ನಿರುದ್ಯೋಗಿಗಳಿಗೆ ಇಲ್ಲಿದೆ ಬಂಪರ್ ಉದ್ಯೋಗವಕಾಶ: ನೂರಕ್ಕೂ ಅಧಿಕ ಉದ್ಯೋಗಿಗಳ ನೇಮಕಾತಿ!

ನಿರುದ್ಯೋಗಿಗಳಿಗೆ ಇಲ್ಲಿದೆ ಬಂಪರ್ ಉದ್ಯೋಗವಕಾಶ ಇದ್ದು, ನೂರಕ್ಕೂ ಅಧಿಕ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಉದ್ಯೋಗ ಹುಡುಕುತ್ತಿರುವ ಪದವಿ ಹಾಗೂ ಸ್ನಾತಕೋತ್ತರ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಗುಡ್ನ್ಯೂಸ್ ಇಲ್ಲಿದೆ. ಸಾಮಾನ್ಯ ವಿಮಾ ಕಂಪನಿ ಉದ್ಯೋಗಗಳನ್ನು ಭರ್ತಿ ಮಾಡುತ್ತಿದ್ದು ಈ ಸಂಬಂಧ ಅರ್ಹರಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ.
ಹೀಗಾಗಿ ಕೆಲಸ ಹುಡುಕುತ್ತಿರುವವರು ಇವುಗಳಿಗೆ ಅಪ್ಲೇ ಮಾಡುವ ಮೂಲಕ ಹುದ್ದೆಗೆ ಆಯ್ಕೆ ಆಗಲು ಪ್ರಯತ್ನಿಸಬಹುದು.
ಜನರಲ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ, ಇಲ್ಲಿ ಹುದ್ದೆಗಳನ್ನು ತುಂಬಲಾಗುತ್ತಿದೆ. ಆದ ಕಾರಣ ಆಸಕ್ತರು ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಹುದ್ದೆಗಳ ಹೆಸರು- ಸಹಾಯಕ ಮ್ಯಾನೇಜರ್ (Scale I), ಎಚ್‌ಆರ್, ಇಂಜಿನಿಯರಿಂಗ್, ಜನರಲ್, ಲೀಗಲ್, ಐಟಿ, ಇನ್ಶೂರೆನ್ಸ್, ಮೆಡಿಕಲ್ (ಎಂಬಿಬಿಎಸ್), ಆಕ್ಚುರಿ ಮತ್ತು ಫೈನಾನ್ಸ್ನ ಹುದ್ದೆಗಳು ಇವೆ.
ಒಟ್ಟು ಹುದ್ದೆಗಳು– 110
ವೇತನ ಶ್ರೇಣಿ (ತಿಂಗಳು)- 50,925
ಈ ಕೆಲಸಗಳು ಒಟ್ಟು 110 ಇವೆ. ಇದರಲ್ಲಿ ಸಾಮಾನ್ಯ ವರ್ಗಕ್ಕೆ 43, ಇತರೆ ಹಿಂದುಳಿದ ವರ್ಗಗಳಿಗೆ 34, ಪರಿಶಿಷ್ಟ ಜಾತಿ ಹಾಗೂ ವರ್ಗಕ್ಕೆ 35 ಸೇರಿವೆ.
ವಿದ್ಯಾರ್ಹತೆ
ಸ್ನಾತಕೋತ್ತರ ಅಥವಾ ಎಂಬಿಎ, ಸಿಎ, ಸಿಎಫ್ಎ, ಎಂಕಾಮ್
ಎಲ್ಎಲ್ಎಂ (ಸಿವಿಲ್, ಸೈಬರ್)
ಬಿಇ, ಬಿಟೆಕ್, ಎಂ.ಇ, ಎಂಟೆಕ್, ಎಂಎಸ್, ಎಂಬಿಬಿಎಸ್,
ಆಯ್ಕೆ ಪ್ರಕ್ರಿಯೆ ಹೇಗಿದೆ..?
ಆನ್ಲೈನ್ ಟೆಸ್ಟ್
ಗುಂಪು ಚರ್ಚೆ
ಸಂದರ್ಶನ,
ವೈದ್ಯಕೀಯ ಪರೀಕ್ಷೆ
ಈ ದಿನಾಂಕಗಳನ್ನು ನೆನಪಿಡಿ
ನೋಟಿಫಿಕೇಶನ್ ದಿನಾಂಕ- 04 ಡಿಸೆಂಬರ್ 2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- 19 ಡಿಸೆಂಬರ್ 2024
ಅರ್ಜಿ ಶುಲ್ಕಕ್ಕೆ ಕೊನೆ ದಿನಾಂಕ- 19 ಡಿಸೆಂಬರ್ 2024
ಈ ಹುದ್ದೆಗೆ ಸಂಬಂಧಿಸಿದ ಪರೀಕ್ಷೆ- 05 ಜನವರಿ 2025
ನಿಮ್ಮ ಪ್ರತಿಕ್ರಿಯೆ ಏನು?






