ನಿಮ್ಮ ಪರಿಶ್ರಮ 18 ವರ್ಷಗಳಿಂದ ನೋಡುತ್ತಿದ್ದೇವೆ, ಈ ಸಲ ಕಪ್ ನಮ್ದೇ: ಡಿ.ಕೆ ಶಿವಕುಮಾರ್

ಐಪಿಎಲ್ 18ರಲ್ಲಿ ಕಪ್ ಗೆಲ್ಲುವ ಫೇವರಿಟ್ ತಂಡವಾಗಿ ಆರ್ಸಿಬಿ ಕಾಣಿಸಿಕೊಂಡಿದೆ. ಫೈನಲ್ಗೆ ಮೊದಲ ತಂಡವಾಗಿ ಲಗ್ಗೆ ಇಟ್ಟಿದೆ. ಇದೀಗ ಪಂಜಾಬ್ನ ಬಗ್ಗು ಬಡಿದು ಗೆಲುವಿನ ಕಿರೀಟ ಮುಡಿಗೇರಿಸಿಕೊಳ್ಳಲು ಸಜ್ಜಾಗಿದೆ. ಫೈನಲ್ ಪಂದ್ಯದಲ್ಲಿ ಬೆಂಗಳೂರು ತಂಡ ಕಪ್ ಗೆದ್ದು ಬರಲಿ ಅಂತ ಅಭಿಮಾನಿಗಳ ಪ್ರಾರ್ಥನೆ ಕೂಡ ಜೋರಾಗಿದೆ.
ಬೆಂಗಳೂರು ರಾಯಲ್ ಚಾಲೆಂಜರ್ಸ್ (RCB) ಅಂದ್ರೆ ಬರೀ ಕ್ರಿಕೆಟ್ ಟೀಂ ಅಲ್ಲ. ಅದೊಂದು ಎಮೋಷನ್. 18 ವರ್ಷದಿಂದ ಕೋಟ್ಯಾಂತರ ಅಭಿಮಾನಿಗಳು ಆರಾಧಿಸುತ್ತಿರೋ ತಂಡ. ಸದ್ಯ ಐಪಿಎಲ್ ಸೀಸನ್ 18ರಲ್ಲಿ ಆರ್ಸಿಬಿ ಫೈನಲ್ ಪ್ರವೇಶಿಸಿದ್ದು, ಕಪ್ ಗೆಲ್ಲೋ ನಂಬಿಕೆ ಹೆಚ್ಚಾಗಿದೆ.
ಅದರಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಆರ್ಸಿಬಿ ತಂಡದ ಜೆರ್ಸಿ ಧರಿಸಿ ಮಾತನಾಡಿದ್ದು, ಕಳೆದ 18 ವರ್ಷಗಳಿಂದ ಆರ್ಸಿಬಿ ತಂಡ ಐಪಿಎಲ್ ಚಾಂಪಿಯನ್ಶಿಪ್ ಗೆಲ್ಲಲಿ ಅಂತ ಹಾರೈಸುತ್ತಿದ್ದೇವೆ, ಇವತ್ತು ಮತ್ತೊಂದು ಅವಕಾಶ, ಇಡೀ ಕರ್ನಾಟಕ ಮಾತ್ರ ಅಲ್ಲ ಭಾರತವೂ ನಿಮ್ಮೊಂದಿಗಿದೆ, ನಿಮ್ಮ ಪರಿಶ್ರಮ ಗಮನಿಸುತ್ತಿದ್ದೇವೆ, ಗೆಲುವು ನಿಮ್ಮದೇ, ಈ ಸಲ ಕಪ್ ನಮ್ದೇ ಎಂದು ಶಿವಕುಮಾರ್ ಶುಭ ಹಾರೈಸಿದ್ದಾರೆ.
ಆರ್ಸಿಬಿ ಕೇವಲ ಜೆರ್ಸಿ ಅಲ್ಲ, ಅದರ ಮೇಲೆ ಮಿಲಿಯನ್, ಮಿಲಿಯನ್ ಡ್ರೀಮ್ಗಳು ಇವೆ. ನಾವು ನಿಮ್ಮೊಂದಿಗೆ ಇದ್ದೇವೆ. ಕರ್ನಾಟಕ ಹಾಗೂ ಇಲ್ಲಿನ ಸರ್ಕಾರವೆಲ್ಲಾ ನಿಮ್ಮೊಂದಿಗೆ ನಿಂತಿದೆ. ಆರ್ಸಿಬಿ ಹುಡುಗರೇ ತವರಿಗೆ ಕಪ್ ಗೆದ್ದುಕೊಂಡು ಬನ್ನಿ. ಟ್ರೋಫಿಗಾಗಿ ಕರ್ನಾಟಕದ ಕೋಟಿ ಕೋಟಿ ಜನರು ಹಾಗೂ ನಾನು ಕಾಯುತ್ತಿದ್ದೇನೆ. ಎಲ್ಲರಿಗೂ ಆಲ್ ದೀ ಬೆಸ್ಟ್ ಎಂದು ಡಿ.ಕೆ ಶಿವಕುಮಾರ್ ಅವರು ಶುಭ ಹಾರೈಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






