ಏರ್ಟೆಲ್, ಜಿಯೋಗೆ ಟಕ್ಕರ್ ಕೊಡಲು BSNL ಬಿಗ್ ಪ್ಲಾನ್! ಗ್ರಾಹಕರನ್ನು ಸೆಳೆಯಲುಬಿಗ್ ಆಫರ್ ಕೊಟ್ಟ BSNL

ಡಿಸೆಂಬರ್ 15, 2024 - 20:55
 0  19
ಏರ್ಟೆಲ್, ಜಿಯೋಗೆ ಟಕ್ಕರ್ ಕೊಡಲು BSNL ಬಿಗ್ ಪ್ಲಾನ್! ಗ್ರಾಹಕರನ್ನು ಸೆಳೆಯಲುಬಿಗ್ ಆಫರ್ ಕೊಟ್ಟ BSNL

ಸರ್ಕಾರಿ ಸ್ವಾಮ್ಯದ BSNL ತನ್ನ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಕೇವಲ 999ರೂಗೆ ರೀಚಾರ್ಜ್ ಮಾಡುವ ಮೂಲಕ ಅನೇಕ ಸೌಲಭ್ಯ ಪಡೆಯುವಂತೆ ಕೋರಿದೆ. 

ಸರ್ಕಾರಿ ಟೆಲಿಕಾಂ ಕಂಪನಿಯಾದ ಇದು ಏರ್​ಟೆಲ್, ಜಿಯೋ ಗ್ರಾಹಕರನ್ನು ತನ್ನಡೆಗೆ ಬರಮಾಡಿಕೊಳ್ಳಲು ಹಲವಾರು ಹೊಸ ಹೊಸ ಪ್ಲಾನ್​ಗಳನ್ನು ಪರಿಚಯಿಸುತ್ತಿದೆ. ಇದೀಗ ತನ್ನ ಗ್ರಾಹಕರಿಗಾಗಿ ಮತ್ತೊಂದು ಪ್ಲಾನ್ ಪರಿಚಯ ಮಾಡಿದೆ.

ಇಂಟರ್ನೆಟ್ ಉಪಯೋಗಿಸುವರಿಗಾಗಿ ಬಿಎಸ್​ಎನ್​ಎಲ್ 999 ರೂಪಾಯಿಯ ಹೊಸ ಪ್ಲಾನ್ ಪರಿಚಯಿಸಿದೆ. ಇದನ್ನು ಗ್ರಾಹಕರು ರಿಚಾರ್ಜ್ ಮಾಡಿಕೊಂಡರೇ 3 ತಿಂಗಳವರೆಗೆ ಇಂಟರ್ನೆಟ್ ಸಿಗುತ್ತದೆ. ಇದು ಒಟ್ಟು 3600 GB ಡೇಟಾವನ್ನು ಒಳಗೊಂಡಿರುತ್ತದೆ, ಅಂದರೆ ನೀವು ಪ್ರತಿ ತಿಂಗಳು 1200 GB ಡೇಟಾವನ್ನು ಬಳಕೆ ಮಾಡಬಹುದು. ಈ ಇಂಟರ್ನೆಟ್ 25 ಎಂಬಿಪಿಎಸ್ ವೇಗದಲ್ಲಿರುತ್ತದೆ. ಇದರ ಜೊತೆಗೆ ಅನಿಯಮಿತ ಕರೆಗಳನ್ನು ಆನಂದಿಸಬಹುದು.

ತಿಂಗಳಿಗೆ 1200 GB ಡೇಟಾ ಬಳಸಿದರೆ ಡೇಟಾ ವೇಗ 4 ಎಂಬಿಪಿಎಸ್​ಗೆ ಕಡಿಮೆ ಆಗುತ್ತದೆ. ಈ ಹೊಸ ಬ್ರಾಡ್‌ಬ್ಯಾಂಡ್ ಡೀಲ್ ಈಗ ಎಲ್ಲೆಡೆಯು ಬಳಕೆಯಲ್ಲಿದೆ. ನೀವು ಬಿಎಸ್​ಎನ್​ಎಲ್ ಗ್ರಾಹಕರು ಆಗಿದ್ದರೇ ಇದನ್ನು ಉಪಯೋಗಿಸಿಕೊಳ್ಳಬಹುದು. ಆ್ಯಪ್​ನಲ್ಲೂ ಈ ಆಫರ್ ಲಭ್ಯ ಇದೆ. ಇದು ಅಲ್ಲದೇ 1800-4444ಗೆ ಕರೆ ಮಾಡುವ ಮೂಲಕ ಲಾಭ ಪಡೆಯಬಹುದು.

ಬಿಎಸ್​ಎನ್​ಎಲ್ ತನ್ನ ನೆಟ್‌ವರ್ಕ್ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುತ್ತಿದ್ದು ಇದಕ್ಕಾಗಿ ಇತ್ತೀಚೆಗೆ, ಸುಮಾರು 51,000 ಹೊಸ 4G ಮೊಬೈಲ್ ಟವರ್‌ಗಳನ್ನು ಸ್ಥಾಪಿಸಿದ್ದಾರೆ. ಇದು ಅವರ ಬಳಕೆದಾರರಿಗೆ ಉತ್ತಮ ಮತ್ತು ಹೆಚ್ಚು ವಿಶ್ವಾಸಾರ್ಹ ಸಂಪರ್ಕವನ್ನು ಒದಗಿಸಲು ಸಹಾಯವಾಗುತ್ತಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow