಣು ಅಗೆಯಲು ಕಾರ್ಮಿಕರು ಮುಂದಾಗಿದ್ದಾರೆ. ಇನ್ನು, ಅನಾಮಿಕ ಗುರುತಿಸಿದ ಪ್ರದೇಶಕ್ಕೆ ಪ್ರಣವ್ ಮೊಹಾಂತಿ ಕೂಡಾ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
6 ಅಡಿ ಅಳ-ಅಗಲ ಅಗೆದರೂ ಸಹ ಎರಡನೇ ಸ್ಥಳದಲ್ಲೂ ಅಸ್ಥಿಪಂಜರ ಪತ್ತೆಯಾಗಿಲ್ಲ. ಅಲ್ಲದೇ ವ್ಯಕ್ತಿ ತೋರಿಸಿದ ಮೂರನೇ ಸ್ಥಳವನ್ನು ಸಹ 20 ಮಂದಿ ಕಾರ್ಮಿಕರು ಭೂಮಿ ಅಗೆದು ನೋಡಿದ್ರೆ ಏನು ಪತ್ತೆಯಾಗಿಲ್ಲ. ಹೀಗಾಗಿ ಇದೀಗ 4ನೇ ಸ್ಥಳದಲ್ಲಿ ಶೋಧಾ ಕಾರ್ಯ ಮುಂದುವರೆದಿದೆ.
ನಿಮ್ಮ ಪ್ರತಿಕ್ರಿಯೆ ಏನು?






