Devil Teaser: ಕಮ್ಮಿ ಆಗದ “ದಾಸ”ನ ಕ್ರೇಜ್: ಒಂದೇ ದಿನಕ್ಕೆ ಡೆವಿಲ್ ಟೀಸರ್‌ ಗಳಿಸಿದ ವೀವ್ಸ್ ಎಷ್ಟು ಗೊತ್ತಾ..?

ಫೆಬ್ರವರಿ 18, 2025 - 12:03
 0  17
Devil Teaser: ಕಮ್ಮಿ ಆಗದ “ದಾಸ”ನ ಕ್ರೇಜ್: ಒಂದೇ ದಿನಕ್ಕೆ ಡೆವಿಲ್ ಟೀಸರ್‌ ಗಳಿಸಿದ ವೀವ್ಸ್ ಎಷ್ಟು ಗೊತ್ತಾ..?

ಇತ್ತೀಚೆಗೆ ರೇಣುಕಾಸ್ವಾಮಿ ಕೇಸ್​ನಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಗೆ ಬಂದ ನಂತರ ದರ್ಶನ್ ಅವರ ಕುರಿತು ಪ್ರತಿ ಸಣ್ಣ ವಿಚಾರವೂ ಸುದ್ದಿಯಾಗಲು ಶುರುವಾಯಿತು. ಸದ್ಯ ಅವರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಸಿನಿಮಾಗಳಲ್ಲಿಯೂ ಹೆಚ್ಚು ತೊಡಗಿಸಿಕೊಳ್ಳಯವ ಸಿದ್ಧತೆಯಲ್ಲಿದ್ದಾರೆ. ಇದೀಗ ನಟ ದರ್ಶನ್ 48ನೇ ವಸಂತಕ್ಕೆ ಕಾಲಿಟ್ಟಿದ್ದು ಅಭಿಮಾನಿಗಳಿಗೆ ಡೆವಿಲ್ ಟೀಸರ್ ಗಿಫ್ಟ್ ಆಗಿ ನೀಡಿದ್ದರು.

ಡೆವಿಲ್ ಟೀಸರ್​ಗೆ ಅಭಿಮಾನಿಗಳು ಫಿದಾ ಆಗಿದ್ದು ಸಂಭ್ರಮ ಇಮ್ಮಡಿಸಿದೆ.. ಈ ಮಧ್ಯೆ ಅನಾರೋಗ್ಯದ ಕಾರಣ ಸರಳವಾಗಿ ಬರ್ತ್​ಡೇ ಆಚರಿಸಿಕೊಳ್ತಿದ್ದು ದರ್ಶನ್​ ಮನೆ ಬಳಿ ಅಭಿಮಾನಿಗಳು ಬಾರದಂತೆ ಬಿಗಿಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.

ದಿ ಡೆವಿಲ್ ಟೀಸರ್ 1 ನಿಮಿಷ 4 ಸೆಕೆಂಡ್ ಇದೆ.. ಯಾವುದೇ ಡೈಲಾಗ್ ಇಲ್ಲದ ಟೀಸರ್​​ನಲ್ಲಿ ಬ್ಯಾಕ್​ಗ್ರೌಂಡ್ ಮ್ಯೂಸಿಕ್​ನಲ್ಲಿ ಚಾಲೆಂಜ್ ಎಂಬ ಪದ ಮಾತ್ರ ಕೇಳಿಸುತ್ತೆ.. ನಟ ದರ್ಶನ್ ಗನ್ ಹಿಡಿದು ಅಬ್ಬರಿಸುತ್ತಿರುವ ದೃಶ್ಯ ಅಭಿಮಾನಿಗಳನ್ನು ಅಭಿಮಾನದ ಅಲೆಯಲ್ಲಿ ತೇಲಿಸಿದೆ. ಸದ್ಯ ಡೆವಿಲ್ ಚಿತ್ರದ ಶೂಟಿಂಗ್ ಅರ್ಧಕ್ಕೆ ನಿಂತಿದ್ದು ಶೀಘ್ರದಲ್ಲೇ ಶೂಟಿಂಗ್ ಆರಂಭವಾಗುತ್ತೆ ಎನ್ನಲಾಗಿದೆ.

ಗನ್ ಹಿಡ್ದು ಗಾಗಲ್ ತೊಟ್ಟು ದರ್ಶನ್ ಅಬ್ಬರಿಸಿದ್ದಾರೆ. ಅವರ ಸ್ವ್ಯಾಗ್ ಅಭಿಮಾನಿಗಳಿಗೆ ಇಷ್ಟವಾಗ್ತಿದೆ. ಪಬ್ ಸೆಟ್ ಸಿಕ್ಕಾಪಟ್ಟೆ ಅದ್ಧೂರಿಯಾಗಿದೆ. ಪಬ್ ತೋರಿಸುವ ಪರಿ 'ಟಾಕ್ಸಿಕ್' ಚಿತ್ರದ ಫಸ್ಟ್ ಗ್ಲಿಂಪ್ಸ್ ಅನ್ನು ನೆನಪಿಸುವಂತಿದೆ. ಒಟ್ಟಾರೆ ಟೀಸರ್ ಅಭಿಮಾನಿಗಳ ಮನಗೆದ್ದಿದೆ. ಲೈಕ್ಸ್, ಶೇರ್, ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸಾರೆಗಮ ಯೂಟ್ಯೂಬ್ ಚಾನಲ್‌ನಲ್ಲಿ ಟೀಸರ್ ರಿಲೀಸ್ ಆಗಿದ್ದು 24 ಗಂಟೆಗಳಿಂದ ಟ್ರೆಂಡಿಂಗ್‌ನಲ್ಲಿದೆ.

ಮೊದಲ 24 ಗಂಟೆಗಳಲ್ಲಿ 'ಡೆವಿಲ್' ಟೀಸರ್ 28 ಲಕ್ಷ ವೀವ್ಸ್ ಸಾಧಿಸಿದೆ. ಇನ್ನು 2 ಲಕ್ಷದ 20 ಸಾವಿರ ಲೈಕ್ಸ್ ಪಡೆದುಕೊಂಡಿದೆ. 18 ಸಾವಿರ ಕಾಮೆಂಟ್ಸ್ ಸಿಕ್ಕಿದೆ. ಒಟ್ಟಾರೆ ಟೀಸರ್ ಸೂಪರ್ ಹಿಟ್ ಆಗಿದೆ. 24 ಗಂಟೆಗಳಲ್ಲಿ ಅತಿ ಹೆಚ್ಚು ಲೈಕ್ಸ್ ಗಿಟ್ಟಿಸಿದ ಕನ್ನಡ ಸಿನಿಮಾ ಟೀಸರ್ ಎನ್ನುವ ದಾಖಲೆ ಮಾಡಿದೆ. ಈ ಹಿಂದಿನ ಹಲವು ಕನ್ನಡ ಸಿನಿಮಾಗಳ ಟೀಸರ್ ದಾಖಲೆಯನ್ನು ಮುರಿದಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುವಂತಾಗಿದೆ.


ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow