ಐಪಿಎಲ್ಗೆ ಟಕ್ಕರ್ ಕೊಡಲು ಮುಂದಾದ ಪಾಕ್ ಕ್ರಿಕೆಟ್ ಮಂಡಳಿ: ರೂಪುರೇಷೆ ರೆಡಿ!

ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಟಕ್ಕರ್ ಕೊಡಲು ಪಾಕ್ ಕ್ರಿಕೆಟ್ ಮಂಡಳಿ ಮುಂದಾಗಿದ್ದು, ಹೀಗಾಗಲೇ ರೂಪುರೇಷೆ ರೆಡಿ ಮಾಡಿದೆ.
ಏಪ್ರಿಲ್ 8 ರಿಂದ ಪಾಕಿಸ್ತಾನ್ ಸೂಪರ್ ಲೀಗ್ ಶುರುವಾಗಲಿದೆ. ಹಾಗೆಯೇ ಫೈನಲ್ ಪಂದ್ಯವನ್ನು ಮೇ 19 ರಂದು ಆಯೋಜಿಸಲು ನಿರ್ಧರಿಸಲಾಗಿದೆ. ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗುವುದು ಮಾರ್ಚ್ 15 ರಿಂದ. ಹಾಗೆಯೇ ಫೈನಲ್ ಪಂದ್ಯವು ಮೇ 25 ರಂದು ನಡೆಯುವ ಸಾಧ್ಯತೆ ಹೆಚ್ಚು. ಅಂದರೆ ಐಪಿಎಲ್ ಮಧ್ಯದಲ್ಲೇ ಪಿಎಸ್ಎಲ್ ಆಯೋಜಿಸಲು ಪಿಸಿಬಿ ಪ್ಲ್ಯಾನ್ ರೂಪಿಸಲಾಗಿದೆ.
2025ರ ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ವಿಷಯದಲ್ಲಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಭಾರೀ ಮುಖಭಂಗವಾಗಿದ್ದು, ಬಿಸಿಸಿಐ ಬೇಡಿಕೆಯಂತೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಐಸಿಸಿ ಸೂಚಿಸಿದೆ. ಅಲ್ಲದೆ ಇದಕ್ಕೆ ಪಿಸಿಬಿ ಕೂಡ ಸಮ್ಮತಿ ಸೂಚಿಸಿದೆ.
ಈ ಸಮ್ಮತಿ ಸೂಚನೆಯ ಬೆನ್ನಲ್ಲೇ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಟಕ್ಕರ್ ಕೊಡಲು ಮುಂದಾಗಿದೆ. ಅದರಂತೆ ಐಪಿಎಲ್ ಅವಧಿಯಲ್ಲೇ ಪಾಕಿಸ್ತಾನ್ ಸೂಪರ್ ಲೀಗ್ ಆಯೋಜಿಸುವ ಭಂಡ ನಿರ್ಧಾರವನ್ನು ತೆಗೆದುಕೊಂಡಿದೆ.
ನಿಮ್ಮ ಪ್ರತಿಕ್ರಿಯೆ ಏನು?






