ಮಳೆಗಾಲದಲ್ಲಿ ಒದ್ದೆ ಬಟ್ಟೆಯಿಂದ ವಾಸನೆ ಬರ್ತಾಯಿದಿಯಾ? ಚಿಂತಿಸಬೇಡಿ ಇಲ್ಲಿದೆ ಸುಲಭ ಪರಿಹಾರ

ಜುಲೈ 19, 2025 - 07:00
 0  10
ಮಳೆಗಾಲದಲ್ಲಿ ಒದ್ದೆ ಬಟ್ಟೆಯಿಂದ ವಾಸನೆ ಬರ್ತಾಯಿದಿಯಾ? ಚಿಂತಿಸಬೇಡಿ ಇಲ್ಲಿದೆ ಸುಲಭ ಪರಿಹಾರ

ಮಳೆಗಾಲದಲ್ಲಿ ಬಟ್ಟೆ ಒಣಗಿಸುವುದು ಕಷ್ಟವಾಗುತ್ತಿದ್ದು, ಹೀಗೆ ಒಗೆದ ಬಟ್ಟೆಗಳಲ್ಲಿ ವಾಸನೆ ಬರಬೇಕೆಂಬೂ ದೊಡ್ಡ ಸಮಸ್ಯೆಯಾಗಿರುತ್ತದೆ. ಸೂರ್ಯನ ಬೆಳಕು ಮತ್ತು ಗಾಳಿಯ ಕೊರತೆಯಿಂದ ಬಟ್ಟೆಗಳು ತಡವಾಗಿ ಒಣಗುತ್ತವೆ ಮತ್ತು ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಹೆಚ್ಚಾಗಿ ಕೆಟ್ಟ ವಾಸನೆ ಉಂಟಾಗುತ್ತದೆ.

 ಮಳೆಗಾಲದಲ್ಲಿ ಬಟ್ಟೆ ವಾಸನೆ ಬರದಂತೆ ತಡೆಯಲು ಕೆಲವು ಸೂಕ್ತ ಸಲಹೆಗಳು:

 ಬಟ್ಟೆಗಳನ್ನು ರಾಶಿಯಾಗಿ ಹಾಕಬೇಡಿ: ಒಗ್ಗಟ್ಟಾಗಿ ಬಟ್ಟೆಗಳನ್ನು ಹಾಕುವುದರಿಂದ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಹೆಚ್ಚುತ್ತದೆ, ಇದರಿಂದ ವಾಸನೆ ಬರುತ್ತದೆ.

 ಹೆಚ್ಚು ಹೊತ್ತು ಬಟ್ಟೆ ನೆನೆಸಬೇಡಿ: ಬಟ್ಟೆಗಳನ್ನು ಹೆಚ್ಚು ಹೊತ್ತು ನೀರಿನಲ್ಲಿ ನೆನೆಸುವುದರಿಂದ ಬ್ಯಾಕ್ಟೀರಿಯಾಗಳು ಸಂಗ್ರಹವಾಗುತ್ತವೆ ಮತ್ತು ವಾಸನೆ ಬರಲು ಕಾರಣವಾಗುತ್ತವೆ.

 ಅಡಿಗೆ ಸೋಡಾ ಬಳಸಿ: ಬಟ್ಟೆ ತೊಳೆಯುವಾಗ ಡಿಟರ್ಜೆಂಟ್ ಜೊತೆಗೆ ಅಡಿಗೆ ಸೋಡಾವನ್ನು ಸೇರಿಸುವುದರಿಂದ ಬಟ್ಟೆ ವಾಸನೆ ಕಡಿಮೆಯಾಗುತ್ತದೆ ಮತ್ತು ತಾಜಾಗಿರುತ್ತದೆ.

 ವಿನೆಗರ್ ಸೇರಿಸಿ: ಬಟ್ಟೆ ತೊಳೆಯುವ ನೀರಿಗೆ ಅರ್ಧ ಕಪ್ ವಿನೆಗರ್ ಹಾಕಿ ಅಥವಾ ಡಿಟರ್ಜೆಂಟ್ಗೆ ಸೇರಿಸಿ. ವಿನೆಗರ್ ಬ್ಯಾಕ್ಟೀರಿಯಾ ನಿರೋಧಕ ಗುಣಗಳನ್ನು ಹೊಂದಿದ್ದು, ವಾಸನೆ ತಡೆಯಲು ಸಹಾಯ ಮಾಡುತ್ತದೆ.

 ಬಟ್ಟೆ ಚೆನ್ನಾಗಿ ಒಣಗಿಸಿ: ತೆರೆದ ಕಿಟಕಿ, ಬಾಲ್ಕನಿ ಅಥವಾ ಫ್ಯಾನ್ ಬಳಸಿ ಬಟ್ಟೆಗಳನ್ನು ತ್ವರಿತವಾಗಿ ಒಣಗಿಸುವುದರಿಂದ ಕೆಟ್ಟ ವಾಸನೆ ಬಂದಂತೆ ತಡೆಯಬಹುದು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow