ಷೇರು ಮಾರುಕಟ್ಟೆಯಲ್ಲಿ ಚಮತ್ಕಾರ; 12 ಕೋಟಿ ಗುರಿಯಿಟ್ಟಿದ್ದ ಕಂಪನಿಗೆ ಸಾವಿರಾರು ಕೋಟಿ ಚಾಕ್‌ಪಾಟ್‌!

ಆಗಸ್ಟ್ 27, 2024 - 16:56
 0  15
ಷೇರು ಮಾರುಕಟ್ಟೆಯಲ್ಲಿ ಚಮತ್ಕಾರ; 12 ಕೋಟಿ ಗುರಿಯಿಟ್ಟಿದ್ದ ಕಂಪನಿಗೆ ಸಾವಿರಾರು ಕೋಟಿ ಚಾಕ್‌ಪಾಟ್‌!
FOCUS KARNATAKA Share Market

ಷೇರು ಮಾರುಕಟ್ಟೆಯಲ್ಲಿ ಚಮತ್ಕಾರ; 12 ಕೋಟಿ ಗುರಿಯಿಟ್ಟಿದ್ದ ಕಂಪನಿಗೆ ಸಾವಿರಾರು ಕೋಟಿ ಚಾಕ್‌ಪಾಟ್‌!

ಷೇರುಪೇಟೆ ಅಂದ್ರೆನೇ ಏಳು ಬೀಳುಗಳ ಆಟ. ಈ ಹಾವು ಏಣಿ ಆಟದಲ್ಲಿ ಪರಿಣಿತರಿದ್ದವರು ಮಾತ್ರ ಪ್ರವೇಶ ತೆಗೆದುಕೊಂಡರೆ ಮಾತ್ರ ಚಮತ್ಕಾರ ಮಾಡಬಹುದು. ಈ ಏಳು ಬೀಳಿನ ಭಾರತೀಯ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಚಮತ್ಕಾರವೊಂದು ನಡೆದಿದೆ. ಅದು ಯಮಹಾ ಟೂ ವೀಲ್ಹರ್ ಶೋ ರೂಮ್​ನಿಂದ.

ದೆಹಲಿಯ ದ್ವಾರಕಾದ ಪಾಲಂನಲ್ಲಿರುವ ಸಾನ್ವಿ ಆಟೋಮೊಬೈಲ್ ಕಂಪನಿ ಕೇವಲ ಎಂಟು ಜನ ಕಾರ್ಮಿಕರರನ್ನು ಹೊಂದಿದ ಕಂಪನಿ ಷೇರು ಮಾರುಕಟ್ಟೆಯಲ್ಲೊಂದು ಚಮತ್ಕಾರ ಮಾಡಿದೆ. ಎರಡೇ ಎರಡು ಶೋ ರೂಮ್ ಹೊಂದಿರುವ ಈ ಆಟೋಮೊಬೈಲ್ ಕಂಪನಿ ಇತ್ತೀಚೆಗೆ ಷೇರು ಮಾರುಕಟ್ಟೆ ಪ್ರವೇಶಿಸಿ ಇನ್ಷಿಯಲ್ ಪ್ರೈಸ್ ಆಫರಿಂಗ್​ನ ಅಂದ್ರೆ ಐಪಿಒ ಅದನ್ನು ಕನ್ನಡದಲ್ಲಿ ಸರಳವಾಗಿ ಹೇಳಬೇಕು ಅಂದ್ರೆ ಆರಂಭಿಕ ಸಾರ್ವಜನಿಕ ಕೊಡುಗೆಯ ಗುರಿಯಿಟ್ಟುಕೊಂಡಿತ್ತು. ಆದ್ರೆ ಆಗಿದ್ದು ಅಕ್ಷರಶಃ ಮಿರಾಕಲ್​.

ಯಮಹಾ ಶೋರೂಂ ತಾನಿಟ್ಟುಕೊಂಡಿದ್ದಕ್ಕಿಂತ 400 ಪಟ್ಟು ಜಾಸ್ತಿ IPO ಪಡೆದುಕೊಂಡಿದೆ, ಐಪಿಓ ಬಿಡುಗಡೆ ಮಾಡಿದ ಮೊದಲ ದಿನವೇ ಬರೋಬ್ಬರಿ 2700 ಕೋಟಿ ರೂಪಾಯಿ ಸಂಗ್ರಹವಾಗಿದೆ. ಸಣ್ಣ ಕಂಪನಿಯ ವಿಸ್ತರಣೆಗೆ ಭಾರಿ ಪ್ರಮಾಣದ ಬಂಡವಾಳ ಹರಿದು ಬಂದಿದ್ದು ಇದೇ ಮೊದಲಾಗಿದ್ದು, ಭಾರೀ ಅಚ್ಚರಿಗೆ ಕಾರಣವಾಗಿದೆ

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow