ನಟಿ ದೀಪಿಕಾ ದಾಸ್ ತಾಯಿಗೆ ಬೆದರಿಕೆ ಕರೆ: ಠಾಣೆ ಮೆಟ್ಟಿಲೇರಿದ ನಾಗಿಣಿ ಕುಟುಂಬ!

ಕಿರುತೆರೆ ನಟಿ ದೀಪಿಕಾ ದಾಸ್ ತಾಯಿಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ.
ಮಧ್ಯರಾತ್ರಿ ಕರೆ ಮಾಡುವ ಅಪರಿಚಿತ ವ್ಯಕ್ತಿಯು, ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿ ಇದೀಗ ದೂರು ಕೊಡಲಾಗಿದೆ.
ಬೆಂಗಳೂರು ಹೊರವಲಯ ಮಾದನಾಯಕನಹಳ್ಳಿಯಲ್ಲಿರುವ ದೀಪಿಕಾ ದಾಸ್ ಮನೆಯಲ್ಲಿ ಇರುವ ತಾಯಿ ಪದ್ಮಲತಾಗೆ ಬೆದರಿಕೆ ಹಾಕಲಾಗಿದೆ.
ಬೆದರಿಕೆ ಹಿನ್ನೆಲೆ ದೀಪಿಕಾ ದಾಸ್ ತಾಯಿ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆದರಿಕೆ ಹಾಕಿದ ಕಿಡಿಗೇಡಿಗಾಗಿ ಮಾದನಾಯಕನಹಳ್ಳಿ ಪೊಲೀಸರು ಹುಡುಕಾಟ ಕೈಗೊಂಡಿದ್ದಾರೆ.
ಇನ್ನೂ ದೀಪಿಕಾ ದಾಸ್ ಅವರು ನಾಗಿಣಿ ಸೀರಿಯಲ್ ನಿಂದ ಜನಮನ್ನಣೆ ಪಡೆದಿದ್ದರು. ಹಾಗೂ ಬಿಗ್ ಬಾಸ್ ಸ್ಪರ್ಧಿಯು ಆಗಿದ್ದರು.
ನಿಮ್ಮ ಪ್ರತಿಕ್ರಿಯೆ ಏನು?






