Champions Trophy 2025: ಚಾಂಪಿಯನ್ಸ್ ಟ್ರೋಫಿ ವೇಳೆ ಪತ್ನಿಯರ ಜತೆ ಇರಲು ಅವಕಾಶ ನೀಡಿದ BCCI..!

ಫೆಬ್ರವರಿ 19, 2025 - 09:06
 0  10
Champions Trophy 2025: ಚಾಂಪಿಯನ್ಸ್ ಟ್ರೋಫಿ ವೇಳೆ ಪತ್ನಿಯರ ಜತೆ ಇರಲು ಅವಕಾಶ ನೀಡಿದ BCCI..!

ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಗೆಲ್ಲಲೇಬೇಕು ಎನ್ನುವ ಹಂಬಲದಲ್ಲಿ ಇದೆ. ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿದೆ. ಅದಕ್ಕೂ ಮೊದಲು ಟೀಂ ಇಂಡಿಯಾ ಸ್ಟಾರ್ ಕ್ರಿಕೆಟರ್ ಒಬ್ಬರು ತಮ್ಮ ಜೊತೆ ಪತ್ನಿಗೂ ಬರಲು ಅವಕಾಶ ಕೋರಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನು ಬಿಸಿಸಿಐ ನೇರವಾಗಿ ತಿರಸ್ಕರಿಸಿತ್ತು.

 ಆದ್ರೆ ಇದೀಗ ಬಿಸಿಸಿಐ ಈ ವಿಚಾರದಲ್ಲಿ ಯೂ ಟರ್ನ್ ಹೊಡೆದಿದೆ. ದೈನಿಕ್ ಜಾಗರಣ್ ವರದಿಯ ಪ್ರಕಾರ ಆಟಗಾರರ ಪತ್ನಿಯರು, ಕುಟುಂಬದ ಸದಸ್ಯರಿಗೆ ಕೇವಲ ಒಂದು ಪಂದ್ಯದ ವೇಳೆಗಷ್ಟೇ ಜೊತೆಗಿರಲು ಅನುಮತಿ ನೀಡಿದೆ. ಅದಕ್ಕಾಗಿ ಆಟಗಾರರು ಬಿಸಿಸಿಐಗೆ ಅನುತಿ ಕೋರಿ ಪತ್ರವನ್ನು ಸಲ್ಲಿಸಲು ತಿಳಿಸಲಾಗಿದೆ. ಬಳಿಕ ಇದಕ್ಕೆ ಮಂಡಳಿ ವ್ಯವಸ್ಥೆ ಮಾಡಲಿದೆ.

ಈಗಾಗಲೇ ಭಾರತ ತಂಡದ ಎಲ್ಲಾ ಆಟಗಾರರು, ಕೋಚಿಂಗ್ ಸಿಬ್ಬಂದಿ ಫೆಬ್ರವರಿ 14ರಂದೇ ದುಬೈ ತಲುಪಿ ತಾಲೀಮು ಪ್ರಾರಂಭಿಸಿದ್ದಾರೆ. ಅವರ ಜೊತೆ ಅವರ ಪತ್ನಿಯರು, ಕುಟುಂಬಸ್ಥರು ತೆರಳಿಲ್ಲ. ಇದೀಗ ಬಿಸಿಸಿಐ ಅನುಮತಿ ನೀಡಿರುವುದರಿಂದ ಯಾರು ಯಾರು ಬರುತ್ತಾರೆ ಎಂಬುದನ್ನು ನೋಡಬೇಕು.

ಸಾಮಾನ್ಯವಾಗಿ ವಿಚಾರ ಮುನ್ನಲೆಗೆ ಬಂದಾಗ ಕೇಳಿ ಬರುವುದು ಕೇವಲ ಎರಡು ಹೆಸರುಗಳು. ಮೊದಲನೆಯದು ತಾರಾ ದಂಪತಿಗಳಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಬಗ್ಗೆ. ಎರಡನೇಯದಾಗಿ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ರಿತಿಕಾ ಸಚ್ ದೇಹ್ ಬಗ್ಗೆ. ಇವರು ದುಬೈಗೆ ತೆರಳಿದರೆ ಯಾವ ಪಂದ್ಯದ ವೇಳೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow